ಸಾವು ಬದುಕಿನ ನಡುವೆ ಹೋರಾಡ್ತಿದ್ದಾನೆ ರಿಷಬ್‌ ಪಂತ್‌ರ ಜೀವ ಉಳಿಸಿದ್ದ ವ್ಯಕ್ತಿ | ಆಗಿದ್ದೇನು

The man who saved Rishabh Pant's life by hospitalising him in a car accident is now battling for his life.

ಸಾವು ಬದುಕಿನ ನಡುವೆ ಹೋರಾಡ್ತಿದ್ದಾನೆ ರಿಷಬ್‌ ಪಂತ್‌ರ ಜೀವ ಉಳಿಸಿದ್ದ ವ್ಯಕ್ತಿ  | ಆಗಿದ್ದೇನು
The man who saved Rishabh Pant's life is battling for life and death

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 13, 2025

ಈ ಹಿಂದೆ ರಿಷಬ್‌ ಪಂತ್‌ ರವರ ಕಾರು ಅಪಘಾತವಾಗಿದ್ದ ಸಂದರ್ಭದಲ್ಲಿ ರಿಷಬ್‌ ಪಂತ್‌ರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದ ವ್ಯಕ್ತಿ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಡಿಸೆಂಬರ್‌ 2022 ರಲ್ಲಿ ದೆಹಲಿಯಲ್ಲಿ ರಿಷಬ್‌ ಪಂತ್‌ ರವರ ಕಾರು ಅಪಘಾತವಾಗಿತ್ತು. ಈ ಸಂದರ್ಭದಲ್ಲಿ  ಇಬ್ಬರು ಯುವಕರು ರಿಷಬ್‌ ಪಂತ್‌ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ನಂತರ ರಿಷಬ್‌ ಪಂತ್‌ ಅವರಿಬ್ಬರನ್ನು ಹುಡುಕಿ ಅವರಿಗೆ ಹೊಸ ಬೈಕ್‌ನ್ನು ಸಹ ಗಿಫ್ಟ್‌ ನೀಡಿದ್ದರು. ಆದರೆ ಅದರಲ್ಲೊಬ್ಬ ಯುವಕ ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಆಗಿದ್ದೇನು

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಚಾ ಬಸ್ತಿ ಗ್ರಾಮದ ರಜತ್‌  ಮನು ಕಶ್ಯಪ್‌ ಎಂಬ ಯವತಿಯನ್ನು ಪ್ರೀತಿಸುತ್ತಿದ್ದ. ಆದರೆ  ಯುವತಿಯ ಕುಟುಂಬ ಜಾತಿ ಭೇದದ ಕಾರಣದಿಂದ ಅವರ ಮದುವೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಇದರಿಂದ ಮನನೊಂದ ರಜತ್‌ ಆತನ  ಗೆಳತಿಯೊಂದಿಗೆ ಫೆಬ್ರವರಿ 9 ರಂದು ವಿಷ ಸೇವಿಸಿದ್ದಾನೆ ಎನ್ನಲಾಗಿದೆ. 

ವಿಷಯ ತಿಳಿದ ಬೆನ್ನಲ್ಲೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಮನು ಕಶ್ಯಪ್ ಚಿಕತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ರಜತ್‌ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇದೇ ವೇಳೆ ರಜತ್‌ ತನ್ನ ಮಗಳನ್ನು ಅಪಹರಿಸಿ ವಿಷ ಕುಡಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ.

SUMMARY | The man who saved Rishabh Pant's life by hospitalising him in a car accident is now battling for his life.

KEYWORDS | Rishabh Pant,  accident, national news,