Shivamogga | ರಾಗಿಗುಡ್ಡದಲ್ಲಿ ಸೈಟ್‌ ಸೇಲಾಗ್ತಿಲ್ಲ, ಹೆಣ್ಣು ಕೊಡ್ತಿಲ್ಲ| ಎಚ್ಚರಿಕೆ ನೀಡಿದ ಡಿಸಿ | ವಿಶ್ವನಾಥ್‌ರನ್ನ ನೆನಪಿಸಿದ ಶಾಸಕ

Shivamogga dc peace committee meeting ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಗುರುದತ್ತ ಹೆಗೆಡೆಯವರ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆಯು ನಡೆಯಿತು. ಅದರ ವಿವರ ಹೀಗಿದೆ

Shivamogga | ರಾಗಿಗುಡ್ಡದಲ್ಲಿ ಸೈಟ್‌ ಸೇಲಾಗ್ತಿಲ್ಲ, ಹೆಣ್ಣು ಕೊಡ್ತಿಲ್ಲ| ಎಚ್ಚರಿಕೆ ನೀಡಿದ ಡಿಸಿ | ವಿಶ್ವನಾಥ್‌ರನ್ನ ನೆನಪಿಸಿದ ಶಾಸಕ
Shivamogga dc peace committee meeting , ಡಿಸಿ ಗುರುದತ್ತ ಹೆಗೆಡೆ, ಶಾಂತಿಸಮಿತಿ ಸಭೆ

 

SHIVAMOGGA | MALENADUTODAY NEWS | Sep 3, 2024  ಮಲೆನಾಡು ಟುಡೆ 

ಶಿವಮೊಗ್ಗ ಗಣೇಶೋತ್ಸವ 2024 ಕ್ಕೆ ಸಿದ್ಧವಾಗುತ್ತಿದೆ. ಈ ನಡುವೆ ನಿನ್ನೆ ದಿನ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಮುಖ ಶಾಂತಿ ಸಮಿತಿ ಸಭೆಯನ್ನ ನಡೆಸಿದೆ. ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಮಹತ್ವದ ಸೂಚನೆಗಳನ್ನ ನೀಡಿದ್ದಾರೆ

ಗುರುದತ್ತ ಹೆಗೆಡೆ ಹೇಳಿದ್ದೇನು?

 

ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಅಂತಾ ಗುರುದತ್ತ ಹೆಗೆಡೆ ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. 

 

ಸಮಾಜ ಮತ್ತು ವ್ಯವಸ್ಥೆ ವಿರುದ್ಧ ಇರುವವರ ಮೇಲೆ ನಿಗಾ ವಹಿಸಲಾಗುತ್ತದೆ. ಕೆಲವು ಕಿಡಿಗೇಡಿಗಳಿಂದಾಗಿ ಜಿಲ್ಲೆಯ ಹೆಸರಿಗೆ ಧಕ್ಕೆ ಬರುತ್ತದೆ ಎಂದು ತಿಳಿಸದರು

ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?

ಇನ್ನೂ ಈ ಸಭೆಯಲ್ಲಿ ಮಾತನಾಡಿದ ಎಸ್‌ಪಿ ಮಿಥುನ್‌ ಕುಮಾರ್‌ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಶಾಂತಿ ಸಭೆಗಳನ್ನ ನಡೆಸಲಾಗಿದೆ. 350ಕ್ಕೂ ಅಧಿಕ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.  ಶಾಂತಿ ಕದಡಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಪಕ್ಕಾ ಎಂದಿದ್ದಾರೆ  

 

ಇಡೀ ಜಿಲ್ಲಾದ್ಯಂತ 3500 ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ  ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಾಗೂ ಈದ್ ಮಿಲಾದ್ ಹಬ್ಬ ಆಚರಣೆಯೂ ಎಲ್ಲಾ ಕಡೆ ನಡೆಯುತ್ತಿರುವುರಿಂದ ಎರಡು ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ. 

 

ಮೆರವಣಿಗೆಯ ವೇಳೆಯಲ್ಲಿ ಆಕ್ರೋಶಭರಿತವಾಗಿ ಇನ್ನೊಂದು ಧರ್ಮವನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುವ, ಪ್ರಚೋಧಿಸುವ 560 ಕ್ಕೂ ಹೆಚ್ಚು ಜನರನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬಿರುವ 1000 ಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದ್ದು ಕೆಲವು ವ್ಯಕ್ತಿಗಳನ್ನು ಗಡಿಪಾರು ಸಹ ಮಾಡಲಾಗುವುದು. 

 

ರಾಗಿಗುಡ್ಡಕ್ಕೆ ಹೆಣ್ಣು ಕೊಡ್ತಿಲ್ಲ, ಸೈಟು ಖರೀದಿಸ್ತಿಲ್ಲ

ಇದೇ ವೇಳೇ ನಿನ್ನೆ ನಡೆದ ಸಭೆಯಲ್ಲಿ ರಾಗಿಗುಡ್ಡದಲ್ಲಿ ಕಳೆದ ವರ್ಷ ನಡೆದ ಗಲಾಟೆಯ ನಂತರ ಅಲ್ಲಿನವರಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ವಿಷಯ ಕೇಳಿಬಂದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ ಅಲ್ಲದೆ ರಾಗಿಗುಡ್ಡದಲ್ಲಿ ಗಲಾಟೆ ಬಳಿಕ ಸೈಟ್‌ ವ್ಯಾಲಿವೇಷನ್‌ ಸಹ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿದೆ. 

 

ಕಳೆದ ವರ್ಷ ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದಾಗಿ ಆ ಪ್ರದೇಶದ ಪುರುಷರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿನ ನಿವೇಶನದ ದರ ಅರ್ಧಕ್ಕಿಂತಲೂ ಕಡಿಮೆ ಇಳಿದಿದೆ. ಇದನ್ನು ಅಲ್ಲಿನ ನಿವಾಸಿಗಳೇ ಹೇಳುತ್ತಿದ್ದಾರೆ. ಎರಡು ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು. 

ವಿಶ್ವನಾಥ್‌ರನ್ನ ನೆನಪಿಸಿದ ಶಾಸಕ

ಈ ನಡುವೆ ಹೊರಗಿನವರು ಬಂದು ಶಿವಮೊಗ್ಗದಲ್ಲಿ ಶಾಂತಿ ಕದಡುತ್ತಾರೆ. ಹಿಂದೂ ಕಾರ್ಯಕರ್ತ ವಿಶ್ವನಾಥ್‌ರನ್ನ ಹೊರಗಿನವರು ಕೊಲೆ ಮಾಡಿದ್ದರು ಎಂದು ನೆನಪು ಮಾಡಿಕೊಂಡರು. ಅಲ್ಲದೆ ಇದೇ ಕಾರಣಕ್ಕೆ ಗಡಿಭಾಗಗಳಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಿ, ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.



 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ



ಇನ್ನಷ್ಟು ಸುದ್ದಿಗಳು

 

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

 

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

 

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?