ಇವತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಫಲಿತಾಂಶ | ವಿವರ ಇಲ್ಲಿದೆ

SSLC exam-2 results will be announced today in Bengaluru

ಇವತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಫಲಿತಾಂಶ | ವಿವರ ಇಲ್ಲಿದೆ
karnataka sslc exam 2 result 2024, ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಫಲಿತಾಂಶ

SHIVAMOGGA | MALENADUTODAY NEWS | Jul 10, 2024  

ಇವತ್ತು ರಾಜ್ಯ ರಾಜಧಾನಿ ಬೆಂಗಳೂರುನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ರ ಫಲಿತಾಂಶವನ್ನು ಪ್ರಕಟ ಮಾಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಪ್ರಕಟಣೆ ನೀಢಲಾಗಿದ್ದು ಇವತ್ತು ಬೆಳಗ್ಗ 11.30ಕ್ಕೆ ಫಲಿತಾಂಶ ಹೊರಬೀಳಲಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಕಳೆದ ಜೂನ್‌ 14 ರಿಂದ 22 ರವರೆಗೆ ರಾಜ್ಯದ 724 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು.  ಒಟ್ಟಾರೆ 1.44 ಲಕ್ಷ ಬಾಲಕರು, 79,148 ಬಾಲಕಿಯರು ಸೇರಿದಂತೆ 2.23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 13,085 ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಗಾಗಿ ಎರಡನೇ ಪರೀಕ್ಷೆಗೆ ಹಾಜರಾಗಿದ್ದರು.

ಇನ್ನೂ ಇವತ್ತು ವಿದ್ಯಾರ್ಥಿಗಳು ರಿಸಲ್ಟ್‌ ನೋಡಲು https://karresults.nic.in  ನಲ್ಲಿ ಕ್ಲಿಕ್‌ ಮಾಡಬಹುದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

The SSLC exam-2 results will be announced today in Bengaluru

ಇವತ್ತಿನ ರಾಶಿ ಭವಿಷ್ಯ | ನಿತ್ಯ ಜ್ಯೋತಿಷ್ಯದಲ್ಲಿ ಯಾವ ರಾಶಿಗೆ ...