ಇತಿಹಾಸದಲ್ಲಿ ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್ ಇದಾಗಿದೆ | ಬಿವೈಆರ್
This is the first budget in the history of the state to do injustice to Shivamogga in terms of budget

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 8, 2025
ಶಿವಮೊಗ್ಗ | ರಾಜ್ಯದ ಇತಿಹಾಸದಲ್ಲಿ ಬಜೆಟ್ ವಿಚಾರವಾಗಿ ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್ ಇದಾಗಿದೆ ಎಂದು ರಾಜ್ಯ ಸರ್ಕಾರದ ಬಜೆಟ್ ವಿರುದ್ದ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಆರೋಪಿಸಿದರು.
ಇಂದು ನಗದ ಡಿಸಿ ಕಚೇರಿಯ ಮುಂಬಾಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಬಜೆಟ್ ಜನ ವಿರೋಧಿ ಬಜೆಟ್ ಎಂದು ಆರೋಪಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಪ್ರಮುಖರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಸಂಸದರು ನಿನ್ನೆ ರಾಜ್ಯ ಸರ್ಕಾರದ ಮಂಡಿಸಿದ ಬಜೆಟ್ ನಿಂದ ಎಲ್ಲರಿಗೂ ನಿರಾಸೆಯಾಗಿದೆ. ಸಿದ್ದರಾಮಯ್ಯರವರು 4 ಲಕ್ಷ ಕೋಟಿ ಬಜೆಟ್‌ನ್ನು ಮಂಡಿಸಿದ್ದೇನೆಂದು ಸಂತಸ ಪಡುತ್ತಿದ್ದಾರೆ. ಆದರೆ ರಾಜ್ಯದ ಬಡವರಿಗೆ ಗೊತ್ತಾಗಿದೆ ಈ ಹಣವನ್ನು ನಮ್ಮಿಂದ ಪಡೆದು ಮತ್ತೆ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು. ಈ ಹಿಂದೆ ರೈತನೊಬ್ಬ ಒಂದು ಬೋರ್ವೆಲ್ ಕೊರೆಸಿ ಕರೆಂಟ್‌ಗಾಗಿ ಟಿ ಸಿ ಹಾಕಿಸಿಕೊಳ್ಳಬೇಕೆಂದರೆ 10 ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತಿತ್ತು, ಆದರೆ ಈಗ ಅದಕ್ಕೆ 3 ಲಕ್ಷ ರೂಪಾಯಿ ಖರ್ಚಾಗುತ್ತದೆ. ಎಲ್ಲಾ ವಸ್ತುಗಳ ದರಗಳನ್ನು ಸಹ ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣ ಅವರು ಜಾರಿ ಮಾಡಿದಂತಹ ಗ್ಯಾರಂಟಿ ಯೋಜನೆ ಕಾರ್ಯಕ್ರಮ .ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಬೆಲೆ ಏರಿಕೆಯನ್ನು ಹೆಚ್ಚು ಮಾಡುವ ಮೂಲಕ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು.
ಈ ಬಜೆಟ್‌ನಲ್ಲಿ ಚಂದ್ರಗುತ್ತಿ ದೇವಸ್ಥಾನಕ್ಕೆ ಪ್ರಾಧಿಕಾರ ಮಾಡುತ್ತೇನೆ ಎಂದು ಘೋಷಿಸಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ರಾಜ್ಯದ ಇತಿಹಾಸದಲ್ಲಿ ಬಜೆಟ್ ವಿಚಾರವಾಗಿ ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.
ಬಜೆಟ್‌ನಲ್ಲಿ ಧರ್ಮವನ್ನು ಓಲೈಸುವ ಕೆಲಸ ಆಗಿದೆ.
ಬಜೆಟ್‌ನಲ್ಲಿ ಒಂದು ಧರ್ಮವನ್ನು ಒಲೈಸುವ ಕೆಲಸ ನಡೆದಿದೆ. ಶಾದಿ ಭಾಗ್ಯ ಜಾರಿಗೆ ತಂದಿದ್ದಾರೆ. ಆದರೆ ಅದು ಅಲ್ಪ ಸಂಖ್ಯಾತರಿಗೆ ಮಾತ್ರ ಸೀಮಿತವಾಗಿದೆ. ಹಿಂದೂಗಳಲ್ಲೂ ಬಡವರಿದ್ದಾರೆ. ಆ ಭಾಗ್ಯವನ್ನು ಹಿಂದೂಗಳಿಗೂ ಕೊಡಬಹುದಿತ್ತು. ಯಡಿಯೂರಪ್ಪನವರು ಈ ಹಿಂದೆ ಧರ್ಮವನ್ನು ನೋಡದೆ ರಾಜ್ಯದ ಎಲ್ಲಾ ಹೆಣ್ಣು ಭಾಗ್ಯ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದರು ಎಂದರು.
SUMMARY | This is the first budget in the history of the state to do injustice to Shivamogga in terms of budget
KEYWORDS | budget, injustice, Shivamogga, by raghavendra,