ಸೊರಬ ಕೆರೆಗೆ ಉರುಳಿದ ಲಾರಿ | ಯಡೂರುನಲ್ಲಿ ಚಕ್ರ ಕುಸಿದು ಕಂಬ ಮುರಿದ ಗ್ಯಾಸ್‌ ಲಾರಿ

Shivamogga lorry incident yaduru soraba | ಪ್ರತ್ಯೇಕ ಘಟನೆಗಳಲ್ಲಿ ಎರಡು ಲಾರಿಗಳು ಅಪ್‌ಸೆಟ್‌ ಆದ ಬಗ್ಗೆ ವರದಿಯಾಗಿದೆ. ಹಳೆಸೊರಬದಲ್ಲಿ ಒಂದು ಘಟನೆ ನಡೆದಿದ್ದು, ಇನ್ನೊಂದು ಘಟನೆ ಮಾಸ್ತಿಕಟ್ಟೆಯ ಯಡೂರು ಸಮೀಪ ಸಂಭವಿಸಿದೆ

ಸೊರಬ ಕೆರೆಗೆ ಉರುಳಿದ ಲಾರಿ | ಯಡೂರುನಲ್ಲಿ ಚಕ್ರ ಕುಸಿದು ಕಂಬ ಮುರಿದ ಗ್ಯಾಸ್‌ ಲಾರಿ
Shivamogga lorry incident yaduru soraba, ಮಾಸ್ತಿಕಟ್ಟೆ, ಹಳೇಸೊರಬ, ಯಡೂರು, ಲಾರಿಪಲ್ಟಿ,

SHIVAMOGGA | MALENADUTODAY NEWS | Aug 27, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಹಳೇಸೊರಬದ ಶಾಂತಿಕೆರೆ ಸಮೀಪ ಹಾನಗಲ್‌ ಕಡೆಯಿಂದ ಸೊರಬ ಪಟ್ಟಣಕ್ಕೆ ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. 



ಎದುರಿಗೆ ಬಂದ ವಾಹನ ಮುಂದಕ್ಕೆ ಸಾಗಲು ಅನುವು ಮಾಡಿಕೊಡುವ ಸಂದರ್ಭದಲ್ಲಿ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ 



ಮಾಸ್ತಿಕಟ್ಟೆಯಲ್ಲಿ ಲಾರಿ ಡಿಕ್ಕಿ

ಇನ್ನೂ ಇತ್ತ ತೀರ್ಥಹಳ್ಳಿ ತಾಲ್ಲೂಕು ಮಾಸ್ತಿಕಟ್ಟೆ ಸಮೀಪ ಯಡೂರಿನಲ್ಲಿ ಸಿಲಿಂಡರ್‌ ಲಾರಿಯೊಂದರ ಚಕ್ರ ಕುಸಿದು, ಲಾರಿ ಲೈಟ್‌ ಕಂಬಕ್ಕೆ ಡಿಕ್ಕಿಯಾಗಿದೆ. 

ಜಲಜೀವನ್‌ ಮಿಷನ್‌ ಕಾಮಗಾರಿಯಿಂದಾಗಿ ಮೇನ್‌ ರಸ್ತೆಗಳ ಪಕ್ಕದಲ್ಲಿ ಮಣ್ಣು ಕುಸಿಯುತ್ತಿದೆ. ಇದರಿಂದ ರಸ್ತೆ ಬಿಟ್ಟು ಸೈಡಿಗಿಳಿದ ಲಾರಿಗಳು ಬಸ್‌ಗಳ ಚಕ್ರಗಳು ನೆಲಕ್ಕೆ ಹುಗಿಯುತ್ತಿವೆ. 

ಇಲ್ಲಿಯು ಅದೇ ರೀತಿಯಾಗಿದ್ದು, ಲಾರಿ ಚಕ್ರ ಹುಗಿದು ನಿಯಂತ್ರಣ ತಪ್ಪಿ ಲಾರಿಯು ಕರೆಂಟ್‌ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಜಖಂಗೊಂಡಿದೆ. ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ 

ಇನ್ನಷ್ಟು ಸುದ್ದಿಗಳು