ವಿಶೇಷವಾಗಿ ಕಾಣುವ ಈ ಮಾರಿಕಾಂಬೆಯ ಜಾತ್ರೆ ಆರಂಭ | ವಿವರವಾಗಿ ಓದಿ

Tavanandi Shri Marikamba Devi jatre , village of Sorab taluk

ವಿಶೇಷವಾಗಿ ಕಾಣುವ ಈ ಮಾರಿಕಾಂಬೆಯ ಜಾತ್ರೆ ಆರಂಭ | ವಿವರವಾಗಿ ಓದಿ
Tavanandi Shri Marikamba Devi jatre , village of Sorab taluk

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಶಿವಮೊಗ್ಗದಲ್ಲಿ ಈಗಾಗಲೇ ಹಲವೆಡೆ ಮಾರಿಜಾತ್ರೆಗಳು ವಿಜ್ರಂಭಣೆಯಿಂದ ನಡೆದಿದೆ. ಇದೀಗ ಸೊರಬ ತಾಲ್ಲೂಕು ತವನಂದಿ ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ದೇವಿಯ  ಜಾತ್ರಾ ಮಹೋತ್ಸವ ಆರಂಭವಾಗಿದೆ. ಇವತ್ತು ಅಂದರೆ 18-02-2025 ಮಂಗಳವಾರದಿಂದ 22-02-2025ನೇ ಶನಿವಾರದವರೆಗೆ ಜಾತ್ರೆ ನಡೆಯಲಿದೆ. 

ಈ ಜಾತ್ರೆಯಲ್ಲಿ ಉಡಿ ತುಂಬುವುದು ವಿಶೇಷವಾಗಿದ್ದು, ತವನಂದಿ ಗ್ರಾಮದ ಪರವಾಗಿ ಉಡಿ ತುಂಬಿದ ನಂತರ ಕೆರೆಹಳ್ಳಿ  ನಾಡಿಗೇರ್ ಕುಟುಂಬದವರಿಂದ ಉಡಿ ತುಂಬುವರು. ಬಳಿಕ ಕುಳಗ, ಕೆರೆಕೊಪ್ಪ, ತೆಕ್ಕೂರು, ಬಿಳಗೋಡು,ಮತ್ತು ಚಿತ್ರಟ್ಟೆಹಳ್ಳಿಯ ಗ್ರಾಮದವರು ಉಡಿ ತುಂಬುವರು  ಬಳಿಕ ಮಾರಿಕಾಂಬ ದೇವಿಯ ರಥಾರೋಹಣ ನಡೆದು ರಥೋತ್ಸವ ಆರಂಭವಾಗಲಿದೆ. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಲಿರುವ ರಥೋತ್ಸವದ ನಂತರ ಅಮ್ಮನವರು ಗದ್ದಿಗೆ ಏರಲಿದ್ದಾರೆ. ಅಂತಿಮವಾಗಿ  ದಿನಾಂಕ 22-02-2025 ನೇ ಶನಿವಾರ  ಸಂಜೆ 6 ಗಂಟೆಗೆ ಅಮ್ಮನವರ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

SUMMARY |  Tavanandi Shri Marikamba Devi jatre , village of Sorab taluk

KEY WORDS |  Tavanandi Shri Marikamba Devi jatre , village of Sorab taluk