Shivamogga |ಸಾಗುವಾನಿ ನಾಟ ಸಾಗಿಸ್ತಿದ್ದವರಿಗೆ ಶಾಕ್ | ಉಂಬ್ಳೆಬೈಲು, ಗಾಜನೂರು ನಿವಾಸಿಗಳು ಅರೆಸ್ಟ್
Shivamogga umblebailu forest raid | ಉಂಬ್ಳೆ ಬೈಲು ನಿಂದ ಗಾಜನೂರಿಗೆ ಸಾಗುವಾನಿ ನಾಟ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆಯ ಉಂಬ್ಳೆಬೈಲ್‌ನಲ್ಲಿ ಇವತ್ತು ಅಕ್ರಮ ನಾಟ ಸಾಗಿಸ್ತಿದ್ದವರನ್ನು ಹಿಡಿದ ಸುದ್ದಿ ಸಾಕಷ್ಟು ವದಂತಿಗೆ ಕಾರಣವಾಗಿತ್ತು. ಅವರ ಬಳಿಯಲ್ಲಿ ಶಿಕಾರಿಯ ದೃಶ್ಯಗಳಿದ್ದವು ಎಂದು ಪುಕಾರು ಆಗಿತ್ತು.
ಇದೀಗ ಈ ಸಂಬಂಧ ಮಾಹಿತಿ ಹೊರಬಿದ್ದಿದ್ದು ಅಕ್ರಮ ಸಾಗುವಾನಿ ತುಂಡು ಸಾಗಿಸ್ತಿದ್ದ ನಾಲ್ವರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇವರೆಲ್ಲಾ ಸಾಲುಗೆರೆ ಹಾಗೂ ಗಾಜನೂರು ಮತ್ತು ಉಂಬ್ಳೆಬೈಲ್‌ನವರು ಎಂದು ಗೊತ್ತಾಗಿದ್ದು, ಆರೋಪಿಗಳಿಂದ ಒಂದು ವಾಹನ ಹಾಗೂ ಆರು ಸಾಗುವಾನಿ ನಾಟಗಳನ್ನ ಜಪ್ತು ಮಾಡಲಾಗಿದೆ.
ಉಂಬ್ಲೆಬೈಲು ರೇಂಜ್‌ನಲ್ಲಿ ಸಾಲುಗೆರೆಯಿಂದ ಗಾಜನೂರಿಗೆ ಸಾಗುವಾನಿ ಮರಗಳನ್ನ ಸಾಗಿಸುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಗಳನ್ನ ಮಾಲು ಸಮೇತ ಹಿಡಿದ್ದಿದ್ದಾರೆ
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್