BREAKING NEWS | ಹಳೆಯ ಶಿವಮೊಗ್ಗದಲ್ಲಿ ಒಂದೆ ಕುಟುಂಬದ ಮೂವರು ಆತ್ಮಹತ್ಯೆ ? ತಾಯಿ, ತಮ್ಮ , ಮಗ ಸಾವು

Three members of a family commit suicide in Old Shivamogga

BREAKING NEWS | ಹಳೆಯ ಶಿವಮೊಗ್ಗದಲ್ಲಿ ಒಂದೆ ಕುಟುಂಬದ ಮೂವರು ಆತ್ಮಹತ್ಯೆ ? ತಾಯಿ, ತಮ್ಮ , ಮಗ  ಸಾವು
Old Shivamogga , ಕ್ಲಾರ್ಕ್‌ ಪೇಟೆ, ಮೂವರು ಆತ್ಮಹತ್ಯೆ,

SHIVAMOGGA | MALENADUTODAY NEWS | Aug 13, 2024  ಮಲೆನಾಡು ಟುಡೆ  

ಹಳೆಯ ಶಿವಮೊಗ್ಗ ಕ್ಲಾರ್ಕ್‌ ಪೇಟೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ . ಮೃತರನ್ನ ಭುವನೇಶ್ವರಿ, ಮೋಹನ್ ಹಾಗೂ ದರ್ಶನ್‌ ಎಂದು ತಿಳಿದು ಬಂದಿದೆ. ಇವರು ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ.



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಶಿವಮೊಗ್ಗ ಕ್ಲಾರ್ಕ್‌ ಪೇಟೆ

ಭುವನೇಶ್ವರಿ ಹಾಗೂ ಅವರ ತಮ್ಮ ಹಾಗೂ ಮಗ ಸಾವನ್ನಪ್ಪಿದವರು  ಇವರು ವಿಷ ಸೇವಿಸಿ ಕಳೆದ ಭಾನುವಾರವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯ್‌ ಗ್ಯಾರೇಜ್‌ ಬಳಿ ಇರುವ ಮನೆಯಲ್ಲಿ ಮೂವರು ವಿಷ ಸೇವಿಸಿದ್ದಾರೆ. ಇವರ ಮನೆಯ ಕಡೆಯಿಂದ ಯಾವುದೇ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಬಂಧಿಕರೊಬ್ಬರು ಮನೆಯ ಬಳಿಗೆ ವಿಚಾರಿಸಲು ಬಂದಿದ್ದಾರೆ. ಈ ವೇಳೆ ಮೂವರು ಸಾವನ್ನಪ್ಪಿರುವ ವಿಷಯ ಗೊತ್ತಾಗಿದೆ. ತಕ್ಷಣವೇ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್‌ ಠಾಣೆ ಪೊಲೀಸರು ಆಗಮಿಸಿದ್ದು ಮಹಜರ್‌ ನಡೆಸ್ತಿದ್ದಾರೆ. ಇನ್ನೂ ಆತ್ಮಹತ್ಯೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ