ರಾಜ್ಯ ಕಾಂಗ್ರೆಸ್‌ ಡಿನ್ನರ್‌ ಮೀಟಿಂಗ್‌ ರಹಸ್ಯ ತಿಳಿಸಿದ BJP ಬಿವೈ ವಿಜಯೇಂದ್ರ

Bjp state president B Y Vijayendra said the dinner hosted in the absence of Deputy Chief Minister D K Shivakumar yesterday was proof that there was no coordination in the Congress government in the state.

ರಾಜ್ಯ ಕಾಂಗ್ರೆಸ್‌ ಡಿನ್ನರ್‌ ಮೀಟಿಂಗ್‌ ರಹಸ್ಯ ತಿಳಿಸಿದ BJP ಬಿವೈ ವಿಜಯೇಂದ್ರ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 4, 2025

ಶಿವಮೊಗ್ಗ | ರಾಜ್ಯ ಕಾಂಗ್ರೆಸ್‌ ಸರ್ಕಾರಲ್ಲಿ ಹೊಂದಾಣಿಕೆಯಿಲ್ಲ ಎಂಬುದಕ್ಕೆ ನಿನ್ನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅನುಪಸ್ಥಿತಿಯಲ್ಲಿ ನಡೆದ ಔತಣ ಕೂಟವೇ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.

ಇಂದು ಶಿವಮೊಗ್ಗದ  ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಿನ್ನೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸತೀಶ್‌ ಜಾರಕಿಹೊಳಿಯವರ ಮನೆಯಲ್ಲಿ ಒಂದು ಔತಣಕೂಟ ಏರ್ಪಡಿಸಲಾಗಿತ್ತು.ಆ ಔತಣಕೂಟದಲ್ಲಿ ಆಶ್ಚರ್ಯವೆಂದರೆ ಡಿಕೆ ಶಿವಕುಮಾರ್‌ ಇರಲಿಲ್ಲ. ಅವರಿಲ್ಲದ ಸಮಯವನ್ನೇ ಬಳಸಿಕೊಂಡು ಸಿದ್ದರಾಮಯ್ಯನವರು ಔತಣ ಕೂಟವನ್ನು ಏರ್ಪಡಿಸಿದ್ದಾರೆ. ಈ ವೇಳೆ ಅನೇಕ ವಿಷಯಗಳು ಚರ್ಚೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜಿನಾಮೆ ನೀಡಬೇಕಾಗುತ್ತದೆ ಎಂಬ ಕಾರಣದಿಂದ ಈ ರೀತಿ ದಾಳಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.

ಇದರ ನಡುವೆ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳು ತುಂಬುತ್ತಿದೆ. ಕಳೆದ 2 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಏನೇನು ಸಾಧನೆ ಮಾಡಿದೆ ಎಂದು ಸಿದ್ದರಾಮಯ್ಯನವರೇ ಹೇಳಬೇಕು.  ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ. ಈ ಸರ್ಕಾರ ಬಂದಾಗಿನಿಂದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಅಬಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದನ್ನು ನಾವು ಪ್ರಶ್ನಿಸಿದರೆ ಕಾಂಗ್ರೆಸ್‌ ಸರ್ಕಾರದ ಮೇಲೆ ಬಿಜೆಪಿ ಯಾವಾಗಲೂ ಆರೋಪ ಮಾಡುತ್ತದೆ ಎನ್ನುತ್ತಾರೆ. ವಿಪರ್ಯಾಸ ಎಂದರೆ ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದ ವೈಫಲ್ಯವನ್ನು ಹೇಳುತ್ತಿದ್ದಾರೆ. ಶಾಸಕರೆಲ್ಲರೂ ಸಹ ಸರ್ಕಾರದ ಬಗ್ಗೆ ಹತಾಶರಾಗಿದ್ದಾರೆ.ಆಡಳಿತ ಪಕ್ಷದ ಜೊತೆಗೆ ಇರಲಾರದೆ ಪಕ್ಷದ ಶಾಸಕರು ಪರದಾಡುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರೇ ಹೊಣೆ. ಸಿದ್ದು ವರ್ಸಸ್ ಯುದ್ಧ ಎಂಬಂತೆ ಸಿದ್ದರಾಮಯ್ಯ ವಿರುದ್ಧ  ಕಾಂಗ್ರೆಸ್ ನಲ್ಲಿ ಯುದ್ಧ ಅರಭವಾಗಿದೆ ಎಂದರು.

ಪ್ರಿಯಾಂಕ್‌ ಖರ್ಗೆಯವರೇ ನೀವು ಪ್ರಾಮಾಣಿಕರಾಗಿದ್ದರೆ ಆತ್ಮಹತ್ಯೆ ಕೇಸ್‌ನ್ನು ಸಿಬಿಐಗೆ ವಹಿಸಿ

ಪ್ರಿಯಾಂಕ್ ಖರ್ಗೆಯವರ ನೀವೇ ಹೇಳಿದಂತೆ ನೀವು ಇದುವರೆಗೆ 4 ಚುನಾವಣೆಯನ್ನು  ಎದುರಿಸಿರಬಹುದು. ಆದರೆ ನಾನು ಈಗ ನಿಮಗೊಂದು ಸಲಹೆ ನೀಡುತ್ತಿದ್ದೇನೆ ಈ ಕೇಸ್‌ನಲ್ಲಿ ನಿಮ್ಮ ಪಾತ್ರವಿಲ್ಲದಿದ್ದಾರೆ ಈ ಕೇಸ್‌ನ್ನುನೀವು ಸಿಬಿಐ ಗೆ ವಹಿಸುವುದು ಉತ್ತಮ. ಏಕೆಂದರೆ ಯಾವುದೇ ಕಾರಣಕ್ಕೂ ನಿಮ್ಮ ಮುಖ್ಯಮಂತ್ರಿಯನ್ನು ನಂಬಬೇಡಿ. ನಿಮ್ಮ ಪಕ್ಷದಲ್ಲೇ ಅನೇಕರ ನಡುವೆ ಷಡ್ಯಂತ್ರ ನಡೆಯುತ್ತಿವೆ ನೀವೇನಾದರೂ ಪ್ರಾಮಾಣಿಕರಾಗಿದ್ದರೆ ಈ ಕೇಸ್‌ನ್ನು ಸಿಬಿಐಗೆ ವಹಿಸಿಬಿಡಿ ಇಲ್ಲದಿದ್ದರೆ ಸಿಐಡಿ ತನಿಖೆ ಸದ್ಯಕ್ಕೆ ಮುಗಿಯುವುದಿಲ್ಲ. ಇದರಿಂದ ನಿಮಗೂ ನ್ಯಾಯ ಸಿಗುವುದಿಲ್ಲ ಆ ಕುಟುಂಬಕ್ಕೂ ನ್ಯಾಯ ಸಿಗುವುದಿಲ್ಲ. ಎಲ್ಲರಿಗೂ ನ್ಯಾಯ ಸಿಗಬೇಕೆಂದರೆ ಸಿಬಿಐ ಯಿಂದ ಮಾತ್ರ ಸಾಧ್ಯ ಎಂದರು.

 

SUMMARY | Bjp state president B Y Vijayendra said the dinner hosted in the absence of Deputy Chief Minister D K Shivakumar yesterday was proof that there was no coordination in the Congress government in the state.

 

KEYWORDS | Bjp state president,  B Y Vijayendra, congress,  political news,