Shivamogga | ಡೈರಿಗೆ ಹಾಲು ಹಾಕಿ ವಾಪಸ್‌ ಬರುವಾಗ ಕಾದಿತ್ತು ಶಾಕ್‌ | ಬೈಕ್‌ ಡಿಕ್ಕಿಯಲ್ಲಿ ಯುವಕನ ದುರಂತ ಮರಣ

Shivamogga ayanuru incident , ಶಿವಮೊಗ್ಗದ ಆಯನೂರು ಸಮೀಪ ಗುತ್ತಿಹಳ್ಳದ ಬಳಿ ನಿನ್ನೆ ದಿನ ರಾತ್ರಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ

Shivamogga | ಡೈರಿಗೆ ಹಾಲು ಹಾಕಿ ವಾಪಸ್‌ ಬರುವಾಗ ಕಾದಿತ್ತು ಶಾಕ್‌ | ಬೈಕ್‌ ಡಿಕ್ಕಿಯಲ್ಲಿ ಯುವಕನ ದುರಂತ ಮರಣ
Shivamogga ayanuru incident , ಶಿವಮೊಗ್ಗ ಆಯನೂರು

SHIVAMOGGA | MALENADUTODAY NEWS | Sep 4, 2024  

 

ಎರಡು ಬೈಕುಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಿನ್ನೆ ಶಿವಮೊಗ್ಗದಲ್ಲಿ ನಡೆದಿದೆ. 



ಡೈರಿಗೆ ಹಾಲು ಹಾಕಿ, ಮನೆಗೆ ಬರುತ್ತಿದ್ದ ಯುವಕ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.  ಶಿವಮೊಗ್ಗ ತಾಲೂಕಿನ ಗುತ್ತಿಹಳ್ಳ ಬಳಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. 

 

ಮಂಜುನಾಥ್ ಗದ್ದೆಮನೆ(27) ಮೃತಪಟ್ಟ ದುರ್ದೈವಿ, ಇವರು ಸಂಪಿಗೆಹಳ್ಳ ನಿವಾಸಿಯಾಗಿದ್ದು,  ಗುತ್ತಿಹಳ್ಳದ ಕಡೆಯಿಂದ ಡೈರಿಗೆ ಹಾಲು ಹಾಕಿ ಮನೆಗೆ ವಾಪಸ್‌ ಆಗುತ್ತಿದ್ದರು, ಈ ವೇಳೆ ಆಯನೂರಿನಿಂದ ಬೆಜ್ಜವಳ್ಳಿ ಕಡೆಗೆ ಹೋಗುತ್ತಿದ್ದ ಒಂದು ಬೈಕ್ ಡಿಕ್ಕಿಯಾಗಿದೆ

 

ಈ ವೇಳೆ ಬೈಕ್‌ನಲ್ಲಿದ್ದವರೆಲ್ಲರಿಗೂ ಗಂಭೀರ ಗಾಯವಾಗಿದ್ದು ಅವರನ್ನ ಮೆಗ್ಗಾನ್‌ ಆಸ್ಪತ್ರೆಗೆ ಸ್ಥಳೀಯರು ಶಿಫ್ಟ್‌ ಮಾಡಿದ್ದರು. ಇದರ ನಡುವೆ ತೀವ್ರ ರಕ್ತಸ್ರಾವದಿಂದಾಗಿ ಮಂಜುನಾಥ್‌ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೂ ಗಂಭೀರ ಗಾಯಗಳಾಗಿವೆ. 

 

ಇನ್ನಷ್ಟು ಸುದ್ದಿಗಳು

 

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

 

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

 

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?