ವಾರದೊಳಗೆ ಏನೆಲ್ಲಾ | ಅನುಮಾಸ್ಪದನ ಕಿರಿಕ್‌, ಅಪರಿಚಿತನ ಹಲ್ಲೆ, 2ನೇ ಹೆಂಡತಿಗಾಗಿ ಗಲಾಟೆ | ಅಪರಾಧ ಸುದ್ದಿಗಳು

Shivamogga crime this week | ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ವಾರದಲ್ಲಿ ತುಂಗಾನಗರ ಪೊಲೀಸ್‌ ಠಾಣೆ, ಶಿವಮೊಗ್ಗ ಗ್ರಾಮಾಂತರ ಠಾಣೆ, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆ, ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಕ್ರೈಂ ಸುದ್ದಿಗಳು

ವಾರದೊಳಗೆ ಏನೆಲ್ಲಾ | ಅನುಮಾಸ್ಪದನ ಕಿರಿಕ್‌, ಅಪರಿಚಿತನ ಹಲ್ಲೆ, 2ನೇ ಹೆಂಡತಿಗಾಗಿ ಗಲಾಟೆ | ಅಪರಾಧ ಸುದ್ದಿಗಳು
ತುಂಗಾನಗರ ಪೊಲೀಸ್‌ ಠಾಣೆ, ಶಿವಮೊಗ್ಗ ಗ್ರಾಮಾಂತರ ಠಾಣೆ, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆ, ವಿನೋಬನಗರ ಪೊಲೀಸ್‌ ಠಾಣೆ

SHIVAMOGGA | MALENADUTODAY NEWS | Sep 1, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಕಳೆದ ವಾರದಲ್ಲಿ ಸಾಕಷ್ಟು ಕ್ರೈಂ ನಡೆದಿವೆ. ಅವುಗಳನ್ನ ಸಂಕ್ಷಿಪ್ತವಾಗಿ ನೋಡುವುದಾದರೆ. ಅವುಗಳ ವಿವರ ಹೀಗಿದೆ. 

ಅಪರಿಚಿತ ವ್ಯಕ್ತಿಯಿಂದ ಹಲ್ಲೆ | ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೇ ಮಾಡಿ ಓಡಿ ಹೋಗಿರುವ ಬಗ್ಗೆ ಸ್ಥಳೀಯರು ಪೊಲೀಸರಿ ದೂರು ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಬಂದಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಓಡಿ ಹೋಗಿದ್ದ, ಹೀಗಾಗಿ ಗಾಯಾಳುಗಳಿಗೆ ಆಸ್ಪತ್ರೆಗೆ ಸೇರಿಸಿ ಅವರಿಗೆ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದರು. ಮೊನ್ನೆ ದಿನ ಈ ಘಟನೆ ಸಂಭವಿಸಿದೆ.  

ಅನುಮಾಸ್ಪದ ವ್ಯಕ್ತಿಯ ಓಡಾಟ |  ದಿನಾಂಕ 28.08.2024ರಂದು ತುಂಗಾನಗರ ಠಾಣಾ ವ್ಯಾಪ್ತಿಯಿಂದ ದೂರುದಾರರು 112ಗೆ ಕರೆ ಮಾಡಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದಾಗಿ ತಿಳಿಸಿದ್ದರು. ವಿಷಯ ತಿಳಿದು ಸ್ಥಳ್ಕಕೆ ತೆರಳಿದ ಸಿಬ್ಬಂದಿಗೆ ಅನುಮಾನಸ್ಪದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಗೊತ್ತಾಗಿದೆ. ಆ ಬಳಿಕ ಆತನನ್ನ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಅವರ ಪೋಷಕರಿಗೆ ಮಾಹಿತಿ ರವಾನಿಸಿದ್ದಾರೆ. 

2ನೇ ಹೆಂಡತಿ ವಿಚಾರಕ್ಕೆ ಕಿರಿಕ್‌ | 27.08.2024ರಂದು ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ 2ನೇ ಹೆಂಡತಿ ವಿಚಾರಕ್ಕೆ ಇನ್ನೊಬ್ಬಾಕೆಯ ಜೊತೆಗೆ ಜಗಳ ತೆಗೆಯುತ್ತಿದ್ದ. ಇದೇ ಕಾರಣಕ್ಕೆ ಪೊಲೀಸರಿಗೆ ದೂರು ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ. ಅಲ್ಲದೆ ಆರೋಪಿ ಗಲಾಟೆ ಮಾಡುವುದನ್ನ ತಪ್ಪಿಸಿ ಆತನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. 

ಬಾರ್‌ ಬಳಿ ಯುವಕರ ಗಲಾಟೆ | ದಿ:29.08.2024ರಂದು ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬರುವ ಬಾರ್‌ ಒಂದರ ಬಳಿ ಯುವಕರ ಗುಂಪು ಗಲಾಟೆ ಮಾಡಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ERV ಸಿಬ್ಬಂದಿ ತೆರಳಿದೆ. ಅಷ್ಟೊತ್ತಿಗೆ ಆರೋಪಿಗಳು ಎಸ್ಕೇಪ್‌ ಆಗಿದ್ದರು. ಹೀಗಾಗಿ ಅವರ ವಿರುದ್ದ ಠಾಣೆಗೆ ದೂರು ತೆಗೆದುಕೊಂಡು ಹೋಗಲಾಗಿದೆ.  

 

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ

 

ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?