Shivamogga | ಜೋರಿತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ & ಉಪಾಧ್ಯಕ್ಷ ಎಲೆಕ್ಷನ್‌ ! ಏಕೆ ಗೊತ್ತಾ

Thirthahalli town panchayat president and vice-president election | ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗೀತಾ ರಮೇಶ್ ಈ ಅವಧಿ ಯಲ್ಲಿ ಉಪಾಧ್ಯಕ್ಷರಾದರೆ ಉಪಾಧ್ಯಕ್ಷರಾಗಿದ್ದ ರಹಮತುಲ್ಲ ಅಸಾದಿ ಅಧ್ಯಕ್ಷರಾಗಿ ಬದಲಾವಣೆ ಆಗಿದ್ದಾರೆ. 

Shivamogga | ಜೋರಿತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ & ಉಪಾಧ್ಯಕ್ಷ ಎಲೆಕ್ಷನ್‌ ! ಏಕೆ ಗೊತ್ತಾ
Thirthahalli town panchayat president and vice president election

SHIVAMOGGA | MALENADUTODAY NEWS | Aug 27, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇವತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ. ರೆಹಮತುಲ್ಲ  ಅಸಾದಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ, ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗೀತಾ ರಮೇಶ್ ಈ ಅವಧಿ ಯಲ್ಲಿ ಉಪಾಧ್ಯಕ್ಷರಾದರೆ ಉಪಾಧ್ಯಕ್ಷರಾಗಿದ್ದ ರಹಮತುಲ್ಲ ಅಸಾದಿ ಅಧ್ಯಕ್ಷರಾಗಿ ಬದಲಾವಣೆ ಆಗಿದ್ದಾರೆ. 

ಚುನಾವಣೆ ಪ್ರತಿಭಟನೆ 

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸೊಪ್ಪುಗುಡ್ಡೆ ರಾಘವೇಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಗಣೇಶ್ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ರಹಮತುಲ್ಲ ಆಸಾದಿ, ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್ ನಾಮಪತ್ರ ಸಲ್ಲಿಸಿದ್ದರು.  ಒಟ್ಟು 15 ಸ್ಥಾನವಿರುವ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 6 ಸ್ಥಾನ ಪಡೆದಿತ್ತು. ಕಾಂಗ್ರೆಸ್‌ 8 ಸ್ಥಾನ ಪಡೆದಿತ್ತು. ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಈ ನಡುವೆ ಬಿಜೆಪಿಯ ಸಂಸದ, ಶಾಸಕರು ಸೇರಿ ಬಿಜೆಪಿಯ ಬಲಾಬಲ 8 ಆಗುತ್ತಿತ್ತು. ಆದಾಗ್ಯು ಲೆಕ್ಕಾಚಾರದ ಗೆಲುವಿನಲ್ಲಿ ಕಾಂಗ್ರೆಸ್‌ ಮ್ಯಾಜಿಕ್‌ ನಂಬರ್‌ ಸಾಧಿಸಿದೆ. 

ಇದೇ ಕಾರಣಕ್ಕೆ ಕಾಂಗ್ರೆಸ್‌ ಸದಸ್ಯರನ್ನು ನಿನ್ನೆ ದಿನ ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು ಎಂದು ತೀರ್ಥಹಳ್ಳಿಯಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಇದರ ನಡುವೆ ಇವತ್ತು ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್‌ ಪಟ್ಟಣ ಪಂಚಾಯಿತಿಯನ್ನು ತನ್ನದಾಗಿಸಿಕೊಂಡಿದೆ. ಈ ನಡುವೆ ಚುನಾವಣಾ ಪ್ರಕ್ರಿಯೆ ವಿಳಂಬ ಮಾಡಿದ್ದಕ್ಕೆ ಕಾಂಗ್ರೆಸ್‌ ಸದಸ್ಯರೇ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. 

 



ಇನ್ನಷ್ಟು ಸುದ್ದಿಗಳು