ಹಗಲು ರಾತ್ರಿ ಆಪರೇಷನ್‌ | ಆನಂದಪುರ ಇಬ್ಬರು ಸೇರಿ ಮೂವರಿಗೆ ಶಿವಮೊಗ್ಗ ಪೊಲೀಸರ ಶಾಕ್‌ | ರೆಡ್‌ ಹ್ಯಾಂಡ್‌ ಆಗಿ ಅರೆಸ್ಟ್‌ |

Shivamogga police action on ganja sale | ಅಕ್ರಮವಾಗಿ ಗಾಂಜಾ ಮಾರುತ್ತಿದ್ದವರನ್ನ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ

ಹಗಲು ರಾತ್ರಿ ಆಪರೇಷನ್‌ | ಆನಂದಪುರ ಇಬ್ಬರು  ಸೇರಿ ಮೂವರಿಗೆ  ಶಿವಮೊಗ್ಗ ಪೊಲೀಸರ ಶಾಕ್‌ | ರೆಡ್‌ ಹ್ಯಾಂಡ್‌ ಆಗಿ ಅರೆಸ್ಟ್‌ |
ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ, ಶಿವಮೊಗ್ಗ ಕುಂಸಿ ಪೊಲೀಸ್‌ ಠಾಣೆ, ಆನಂದಪುರ, ಸೂಳೆಬೈಲು

SHIVAMOGGA | MALENADUTODAY NEWS | Sep 1, 2024  ಮಲೆನಾಡು ಟುಡೆ 

SHIVAMOGGA CRIME  | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು ಗ್ರಾಮದ ಖಾಲಿ ಲೇ ಔಟ್ ನ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ಬೈಕ್ ನಿಲ್ಲಿಸಿಕೊಂಡು ಗಾಜಾ ಮಾರುತ್ತಿದ್ದವರ ಮೇಲೆ ಪೊಲೀಸರು ರೇಡ್‌ ನಡೆಸಿದ್ದಾರೆ. 

ಪ್ರಕರಣದಲ್ಲಿ  1)ಯಾಸೀನ್ ಬೇಗ್, 23 ವರ್ಷ, ಆನಂದಪುರ ಶಿವಮೊಗ್ಗ ಮತ್ತು 2) ಮುಬಾರಕ್ ಬೇಗ್, 28  ವರ್ಷ, ಆನಂದಪುರ ಶಿವಮೊಗ್ಗ ಇಬ್ಬರನ್ನ ಅರೆಸ್ಟ್‌ ಮಾಡಲಾಗಿದೆ. 

ಅಲ್ಲದೆ ಆರೋಪಿತರಿಂದ ಅಂದಾಜು ಮೌಲ್ಯ 8,000/- ರೂ ಗಳ 582 ಗ್ರಾಂ ತೂಕದ ಒಣ ಗಾಂಜಾ ಹಾಗೂ ಅಂದಾಜು ಮೌಲ್ಯ 80,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0236/2024  ಕಲಂ 20(ಬಿ)(2)(ಎ), 8(ಸಿ) NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಲಾಗಿದೆ 

ಕುಂಸಿ ಪೊಲೀಸ್‌ ಠಾಣೆ

ಇತ್ತ ಕುಂಸಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ  ದೊಡ್ಡದಾನವಂದಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಗಾಂಜಾಮಾರುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ರೇಡ್‌ ನಡೆಸಿದ್ದಾರೆ.ಈ ವೇಳೆ ಆರೋಪಿ ಸೈಯ್ಯದ್ ಸದ್ದಾಂ, 33  ವರ್ಷ, ಸೂಳೆಬೈಲು,ಶಿವಮೊಗ್ಗ ಇವನನ್ನು ದಸ್ತಗಿರಿ ಮಾಡಿದ್ದಾರೆ. 

ಅಲ್ಲದೆ ಆರೋಪಿಯಿಂದ ಅಂದಾಜು ಮೌಲ್ಯ 3,500/- ರೂ ಗಳ 120  ಗ್ರಾಂ ತೂಕದ ಒಣ ಗಾಂಜಾ ಹಾಗೂ ಅಂದಾಜು ಮೌಲ್ಯ 25,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುದ್ಧ  ಕುಂಸಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0179/2024  ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ

 



ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?