KSRTC ಬಸ್ ಟ್ರ್ಯಾಕ್ಟರ್ ಡಿಕ್ಕಿ | 2 ವಾಹನಗಳು ಜಖಂ | ಬೈಕ್‌ನಿಂದ ಬಿದ್ದ ಶಿಕ್ಷಕ ಸಾವು
Shimoga Rural Police Station, Accident between KSRTC bus and tractor, teacher dies after falling off bike in Anandapura, Gautamapura
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆದಿನ KSRTC ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ.ಆದರೆ ಎರಡು ವಾಹನಗಳು ಜಖಂಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಎರಡುವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದರು. ಈ ಸಂಬಂಧ ವಿಚಾರಣೆ ಮುಂದುವರಿದಿದೆ.
ಬೈಕ್‌ನಿಂದ ಬಿದ್ದು ಶಿಕ್ಷಕ ಸಾವು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಬೈಕ್‌ನಿಂದ ಬಿದ್ದು ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ನರಸೀಪುರ ಗ್ರಾಮದ ನಿವಾಸಿ ಮಂಜುನಾಥ್ (57) ಮೃತ ವ್ಯಕ್ತಿ ನರಸೀಪುರದಿಂದ ಗೌತಮಪುರಕ್ಕೆ ಹೋಗುವ ವೇಳೆ ಆಕಸ್ಮಿಕವಾಗಿ ಬೈಕ್‌ನಿಂದ ಬಿದ್ದು ಇವರು ಸಾವನ್ನಪ್ಪಿದ್ದಾರೆ. ಇವರು ಜಂಬೂರಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
SUMMARY| Shimoga Rural Police Station, Accident between KSRTC bus and tractor, teacher dies after falling off bike in Anandapura, Gautampura
KEY WORDS |Shimoga Rural Police Station: Accident between KSRTC bus and tractor, teacher dies after falling off bike in Anandapura, Gautamapura