ಸಾಯುತ್ತೇನೆ ಎಂದು ಭಾರತೀಪುರ ಸೇತುವೆ ಮೇಲೆ ಹೋಗಿ ನಿಂತವನ ರಕ್ಷಿಸಿದ 112 ತೀರ್ಥಹಳ್ಳಿ
Thirthahalli 112 police ,rescue man who attempted suicide
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024
ಶಿವಮೊಗ್ಗ ಜಿಲ್ಲೆಯ 112 ಪೊಲೀಸರಿಗೆ ಆಗಾಗ ಜೀವ ಉಳಿಸುವಂತಹ ಅದ್ಭುತ ಅವಕಾಶಗಳು ಅಪಾಯದ ಜೊತೆಜೊತೆಗೆ ಸಿಗುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಖಾಕಿ ಪಡೆ ತಮ್ಮ ಜೀವವನ್ನ ಪಣಕಿಟ್ಟು, ಅಪಾಯದಲ್ಲಿರುವ ಜೀವಗಳನ್ನ ರಕ್ಷಿಸಿದ್ದಿದೆ. ಇದಕ್ಕೀಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
ಈ ಹಿಂದೆ 112 ಶಿವಮೊಗ್ಗ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದವರನ್ನ, ಆಕಸ್ಮಿಕವಾಗಿ ಸಂಕಷ್ಟಕ್ಕೆ ಸಿಲುಕಿದವರ ಜೀವ ಉಳಿಸಿತ್ತು. ಅದೇ ರೀತಿಯಲ್ಲಿ 11.12.2024ರಂದು ತೀರ್ಥಹಳ್ಳಿ ಭಾರತೀಪುರ ಸೇತುವೆ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೋದ ವ್ಯಕ್ತಿಯನ್ನ ರಕ್ಷಣೆ ಮಾಡಿದೆ.
ಘಟನೆ ನಡೆದ ದಿನ 112ಗೆ ಕರೆಯೊಂದು ಬಂದಿದೆ. ತಮ್ಮ ಮಗನು ಆತ್ಮಹತೈ ಮಾಡಿಕೊಳ್ಳುಲು ಭಾರತಿಪುರ ಸೇತುವೆ ಮೇಲೆ ನಿಂತಿರುವುದಾಗಿ ಕರೆ ಮಾಡಿದವರು ತಿಳಿಸಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ, ಸಂಬಂಧಪಟ್ಟ ವ್ಯಕ್ತಿಯನ್ನ ಅವರ ಸಂಬಂಧಿಕರ ಸಹಾಯದಿಂದ ರಕ್ಷಿಸಿ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ.
SUMMARY | Thirthahalli: 112 police personnel rescue man who attempted suicide
KEY WORDS | Thirthahalli 112 police ,rescue man who attempted suicide