ತಿರುವಿನಲ್ಲಿ ಬಂದು ಕಂಬಕ್ಕೆ ಕಾರು ಡಿಕ್ಕಿ | ವಾಹನದ ಮೇಲೆಯೇ ಉರುಳಿದ ಪವರ್‌ ಲೈನ್‌

Soraba taluk Anavatti incident

ತಿರುವಿನಲ್ಲಿ ಬಂದು ಕಂಬಕ್ಕೆ ಕಾರು ಡಿಕ್ಕಿ | ವಾಹನದ ಮೇಲೆಯೇ ಉರುಳಿದ  ಪವರ್‌ ಲೈನ್‌
Soraba taluk Anavatti incident

SHIVAMOGGA | MALENADUTODAY NEWS |  Aug 2, 2024 

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ನಿನ್ನೆ ದಿನ ಕಾರೊಂದು ಕರೆಂಟ್‌ ಕಂಬಕ್ಕೆ ಡಿಕ್ಕಿಯಾದ ಘಟನೆ ಸಂಭವಿಸಿದೆ. ಇಲ್ಲಿನ ಆನವಟ್ಟಿ ಸಮೀಪ ಈ  ಘಟನೆ ಸಂಭವಿಸಿದೆ. 



ಮಣಿಪಾಲ್‌ಗೆ ಹೋಗುತ್ತಿದ್ದ ಕಾರು ಮೇಗರವಳ್ಳಿ ಬಳಿ ಪಲ್ಟಿ | ತಲೆಕೆಳಗಾಗಿ ನಿಂತ ವಾಹನ

ನಿನ್ನೆ ಬೆಳಗಿನ ಜಾವ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯಲ್ಲಿ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಇಡೀ ಕಂಬವೇ ಕಾರಿನ ಮೇಲೆ ಮುರಿದು ಬಿದ್ದಿದೆ. ಕಾರಿನ ಮುಂಬಾಗ ಕಂಬದ ಬುಡಕ್ಕೆ ಅಂಟಿಕೊಂಡು ನುಜ್ಜುಗುಜ್ಜಾಗಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ವಿದ್ಯುತ್‌ ಕಂಬ ಬೀಳುತ್ತಲೇ , ಟಿಸಿಯಲ್ಲಿ ಕರೆಂಟ್‌ ಹೋಗಿದ್ದರಿಂದ ಅದೃಷ್ಟಕ್ಕೆ ಕಾರಿನಲ್ಲಿದ್ದವರಿಗೆ ಏನೂ ಸಹ ಆಗಲಿಲ್ಲ. ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. 



ಇನ್ನೂ ಇಲ್ಲಿನ ತಿರುವು ಅಪಾಯಕಾರಿಯಾಗಿದ್ದು ಹಲವು ವಾಹನಗಳು ಹೀಗೆ ಕಂಬಕ್ಕೆ ಡಿಕ್ಕಿಯಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.