ಭದ್ರಾವತಿ ಕೇಸ್‌ ವಿಚಾರ | ಹೋರಾಟದ ಎಚ್ಚರಿಕೆ ನೀಡಿದ ಶ್ರೀಪ್ರಣವಾನಂದ ಸ್ವಾಮೀಜಿ

The police should immediately trace and arrest the accused who abused him. Sri Pranavananda Swamiji of Idiga Samaja warned that otherwise we will launch a protest called Belagavi Chalo the next day.

ಭದ್ರಾವತಿ ಕೇಸ್‌ ವಿಚಾರ | ಹೋರಾಟದ ಎಚ್ಚರಿಕೆ ನೀಡಿದ  ಶ್ರೀಪ್ರಣವಾನಂದ ಸ್ವಾಮೀಜಿ
Sri Pranavananda Swamiji warns of struggle

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 13, 2025

ಶಿವಮೊಗ್ಗ | ನಮ್ಮ ಸಮಾಜದ ಅಧಿಕಾರಿಯಾದ ಜ್ಯೋತಿಯವರನ್ನು ಅವಮಾನಿಸಿ ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪಿಯನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನ ಬೆಳಗಾವಿ ಚಲೋ ಎಂಬ ಹೋರಾಟವನ್ನು ಮಾಡುತ್ತೇವೆ ಎಂದು ಈಡಿಗ ಸಮಾಜದ ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ್ಯೋತಿಯವರು ಈಡಿಗ ಸಮುದಾಯಕ್ಕೆ ಸೇರಿದ ಮಹಿಳೆ. ಆಕೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಅವಮಾನಿಯ ಘಟನೆಯನ್ನು ಈಡಿಗ ಸಮಾಜ ಖಂಡಿಸುತ್ತಿದೆ. ನಮ್ಮ ಸಮಾಜ ಹಿಂದುಳಿದ ಸಮಾಜ. ಯಾವುದೇ ಭ್ರಷ್ಟಾಚಾರ ಮಾಡುವ ಸಮಾಜ ಅಲ್ಲ. ನಾನು ಜ್ಯೋತಿಯವರ ಮನೆಗೆ ಹೋಗಿ ಅಲ್ಲಿ ನಡೆದಿರುವ ಎಲ್ಲಾ ಘಟನೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.

ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲ್ಲಿ ಸುಮೊಟೊ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಈ ಭದ್ರಾವತಿಯ ವಿಚಾರದಲ್ಲಿ ಪೊಲೀಸರು ಯಾಕೆ ಆ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂಬುದು ತಿಳಿಯುತ್ತಿಲ್ಲ. ಎಲ್ಲರೂ ನಿರಂತರವಾಗಿ ಹಿಂದುಳಿದ ವರ್ಗದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಸಮಾಜದ ಶಾಸಕರು ಸಚಿವರು ರಾಜಕೀಯ ಮಾಡದೇ ಮುಂದೆ ಬರಬೇಕು ಎಂದು ಒತ್ತಾಯಿಸಿದ್ದಾರೆ

SUMMARY  | The police should immediately trace and arrest the accused who abused him. Sri Pranavananda Swamiji of Idiga Samaja warned that otherwise we will launch a protest called Belagavi Chalo the next day.

KEYWORDS |  Pranavananda Swamiji, Idiga Samaja,  bhadravati,