ಬಂಗಾರ ದೋಚಿ ಕಳ್ಳ ಪರಾರಿ, ವಾರದೊಳಗೆ ಮಾಡಿದರು ಪೊಲೀಸರು ಕಳ್ಳನನ್ನು ಶಿಕಾರಿ
Shikaripura rural police have arrested a thief who had stolen silver, gold and cash worth lakhs of rupees from Shikaripura within a week. The accused has been identified as Shivaraj (28).
SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 4, 2025
ಶಿಕಾರಿಪುರದಲ್ಲಿ ಲಕ್ಷಾಂತರ ಮೌಲ್ಯದ ಬೆಳ್ಳಿ ಬಂಗಾರ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದ ಕಳ್ಳನನ್ನು ಒಂದು ವಾರದೊಳಗೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಶಿವರಾಜ್ (28) ಬಂಧಿತ ಆರೋಪಿಯಾಗಿದ್ದಾನೆ.
ಏನಿದು ಪ್ರಕರಣ
2024 ರ ಡಿಸೆಂಬರ್ 25 ರಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು.
ಮನೆಯ ಮೇಲ್ಚಾವಣಿಯಲ್ಲಿದ್ದ ಖಾಲಿ ಜಾಗದಿಂದ ಮನೆಯೊಳಗೆ ಇಳಿದಿದ್ದ ಕಳ್ಳ ಬೀರುವಿನ ಪಕ್ಕದಲ್ಲಿದ್ದ ಬೀಗದ ಕೀ ಮೂಲಕ ಬೀರುವನ್ನು ತೆರೆದು ಲಕ್ಷಾಂತರ ಮೌಲ್ಯದ ಬೆಳ್ಳಿ, ಬಂಗಾರ ಮತ್ತು ನಗದು ಹಣವನ್ನು ದೋಚಿ ಪರಾರಿಯಾಗಿದ್ದ.
ಈ ಹಿನ್ನೆಲೆ ದಾಖಲಾಗಿದ್ದ ಕೇಸ್‌ನ ಸಂಬಂಧ ಆರೋಪಿಯ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಬಿರುಸಿನ ಕಾರ್ಯಾಚರಣೆ ಆರಂಭಿಸಿದ ಪೊಲೀಸರ ಕೈಗೆ ಶಿಕಾರಿಪುರದ ಸಾಲೂರು ಗ್ರಾಮದ ನಿವಾಸಿ ಶಿವರಾಜ್ ಸಿಕ್ಕಿಬಿದ್ದಿದ್ದಾನೆ.
ಆತನಿಂದ ಅಂದಾಜು ಮೌಲ್ಯ 6,30,000 ರೂಗಳ 90.4 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಅಂದಾಜು ಮೌಲ್ಯ 6,000 ರೂಪಾಯಿಗಳ 60 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹಾಗು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 80,000/- ರೂಗಳ ಹಿರೋ ಹೆಚ್.ಎಫ್.ಡಿಲೇಕ್ಸ್ ಬೈಕ್ ಸೇರಿ ಒಟ್ಟು ಅಂದಾಜು ಮೌಲ್ಯ 7,16,000/- ರೂಗಳ ಮಾಲನ್ನು ವಶಪಡಿಸಿಕೊಂಡಿದ್ದಾರೆ.
SUMMARY | Shikaripura rural police have arrested a thief who had stolen silver, gold and cash worth lakhs of rupees from Shikaripura within a week. The accused has been identified as Shivaraj (28).
KEYWORDS | Shikaripura, police, thief, arrested,