ಹೈದರಾಬಾದ್‌ನಿಂದ ಹೊಸನಗರಕ್ಕೆ ವಾಪಸ್‌ ಬಂದ ಮನೆಯ ಮಾಲೀಕರಿಗೆ ಎದುರಾಗಿತ್ತು ಶಾಕ್

Theft at a house , Goragodu village, Hosanagar, in Hyderabad

ಹೈದರಾಬಾದ್‌ನಿಂದ ಹೊಸನಗರಕ್ಕೆ ವಾಪಸ್‌ ಬಂದ ಮನೆಯ ಮಾಲೀಕರಿಗೆ ಎದುರಾಗಿತ್ತು ಶಾಕ್
Theft at a house , Goragodu village, Hosanagar, in Hyderabad

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 27, 2024 ‌‌ 

ಶುಭಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೈದರಾಬಾದ್‌ಗೆ ಹೋಗಿ ವಾಪಸ್‌ ಬಂದ ಹೊಸನಗರದ ಗೋರಗೋಡು ಗ್ರಾಮದ ನಿವಾಸಿಯೊಬ್ಬರಿಗೆ ಆಘಾತವೊಂದು ಎದುರಾಗಿತ್ತು. ಏಕೆಂದರೆ ಅವರ ಮನೆಯ ಹೆಂಚು ತೆಗೆದು ಬರೋಬ್ಬರಿ 9 ಲಕ್ಷ ರೂಪಾಯಿ ಮೌಲ್ಯದ ಒಡವೆ ಕಳ್ಳತನ ಮಾಡಲಾಗಿದೆ. 

ಸ್ಥಳೀಯ ವರದಿ ಪ್ರಕಾರ,  ಮನೆಯಲ್ಲಿ ಯಾರೂ ಇಲ್ಲದ್ದನ್ನು ಹೊಂಚು ಹಾಕಿರುವ ಕಳ್ಳರು ಪ್ರತಿಭಾ ಕೃಷ್ಟೋಜಿರಾವ್ ಎಂಬುವರ ಮನೆಯಲ್ಲಿ ಡಿಸೆಂಬರ್‌ 25 ರಂದು ಕಳ್ಳತನ ಮಾಡಿದ್ದಾರೆ. ಈ ವೇಳೆ ಮನೆಯವರು ಹೈದರಾಬಾದ್‌ಗೆ ತೆರಳಿದ್ದರು. ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿರುವ ಕಳ್ಳರು ಗೋದ್ರೇಜ್ ಬೀರುವಿನಲ್ಲಿಟ್ಟಿದ್ದ ಬಳೆ, ಸರ, ಓಲೆ ಸೇರಿದಂತೆ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದಾರೆ.

ಹೈದರಬಾದ್‌ನಿಂದ ವಾಪಸ್‌ ಬಂದ ಬಳಿಕ ನಡೆದ ಘಟನೆ ಬೆಳಕಿಗೆ ಬಂದಿದ್ದು ಈ ಸಂಬಂಧ ಹೊಸನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

SUMMARY |Theft at a house in Goragodu village, Hosanagar while the homeowner was away in Hyderabad

KEY WORDS | Theft at a house , Goragodu village, Hosanagar, in Hyderabad