ಡಾ.ಸರ್ಜಿ ಹೆಸರಲ್ಲಿ ಡಾಕ್ಟರ್‌ಗಳಿಗೂ ವಿಷಕಾರಿ ಸ್ವೀಟ್ಸ್‌ ಬಾಕ್ಸ್‌ ಕೊರಿಯರ್‌ | MLC ಏನಂದ್ರು

Sweet box sent by anonymous person, Dr Dhananjay Sarji, FIR filed at Kote Police Station

ಡಾ.ಸರ್ಜಿ ಹೆಸರಲ್ಲಿ ಡಾಕ್ಟರ್‌ಗಳಿಗೂ ವಿಷಕಾರಿ ಸ್ವೀಟ್ಸ್‌ ಬಾಕ್ಸ್‌ ಕೊರಿಯರ್‌ | MLC ಏನಂದ್ರು
Sweet box sent by anonymous person, Dr Dhananjay Sarji, FIR filed at Kote Police Station

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಡಾ.ಧನಂಜಯ್‌ ಸರ್ಜಿಯವರ ಹೆಸರಿನಲ್ಲಿ ಬಂದ ಸ್ವೀಟ್‌ ಪಾರ್ಸಲ್‌ ವಿಚಾರ ಸಂಬಂಧ ಈಗಾಗಲೇ ಕೋಟೆ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಇದರ ಬೆನ್ನಲ್ಲೆ ಡಾ.ಧನಂಜಯ್‌ ಸರ್ಜಿಯವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. 

ಡಾ.ಸರ್ಜಿ ಹೆಸರಲ್ಲಿ ಕೊರಿಯರ್‌ ಮೂಲಕ ಬಂತು ಪಾಯ್ಸನ್‌ ಸ್ವೀಟ್‌ ಬಾಕ್ಸ್‌ ? ಕೋಟೆ ಠಾಣೆಯಲ್ಲಿ FIR |

ಶಿವಮೊಗ್ಗ ನಗರದಲ್ಲಿ ಮಾತನಾಡಿದ MLC ಡಾ.ಧನಂಜಯ್‌ ಸರ್ಜಿ, ಈ ವಿಚಾರ ತಮಗೆ ಡಿಎಸ್‌ ಅರುಣ್‌ರವರಿಂದ ಗೊತ್ತಾಯ್ತು ಎಂದಿದ್ದಾರೆ. ಮೊದಲು ಹೊಸ ವರುಷದ ಶುಭಾಶಯದ ಸ್ಟಿಕರ್‌ ಇರುವ ಸ್ವೀಟ್‌ ಬಾಕ್ಸ್‌ ಹಾಗೂ ತಮ್ಮ ಫೋಟೋ ಹಾಗೂ ಲೆಟರ್‌ರನ್ನ NES ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ಸ್ವೀಟ್ಸ್‌  ಬಾಕ್ಸ್‌ ರವಾನೆಯಾಗಿದೆ. ನಾಗರಾಜ್‌ ರವರು ಸ್ವೀಟ್‌ ತಿಂದ ಬಳಿಕ ಅವರಿಗೆ ಕಹಿ ಅನುಭವ ಆಗಿದೆ. ಹೀಗಾಗಿ ಅನುಮಾನಗೊಂಡು MLC ಡಿಎಸ್‌ ಅರುಣ್‌ರಿಗೆ ಮಾಹಿತಿ ನೀಡಿದ್ದಾರೆ. ಅವರು ತಮಗೆ ಮಾಹಿತಿ ನೀಡಿದರು ಎಂದು ಡಾ.ಧನಂಜಯ್‌ ಸರ್ಜಿ ತಿಳಿಸಿದ್ದಾರೆ. 

ಈ ಮೂಲಕ ತಮ್ಮ ಹೆಸರನ್ನ ಬಳಸಿಕೊಂಡು ತೇಜೋವದೆ ಮಾಡುವ ಕುಕೃತ್ಯಕ್ಕೆ ಯಾರೋ ಕೈ ಹಾಕಿದ್ದಾರೆ. ಈ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ರವರಿಗೂ ದೂರು ನೀಡಿದ್ದೇನೆ ಎಂದಿರುವ ಡಾ.ಸರ್ಜಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಸ್ವೀಟ್ಸ್‌ ಸ್ಯಾಂಪಲ್‌ನ್ನ ಲ್ಯಾಬ್‌ಗೂ ಕಳುಹಿಸಲಾಗಿದ್ದು, ಅದರ ರಿಪೋರ್ಟ್‌ ಬರಬೇಕಿದೆ ಎಂದರು. ಈ ಸ್ವೀಟ್‌ ಮಕ್ಕಳಿಗೆನಾದರೂ ನೀಡಿದ್ದರೇ ಪರಿಸ್ಥಿತಿ ಏನೂ ಸಹ ಆಗಬಹುದಿತ್ತು ಎನ್ನುವ ಕಳವಳ ವ್ಯಕ್ತಪಡಿಸಿದ ಸರ್ಜಿಯವರು ತನಿಖೆ ನಡೆದು ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ. 

SUMMARY | Sweet box sent by anonymous person, Dr Dhananjay Sarji, FIR filed at Kote Police Station



KEY WORDS | Sweet box sent by anonymous person, Dr Dhananjay Sarji, FIR filed at Kote Police Station