ಉಂಬ್ಳೆಬೈಲ್‌ನಲ್ಲಿ ಅರಣ್ಯ ಇಲಾಖೆಯ ಶಾಕ್‌ | ಚಿಕ್ಕಮಗಳೂರು, ಭದ್ರಾವತಿಯ ನಾಲ್ವರು ಮಾಲು ಸಮೇತ ಅರೆಸ್ಟ್‌

Shivamogga umblebailu forest raid | ಉಂಬ್ಳೆಬೈಲು ರೇಂಜ್‌ನಲ್ಲಿ ಕಡವೆ ಬೇಟೆ ಯಾಡಿದ ತಂಡದ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ

ಉಂಬ್ಳೆಬೈಲ್‌ನಲ್ಲಿ ಅರಣ್ಯ ಇಲಾಖೆಯ ಶಾಕ್‌ | ಚಿಕ್ಕಮಗಳೂರು, ಭದ್ರಾವತಿಯ ನಾಲ್ವರು ಮಾಲು ಸಮೇತ ಅರೆಸ್ಟ್‌
Shivamogga umblebailu forest raid , ಉಂಬ್ಳೆಬೈಲು ಅರಣ್ಯ ವಲಯ, ಚಿಕ್ಕಮಗಳೂರು, ಭದ್ರಾವತಿ , ಕಡವೆ ಬೇಟೆ

SHIVAMOGGA | MALENADUTODAY NEWS | Sep 2, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಕಡವೆಯನ್ನ ಬೇಟೆಯಾಡಿರುವ ನಾಲ್ವರನ್ನ ಅರೆಸ್ಟ್‌ ಮಾಡಿದ್ದಾರೆ. ಉಂಬ್ಳೆಬೈಲು ರೇಂಜ್‌ನಲ್ಲಿ ಈ ಘಟನೆ ಸಂಭವಿಸಿದೆ.

ಏನಿದು ಘಟನೆ

ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್‌ನ ಚೌಡಿಕಟ್ಟೆಯ ಬಳಿ ಕಡವೆ ಪ್ರಾಣಿಯನ್ನು ಶಿಕಾರಿ ಆಡಿದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಗೋಂದಿ ಗ್ರಾಮದ ನಿವಾಸಿ ಶಿವ ಬಿನ್ ರಾಜಪ್ಪ(28), ವೆಂಕಟೇಶ ಬಿನ್ ಮುನಿಯಪ್ಪ (60), ಚಿಕ್ಕಮಗಳೂರು ಚೌಡಿಕಟ್ಟೆ ಭೈರಾಪುರ ಗ್ರಾಮ ವಾಸಿಗಳಾದ ಮಂಜಪ್ಪ ಬಿನ್ ನಾಗಪ್ಪ (45), ವಿನೋದ ಬಿನ್ ಮಂಜಪ್ಪ (19) ಬಂಧಿತ ಆರೋಪಿಗಳು. 



ಚೌಡಿಕಟ್ಟೆಯ ಬಳಿ ಕಡವೆ ಬೇಟೆ ಯಾಡಿ ರುಂಡ ಕಡಿದು ಮಾಂಸ ಬೇರೆ ಮಾಡಿದ್ದ ಆರೋಪಿಗಳು ಆ ಬಳಿಕ ಅದರ  ತಲೆಯನ್ನು ಕೆರೆಗೆ ಬಿಸಾಕಿ ಹೋಗಿದ್ದರು. ಈ ಪ್ರಕರಣವನ್ನು ಭೇದಿಸಿದ ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿ ಈ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ

 



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?