ಹಿಂದೂ ಮಹಾಸಭಾ ಗಣಪತಿ ಎದುರು ಪಕ್ಷಾತೀತ ವಂದನೆ | ಅಕ್ಕಪಕ್ಕ ಕುಳಿತ ಕೆಎಸ್ ಈಶ್ವರಪ್ಪ , ಬಿವೈ ವಿಜಯೇಂದ್ರ
Shivamogga hindu mahasaba Ganapati politics , ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ, ಬಿವೈ ವಿಜಯೇಂದ್ರ, ಕೆಎಸ್ ಈಶ್ವರಪ್ಪ, ಹೆಚ್‌ಸಿ ಯೋಗೇಶ್, ಕೆಬಿ ಪ್ರಸನ್ನಕುಮಾರ್,

SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 17, 2024
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಮಹಾಮಂಗಳಾರತಿ ನಿನ್ನೆ ರಾತ್ರಿ ನಡೆದಿದೆ. ಈ ವೇಳೆ ಶಿವಮೊಗ್ಗ ರಾಜಕಾರಣದ ಪ್ರಮುಖರೆಲ್ಲರೂ ಅಲ್ಲಿ ಹಾಜರಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಮಹಾಮಂಗಳಾರತಿಗೆ ಸಾಕ್ಷಿಯಾದರು.
ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಹಿಂದೂ ಮಹಾಸಭಾ ಗಣಪತಿಗೆ ಈಗಾಗಲೇ ಸಚಿವ ಮಧು ಬಂಗಾರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಮೊಗ್ಗ ನಗರ ಶಾಸಕ ಎಸ್‌ಎನ್ ಚನ್ನಬಸಪ್ಪ ಮೊದಲ ದಿನದಿಂದಲೂ ಗಣಪತಿಯ ಉಸ್ತುವಾರಿಯಲ್ಲಿ ಭಾಗಿಯಾಗಿದ್ದಾರೆ.
ಇನ್ನೂ ನಿನ್ನೆ ದಿನ ನಡೆದ ಮಹಾಮಂಗಳಾರತಿಯ ವೇಳೆ ರಾಷ್ಟ್ರ ಭಕ್ತ ಬಳಗದ ಕೆಎಸ್ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಮಾಜಿ ಶಾಸಕ ಕೆಬಿ ಪ್ರಸನ್ನಕುಮಾರ್, ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್ ಸೇರಿದಂತೆ ಹಿಂದೂ ಪರ ಮುಖಂಡರು ಹಾಜರಿದ್ದು, ಮಹಾಮಂಗಳಾರತಿಯನ್ನು ಸ್ವೀಕರಿಸಿದರು
ಅಚ್ಚರಿ ಮೂಡಿಸಿದ ಕೆಎಸ್‌ಇ, ವಿಜಯೇಂದ್ರ
ಈ ನಡುವೆ ಕೆಎಸ್ ಈಶ್ವರಪ್ಪ ಹಾಗೂ ಬಿವೈ ವಿಜಯೇಂದ್ರ ಅಕ್ಕಪಕ್ಕದಲ್ಲಿಯೇ ಕುಳಿತಿದ್ದು ವಿಶೇಷ ಅನ್ನಿಸಿತ್ತು. ಶಿವಮೊಗ್ಗದ ಪ್ರಮುಖ ಗಣಪತಿ ಸಮಾರಂಭದಲ್ಲಿ ಇಬ್ಬರು ನಾಯಕರು ಹಳೆಯದನ್ನ ಪ್ರಸ್ತಾಪಿಸದೇ , ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪರಸ್ಪರ ಪಕ್ಷ ಸಿದ್ಧಾಂತಗಳನ್ನ ಬದಿಗೊತ್ತಿದ್ದ ಶಿವಮೊಗ್ಗದ ಈ ಮುಖಂಡರುಗಳೆಲ್ಲರು, ತಮ್ಮ ಅನುಭವದ ಮಾತುಗಳನ್ನ ಆಡುತ್ತಾ, ಉಭಯಕುಶಲೋಪಚರಿಗಳನ್ನ ವಿಚಾರಿಸಿದ್ದು ವಿಶೇಷವಾಗಿತ್ತು.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ