This is not a Teaser or Trailer of UI. This is a warner| ಮತ್ತೆ ಹುಳ ಬಿಟ್ಟ ಉಪ್ಪಿ
The film is slated to release worldwide on 20 December. Meanwhile, the teaser of UI will be released on 2 December at 11:07 am.
SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 29, 2024 ಉಪ್ಪಿ ಎಂದಾಕ್ಷಣ ನೆನಪಿಗೆ ಬರೋದು ಅವರ ಸೀರಿಸ್ ಹಿಟ್ ಚಿತ್ರಗಳು. ಇದೀಗ ಅದೇ ರೀತಿಯ ಸನ್ಸೇಶನ್ನ್ ನೀಡಲು ಉಪೇಂದ್ರ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಂತಿದೆ. ಇಂತಹದ್ದೊಂದು ಕುತೂಹಲ ಮೂಡಲು ಕಾರಣವಾಗಿರುವುದು ಯುಐ ಸಿನಿಮಾದ ಟೀಸರ್
ಹೌದು, ಇದೇ ಡಿಸೆಂಬರ್ 20 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿರುವ UI ಸಿನಿಮಾ ಚಿತ್ರದ ಟೀಸರ್ ಒಂದು ಇದೇ ಡಿಸೆಂಬರ್ 2 ರಂದು ಬೆಳಿಗ್ಗೆ 11:07 ಕ್ಕೆ ರಿಲೀಸ್ ಆಗಲಿದೆ. ಇದರ ಬಗ್ಗೆ ಉಪೇಂದ್ರ ತಮ್ಮ ಫೇಸ್ಬುಕ್ ಫೋಸ್ಟ್‌ನಲ್ಲಿ ಮಾಹಿತಿ ಷೇರ್ ಮಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ This is not a Teaser or Trailer of UI, This is a warner ಎಂದು ಬರೆಯಲಾಗಿದೆ. ಇದೇ ಪೋಸ್ಟರ್‌ನ್ನ ಕೆವಿಎನ್ ಪ್ರೊಡಕ್ಷನ್ ಸಹ ರಿಲೀಸ್ ಮಾಡಿದ್ದೂ, ಅಲ್ಲಿಯು ಇದೆ ಲೈನ್‌ಗಳನ್ನ ಬರೆಯಲಿದೆ. ಸದ್ಯ ಈ ಕ್ಯಾಪ್ಶನ್ ಲೈನ್ ಅಭಿಮಾನಿಗಳ ತಲೆಯಲ್ಲಿ ಹೊಸ ಹುಳ ಹೊಕ್ಕುವಂತೆ ಮಾಡಿದೆ.
ಟೀಸರ್ ಅಲ್ಲ ಟ್ರೈಲರ್ ಅಲ್ಲ ವಾರ್ನರ್ ಅಂದರೆ ಏನಿದು ಮತ್ತೆ? ಅಂತಾ ಪ್ರಶ್ನಿಸುತ್ತಿರುವ ಫ್ಯಾನ್ಸ್ ಟೀಸರ್‌ನ್ನ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ಹಿಂದೆಯು ಉಪೇಂದ್ರ ಯುಐ ಸಿನಿಮಾದ ಟೀಸರ್ ಒಂದನ್ನ ಬಿಟ್ಟಿದ್ದರು. ಆ ಟೀಸರ್ ನಲ್ಲಿ ವಿಡಿಯೋ ಇರದೇ ಆಡಿಯೋ ಮಾತ್ರ ಕೇಳಿಸುತ್ತಿತ್ತು. ನಂತರ ಬಿಟ್ಟ ಟೀಸರ್ ವೊಂದರಲ್ಲಿ ನಲ್ಲಿ ವಿಡಿಯೋ ಆಡಿಯೋ ಎರಡು ಇತ್ತು. ಸದ್ಯ ಇದೀಗ ಉಪೇಂದ್ರ ಹಾಕಿರುವ ಕ್ಯಾಪ್ಷನನ್ನು ನೋಡಿಡ್ರೆ ಇದು ಯಾವ ರೀತಿ ಇರಬಹುದೆಂದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.
ಉಪೇಂದ್ರ ಉಪ್ಪಿ 2 ಬಳಿಕ ಯಾವುದೇ ಚಿತ್ರವನ್ನು ನಿರ್ದೇಶಿಸಿರಲಿಲ್ಲ . 9 ವರ್ಷದ ಬಳಿಕ ಯುಐ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಈ ಯು ಐ ಚಿತ್ರಕ್ಕೆ ಜಿ ಮನೋಹರನ್ ಹಾಗೂ ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
This is not a Teaser or Trailer of UI.
This is a ???????????????????????? ????????
On Dec 2nd at 11:07 AM ????????
Taking charge of Worldwide Screens from Dec 20th ❤????❤????#UiTheMovieOnDEC20th#UiTheMovie pic.twitter.com/6aN0kT6UGw — KVN Productions (@KvnProductions) November 28, 2024
SUMMARY| The film is slated to release worldwide on 20 December. Meanwhile, the teaser of UI will be released on 2 December at 11:07 am.
KEYWORDS| teaser of Ui, upendra, kannadamovies,