ಚಳಿ ಜೋರಿದೆ | ರಾತ್ರಿ ಇನ್ನೂ ಜೋರಿರಲಿದೆ | ಹವಾಮಾನ ವರದಿ

State Weather Report, Shimoga Weather Report, Cold Wind Report

ಚಳಿ ಜೋರಿದೆ | ರಾತ್ರಿ ಇನ್ನೂ ಜೋರಿರಲಿದೆ | ಹವಾಮಾನ ವರದಿ
State Weather Report, Shimoga Weather Report, Cold Wind Report

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ರಾಜ್ಯದಲ್ಲಿ ಇದೇ ಜನವರಿ 15 ವರೆಗೂ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಸಂಬಂಧ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ರಾಜ್ಯಾದ್ಯಂತ ಚಳಿಯ ವಾತಾವರಣ ಇನ್ನಷ್ಟು ಅಧಿಕವಾಗಲಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆ  

ಬಿದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇವತ್ತು ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-5 ಡಿ.ಸೆ. ಕಡಿಮೆ ಇರಲಿದೆ ಎಂದಿದೆ.  ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಗದಗ, ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4 ಡಿ.ಸೆ. ಕಡಿಮೆ ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ. 

 

ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ1 ರಿಂದ 2 ಡಿಗ್ರಿ ಸೆಲ್ಸಿಯಸ್ ಇಳಿಮುಖವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿರಲಿದೆ ಅಂಥಾ ಹವಾಮಾನ ಇಲಾಖೆ ಹೇಳಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಟ 22 ಡಿಗ್ರಿ ಸೆಲ್ಸಿಯಸ್‌ ಇದ್ದು, ರಾತ್ರಿ 15 ಡಿಗ್ರಿಗೆ ಇಳಿಯುವ ಸಾದ್ಯತೆ ಇದೆ. 



SUMMARY | State Weather Report, Shimoga Weather Report, Cold Wind Report

KEY WORDS |‌ State Weather Report, Shimoga Weather Report, Cold Wind Report