‌Shivamogga suddi | ಕಾರಿನಲ್ಲಿದ್ದ ಟೂಲ್ಸ್‌ ನೋಡಿ ಜನರಿಗೆ ಆತಂಕ | ಮಚ್ಚು ಬೀಸಿದ ವೈರಲ್‌ ವಿಡಿಯೋ ಸಂಬಂಧ ಸುಮುಟೋ ಕೇಸ್

ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆ ಹಾಗೂ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಎರಡು ಘಟನೆಗಳ ವಿವರ

‌Shivamogga suddi | ಕಾರಿನಲ್ಲಿದ್ದ ಟೂಲ್ಸ್‌ ನೋಡಿ ಜನರಿಗೆ ಆತಂಕ | ಮಚ್ಚು ಬೀಸಿದ ವೈರಲ್‌ ವಿಡಿಯೋ ಸಂಬಂಧ ಸುಮುಟೋ ಕೇಸ್
ಶಿವಮೊಗ್ಗ ವಿನೋಬನಗರ ಪೊಲೀಸ್‌ ಠಾಣೆ, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆ

SHIVAMOGGA | MALENADUTODAY NEWS | Aug 20, 2024 ಮಲೆನಾಡು ಟುಡೆ  

ಮಚ್ಚು ಬೀಸಿದ ವಿಡಿಯೋ ವೈರಲ್

ಶಿವಮೊಗ್ಗದ ಸವಳಂಗ ರಸ್ತೆಯ ಅಂಗಡಿಯೊಂದ ಬಳಿಯಲ್ಲಿ ಮಚ್ಚು ಬೀಸಿ ಯುವಕನೊಬ್ಬ ಹಾವಳಿ ಸೃಷ್ಟಿಸಿದ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ಬಗ್ಗೆ ಕೇಸ್‌ ದಾಖಲಿಸಿರುವ  ವಿನೋಬ ನಗರ ಪೊಲೀಸರು  ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆಗಸ್ಟ್‌ 16 ರಂದು ಮಧ್ಯರಾತ್ರಿ ಬೈಕ್‌ನಲ್ಲಿ ಮೂವರು ಬಂದು ಅಂಗಡಿಯೊಂದರ ಮುಂದೆ ಮಚ್ಚು ಬೀಸುತ್ತಾರೆ. ಅದನ್ನು ನೋಡಿದ ಯುವಕನೊಬ್ಬ ಅಲ್ಲಿಂದ ಎಸ್ಕೇಪ್‌ ಆಗುತ್ತಾನೆ. ಸಾರ್ವಜನಿಕವಾಗಿ ಲಾಂಗ್‌ ಬೀಸಿದ ದೃಶ್ಯ ಸಿಟಿಯಲ್ಲಿ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ‌

ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆಯಾಯ್ತು ಲಾಂಗ್

ಶಿವಮೊಗ್ಗದ ಮಂಡ್ಲಿ ಸಮೀಪ ಕಾರೊಂದರ ಹಿಂದಿನ ಸೀಟಿನಲ್ಲಿ ಲಾಂಗ್‌ವೊಂದು ಪತ್ತೆಯಾಗಿದ್ದು, ಜನರು ಆತಂಕಗೊಂಡ ಘಟನೆಯ ಬಗ್ಗೆ ರಾಜ್ಯದ ಪತ್ರಿಕೆಯೊಂದು ವರದಿ ಮಾಡಿದೆ. ಆ ವರದಿ ಪ್ರಕಾರ, ಕಾರೊಂದರಲ್ಲಿ ಟೂಲ್ಸ್‌ ಇರುವುದನ್ನ ಗಮನಿಸಿದ ಸ್ಥಳೀಯರು ಏನೋ ನಡೆಯುತ್ತಿದೆ ಎಂದು ಅಚ್ಚರಿಪಟ್ಟಿದ್ದಾರೆ. ನೋಡನೋಡುತ್ತಿದ್ದಂತೆ ಜನ ಸೇರಿದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಎಸ್ಕೇಪ್‌ ಆಗಿದ್ದಾರೆ ಎನ್ನಲಾಗಿದೆ. ಸದ್ಯ ದೊಡ್ಡಪೇಟೆ ಪೊಲೀಸರು ಕಾರಿನ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಬಂದಿದೆ. 



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

 ಇನ್ನಷ್ಟು ಸುದ್ದಿಗಳು