ತುಂಗಾನದಿಯಲ್ಲಿ ತೇಲಿದ ಮಹಿಳೆ ಶವ ನೋಡಿ ಶಾಕ್ | ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಮಲಗಿದ್ದಲ್ಲೆ ವ್ಯಕ್ತಿ ಸಾವು | ಒಂದು ಮೆಸೇಜ್ ನಂಬಿದ್ದಕ್ಕೆ 21 ಲಕ್ಷ ಖಾಲಿ
Shivamogga, Thirthahalli, Bhadravathi, Kuruvalli, Heggodu, Tunganadi, Shivamogga Fast News
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಶಿವಮೊಗ್ಗ | ತೀರ್ಥಹಳ್ಳಿ ತಾಲ್ಲೂಕು ಕುರುವಳ್ಳಿ ಸಮೀಪ ಹರಿಯುವ ತುಂಗಾ ನದಿಯಲ್ಲಿ ವೃದ್ಧೆಯೊಬ್ಬರ ಮೃತದೇಹ ಪತ್ತೆಯಾಗಿದೆ. ನಿನ್ನೆದಿನ ನದಿಯಲ್ಲಿ ಮೃತದೇಹ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮೃತರನ್ನ ಕುರುವಳ್ಳಿ ಸರಸತಿಯಮ್ಮ ಎಂದು ಗುರುತಿಸಲಾಗಿದೆ. ಇವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಇನ್ನೊಂದೆಡೆ ತೀರ್ಥಹಳ್ಳಿ ಪೇಟೆಯ ಮುಖ್ಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ.ಇವರನ್ನ ಹೆಗ್ಗೋಡು ನಿವಾಸಿ ಲಿಂಗಪ್ಪ ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ
ಅತ್ತ ಭದ್ರಾವತಿಯಲ್ಲಿ ಕೃಷಿಕರೊಬ್ಬರು ಟೆಲಿಗ್ರಾಂನಲ್ಲಿ ಬಂದ ಮೆಸೇಜ್ ಒಂದನ್ನ ನಂಬಿ ಟ್ರಾವೆಲ್ಸ್ ಗ್ರೂಪ್‌ವೊಂದಕ್ಕೆ ಹೂಡಿಕೆ ಮಾಡಲು ಹೋಗಿ 21.90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಧಿಕ ಲಾಭ ನೀಡುವ ಭರವಸೆ ನೀಡಿ ಇವರನ್ನ ವಂಚಿಸಲಾಗಿದೆ. ಆನಲೈನ್‌ನಲ್ಲಿ ಹಣ ಮಾಡುವ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬೇಡಿ ಎಂದು ಪೊಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ.
SUMMARY |Shivamogga, Thirthahalli, Bhadravathi, Kuruvalli, Heggodu, Tunganadi, Shivamogga Fast News
KEYWORDS | Shivamogga, Thirthahalli, Bhadravathi, Kuruvalli, Heggodu, Tunganadi, Shivamogga Fast News