ಗಣಪತಿಯ ಮುಂದೆ ಬೆಂಕಿ ಜೊತೆ ಸರಸ | ಸಾಗರದಲ್ಲಿನ ಈ ದೃಶ್ಯಗಳು ಝಲ್ ಅನಿಸುತ್ತೆ !?
Shivamogga sagara Ganapati fire show , ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಸಾಗರದ ಶ್ರೀನಗರ ಗಣಪತಿ ಮೆರವಣಿಗೆ, ಬೆಂಕಿಯಾಟ, ಬೆಂಕಿ ಜೊತೆ ಸರಸ

SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 17, 2024
ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಾಗೂ ಬಂದೋಬಸ್ತ್ ಸಿದ್ಧತೆ ನಡೆಯುತ್ತಿದ್ದರೇ ಅತ್ತ ಸಾಗರ ಟೌನ್‌ನಲ್ಲಿ ಗಣಪತಿ ಮೆರವಣಿಗೆ ವೇಳೆ ಅಲ್ಲಿ ತಜ್ಞ ತಂಡಗಳು ಬೆಂಕಿಯ ಜೊತೆಗೆ ಸರಸವಾಡಿದ್ದಾರೆ. ಆ ದೃಶ್ಯಗಳು ಮೈ ನವಿರೇಳಿಸುತ್ತಿದೆ.
ಇಲ್ಲಿನ ಶ್ರೀನಗರದ ಯುವಜನ ಸಂಘದ 48 ನೇ ಗಣೇಶೋತ್ಸವದ ಮೆರವಣಿಗೆ ಕಳೆದ ಭಾನುವಾರ ನಡೆದಿದೆ. ಈ ವೇಳೆ ಶ್ರೀನಗರ ಯುವಜನ ಸಂಘ ಬೆಂಕಿಯಾಟವನ್ನು ಪ್ರದರ್ಶಿಸಿದೆ. ಧಗಧಗಿಸುವ ಬೆಂಕಿಯ ಉಂಡೆಗಳನ್ನ ಕೈಯಲ್ಲಿ ತಿರುಗಿಸುವ ಪರಿ ವಿಶೇಷದ ಜೊತೆಗೆ ಅಚ್ಚರಿಯನ್ನ ಮೂಡಿಸಿದೆ.
ಬೆಂಕಿಯ ಚಕ್ರಗಳನ್ನ ಸುತ್ತುವಾಗಲೇ ಇನ್ನೊಬ್ಬರು ಆ ಚಕ್ರವನ್ನ ತಮ್ಮ ವಶಕ್ಕೆ ಪಡೆದು ತಿರುಗವ ರೋಮಾಂಚನಕಾರಿ ದೃಶ್ಯಗಳನ್ನ ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದರು. ಅಲ್ಲದೆ ರೀಲ್ಸ್‌ಗಳಿಗೆ ಅಲ್ಲಿಯೇ ಅಪ್‌ಲೋಡ್ ಮಾಡುತ್ತಿದ್ದರು.
ಸಾಗರ ನಗರ ಪೊಲೀಸ್ ಸ್ಟೇಷನ್ ವೃತ್ತ, ನಗರದ ಹೃದಯ ಭಾಗ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ಈ ಬೆಂಕಿಯಾಟ ವಿಶೇಷವಾಗಿ ಜನರ ಗಮನ ಸೆಳೆಯಿತು.
ಬೆಂಕಿ ಆಟ ಆರಂಭವಾಗಿದ್ದು ಎಲ್ಲಿಂದ
ಹೂವಿನ ಗೋಪಾಲಣ್ಣ ಅವರ ಕಾಲದಲ್ಲಿ ಈ ಬೆಂಕಿಯಾಟ ಮಂಗಳೂರಿನಲ್ಲಿ ಪ್ರಾರಂಭವಾಗಿರುವಂತದ್ದು, ಆನಂತರ ಪ್ರಥಮವಾಗಿ ಸಾಗರದ ಹಿಂದೂ ಮಹಾಸಭಾ ಗಣಪತಿಯಲ್ಲಿ ಪ್ರದರ್ಶನಗೊಂಡಿತು ನಂತರ ಶ್ರೀನಗರ ಯುವಜನ ಸಂಘಕ್ಕೆ ಹಸ್ತಾಂತರವಾಯಿತು
ಬೆಂಕಿಯ ಜೊತೆಗೆ ಸರಸವಾಡು ಈ ತಾಲೀಮಿನಲ್ಲಿ ಸುಮಾರು 42 ಪ್ರಕಾರದ ತಾಲೀಮು ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್ ಬಾಣ, ಬಣ್ಣೋಟ್ಟಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸೋದು ಅವುಗಳ ಪೈಕಿ ಪ್ರಮುಖವಾದದು
ಬಣ್ಣೋಟ್ಟಿಗಳ ತುದಿಗೆ ಸೀಮೆ ಎಣ್ಣೆಯಿಂದ ಅದ್ದಿದ ಬಟ್ಟೆಯನ್ನು ಕಟ್ಟಿ ಅದಕ್ಕೆ ಬೆಂಕಿ ಹಚ್ಚಿ ಎಲ್ಲಾ ದಿಕ್ಕುಗಳಿಗೆ ಎಂಟು ಬಾರಿ ತಿರುಗಿ, ಮೈ ಕೈಗಳಿಗೆ ಕೊಂಚವೂ ಕೂಡಾ ಬೆಂಕಿಯ ಕೆನ್ನಾಲಿಗೆ ತಾಕದಂತೆ ಬೀಸುವ ಸಾಹಸ ತಾಲೀಮಿನಲ್ಲಿ ಎಲ್ಲರ ಮನಸೆಳೆಯುವ ಒಂದು ಪ್ರಕಾರದ ಪ್ರದರ್ಶನವಾಗಿದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ