ಮಾರುತಿಪುರದಲ್ಲಿ ಹಗಲು ಹೊತ್ತಿನಲ್ಲೆ ನಡೆಯಿತು ಈ ಘಟನೆ
Theft took place at Maruthipura in Hosanagara taluk of Shivamogga district in broad daylight on Wednesday
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 1, 2024
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಮಾರುತಿಪುರದಲ್ಲಿ ಕಳೆದ ಬುಧವಾರ ಹಗಲು ಹೊತ್ತಿನಲ್ಲೆ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ನಿವಾಸಿ ಸುಧೀಂದ್ರ ಹೊಳ್ಳ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಾರುತೀಪುರದಲ್ಲಿ ಹೋಟೆಲ್ ಇಟ್ಟುಕೊಂಡಿರುವ ಇವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಇನ್ನೂ ಕಳುವಾದ ಸಮಯದಲ್ಲಿ ಸುಧೀಂದ್ರರವರ ಪತ್ನಿ ಮಗನ ಶಾಲೆಯಲ್ಲಿ ಆಯೋಜಿಸಿದ್ದೆ ಪೇರೆಂಟ್ಸ್ ಮೀಟಿಂಗ್‌ಗೆ ತೆರಳಿದ್ದರು. ಅವರು ವಾಪಸ್ ಆದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಮನೆಗೆ ನುಗ್ಗಿ ಮನೆಯ ಬೀರುವಿನಲ್ಲಿದ್ದ 60 ಗ್ರಾಂ ತೂಕದ ಎರಡು ನೆಕ್‌ಲೇಸ್, 10 ಗ್ರಾಂ ತೂಕದ ಮುತ್ತಿನ ಸರ, 36 ಗ್ರಾಂ ತೂಕದ ಬಳೆ, 20 ಗ್ರಾಂ ತೂಕದ ಸರ, 12 ಗ್ರಾಂ ತೂಕದ ಮೂರು ಉಂಗುರ ಸೇರಿದಂತೆ ಒಟ್ಟು 150 ಗ್ರಾಂ ತೂಕದ ಆಭರಣಗಳನ್ನ ಕದ್ದೊಯ್ದಿದ್ದಾರೆ.
ಹೈವೇ ಪಕ್ಕದಲ್ಲಿಯೇ ಇರುವ ಮನೆಯಲ್ಲಿ ಕಳ್ಳತನವಾಗಿರುವುದು ಸ್ಥಳೀಯರಲ್ಲಿಯು ಆತಂಕ ಮೂಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
SUMMARY | Theft took place at Maruthipura in Hosanagara taluk of Shivamogga district in broad daylight on Wednesday.
KEYWORDS | Theft at Maruthipura ,in Hosanagara taluk of Shivamogga district,