ಹೀಗೂ ಆಗುತ್ತೆ ಹುಷಾರ್‌ | ಹಿರಿಯ ಮಹಿಳೆಯ ಜೀವಕ್ಕೆ ಮುಳುವಾಯ್ತು ಅಂಗಳದ ಗೇಟು! ನಡೆದಿದ್ದೇನು?

Shivamogga ripponpet incident | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಮಲ್ಲಾಪುರದಲ್ಲಿ ನಡೆದ ಘಟನೆ | ಅಂಗಳದ ಗೇಟು ತೆಗೆಯುವಾಗ ಮಹಿಳೆಗೆ ಕರೆಂಟ್‌ ತಗುಲಿ ಸಾವು

ಹೀಗೂ ಆಗುತ್ತೆ ಹುಷಾರ್‌ | ಹಿರಿಯ ಮಹಿಳೆಯ ಜೀವಕ್ಕೆ ಮುಳುವಾಯ್ತು ಅಂಗಳದ ಗೇಟು! ನಡೆದಿದ್ದೇನು?
ಕರೆಂಟ್‌ ತಗುಲಿ ಸಾವು, ಮಲ್ಲಾಪುರ, ಹೊಸನಗರ ತಾಲ್ಲೂಕು, ರಿಪ್ಪನ್‌ ಪೇಟೆ

SHIVAMOGGA | MALENADUTODAY NEWS | Sep 1, 2024  ಮಲೆನಾಡು ಟುಡೆ 

ಮನೆ ಅಂಗಳದ ಗೇಟಿನ ತಡ ತೆಗೆಯುವ ಸಂದರ್ಭದಲ್ಲಿ ಕರೆಂಟ್‌ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.



ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪದ ಮಲ್ಲಾಪುರದಲ್ಲಿ ಈ ಘಟನೆ ಸಂಭವಿಸಿದೆ. 

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ

ಇಲ್ಲಿನ ನಿವಾಸಿ 67 ವರ್ಷದ ಪಾವರ್ತಮ್ಮ ಮೃತ ನಿವಾಸಿ. ಇವರು ಇವತ್ತು ಅಂಗಳದ ಗೇಟಿಗೆ ಹಾಕಿದ್ದ ಉನುಗೋಲು ತೆಗೆಯಲು ಹೋಗಿದ್ದಾರೆ. ಆಗ ಇವರ ಕೈ ಬೇಲಿಗೆ ತಗುಲಿದೆ ಅದರಿಂದ ಕರೆಂಟ್‌ ತಗುಲಿ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾರೆ. 



ಮನೆ ಮುಂಭಾಗದ ಬೇಲಿಗೆ ಮರದ ಗೇಟ್‌ ಹಾಕಲಾಗಿದೆ. ಎಂತಾ ಕಥೆ ಎಂದರೆ, ಪಂಪ್‌ ಸೆಟ್‌ಗೆ ಕನೆಕ್ಷನ್‌ ಕೊಟ್ಟಿದ್ದ ವಯರ್‌ನ್ನ ಇದೇ ಬೇಲಿಗೆ ಸುತ್ತಿದ್ದರು. ಹೀಗಾಗಿ ತುಂತಿ ಬೇಲಿಯಲ್ಲಿ ಕರೆಂಟ್‌ ಪಾಸಾಗುತ್ತಿತ್ತು. ಇದು ಪಾರ್ವತಮ್ಮರಿಗೆ ಗೊತ್ತಾಗಲಿಲ್ಲ. 

ಗೇಟ್‌ನ ಗಳ ಒಂದು ಬದಿಗೆ ಸೆಳೆದ ಬೆನ್ನಲ್ಲೆ ಅವರ ಕೈ ತಂತಿ ಬೇಲಿಗೆ ತಗುಲಿ ಪಾರ್ವತಮ್ಮ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಿಪ್ಪನ್‌ ಪೇಟೆ ಪೊಲೀಸರು ತೆರಳಿದ್ದು ಕೇಸ್‌ ದಾಖಲಿಸಿದ್ದಾರೆ. 



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?