ಶಿವಮೊಗ್ಗ, ಭದ್ರಾವತಿ ನಡುವೆ ಅಪಘಾತ | ಬಸ್ ಪಲ್ಟಿ, ಆಟೋ ಪುಡಿಪುಡಿ | ತುಂಗಾನಗರ ಲಿಮಿಟ್ಸ್ ನಲ್ಲಿ ಇರ್ಫಾನ್ ಕಿರಿಕ್
incident of a collision between a bus and an auto rickshaw on the National Highway between Shivamogga and Bhadravathi came to light today. The incident took place on 28.10.2024.

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 30, 2024
ಶಿವಮೊಗ್ಗ ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಆಟೋದ ನಡುವೆ ಡಿಕ್ಕಿಯಾದ ಘಟನೆ ಬಗ್ಗೆ ಇವತ್ತು ವರದಿ ಬೆಳಕಿಗೆ ಬಂದಿದೆ. ಕಳೆದ 28.10.2024ರಂದು ಘಟನೆ ನಡೆದಿದೆ. ಘಟನೆಯಲ್ಲಿ ಬಸ್ ಪಲ್ಟಿಯಾದರೇ ಆಟೋ ಪೂರ್ತಿ ಜಖಂಗೊಂಡಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಎರಡು ವಾಹನಗಳನ್ನ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ.
ಇತ್ತ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾರೆಕೆಲಸದವರೊಬ್ಬರ ಮೇಲೆ ಭರ್ಚಿಯಿಂದ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ. ಇಲ್ಲಿನ ಇರ್ಫಾನ್ ಎಂಬಾತ ಮಾದಕವಸ್ತು ಸೇವಿಸಿ ಸ್ಥಳೀಯ ನಿವಾಸಿ ಗಾರೆಕೆಲಸ ಮಾಡುವ ಅಲಿಖಾನ್ ಎಂಬವರ ಸಂಬಂಧಿಯ ಜೊತೆ ಜಗಳ ತೆಗೆದಿದ್ದಾನೆ. ಅದನ್ನ ನೋಡಿ ಬಿಡಿಸಲು ಬಂದ ಅಲಿಖಾನ್‌ರವರ ಮೇಲೆ ಮಾಡಿದ್ದಾನೆ. ಈ ಕುರಿತಾಗಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
SUMMARY | incident of a collision between a bus and an auto rickshaw on the National Highway between Shivamogga and Bhadravathi came to light today. The incident took place on 28.10.2024.
KEYWORDS | collision between a bus and an auto rickshaw , National Highway ,Shivamogga and Bhadravathi