ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎದುರಾಗಿದ್ಯಾ ಶಾಕ್? ವಿಮಾನಗಳ ಹಾರಾಟ ಸೆಪ್ಟೆಂಬರ್ 23 ವರೆಗೆ ಮಾತ್ರ ಸಾಧ್ಯನಾ?
Shivamogga airport story update ̧ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ನವೀಕರಣವನ್ನ ಡಿಜಿಸಿಎ ಕೇವಲ ಒಂದು ತಿಂಗಳ ಅವಧಿಗೆ ವಿಸ್ತರಿಸಿದೆ. ಪೂರ್ಣ ವರ್ಷಕ್ಕೆ ವಿಸ್ತರಿಸಲು ಸುರಕ್ಷತಾ ಸವಾಲುಗಳನ್ನ ಪೂರೈಸಲು ಸೂಚಿಸಿದೆ.
SHIVAMOGGA | MALENADUTODAY NEWS | Sep 3, 2024 ಮಲೆನಾಡು ಟುಡೆ
Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸೆಪ್ಟೆಂಬರ್ ಅಂತ್ಯದ ನಂತರ ವಿಮಾನ ಹಾರಾಟ ಸ್ಥಗಿತಗೊಳ್ಳುತ್ತಾ? ಹೀಗೊಂದು ಆತಂಕ ಇದೀಗ ಮನೆ ಮಾಡಿದೆ. ಇದಕ್ಕೆ ಕಾರಣ ಆಗಿರೋದು ವಿಮಾನ ನಿಲ್ದಾಣ ಚಲಾವಣೆಗೆ ಲೈಸೆನ್ಸ್ ನೀಡುವ ಡಿಜಿಸಿಎ (Directorate General of Civil Aviation) ಶಿವಮೊಗ್ಗ ಏರ್‌ಪೋರ್ಟ್ ಪರವಾನಿಗೆಯನ್ನ ನವೀಕರಿಸಲು ಹಿಂದೇಟು ಹಾಕುತ್ತಿದೆ.
ಈ ಸಂಬಂಧ ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಕೇವಲ ಒಂದು ತಿಂಗಳ ಮಟ್ಟಿಗೆ ವಿಮಾನದ ಲೈಸೆನ್ಸ್ ನವೀಕರಣಗೊಂಡಿದೆ. ಈ ಸಂಬಂಧ ಪೂರ್ಣ ಪ್ರಕ್ರಿಯೆಗಳು ಮುಗಿದರೆ ಮಾತ್ರ ಡಿಜಿಸಿಎ ಪೂರ್ಣ ವರ್ಷದ ಮಟ್ಟಿಗೆ ಪರವಾನಿಗೆ ನವೀಕರಣ ಮಾಡಲಿದೆ ಎನ್ನಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಡೆಯುತ್ತಿದೆ. (Karnataka State Industrial and Infrastructure Development Corporation) ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟಗಳನ್ನ ನಡೆಸಲು ಡಿಜಿಸಿಎ ಲೈಸೆನ್ಸ್ ನವೀಕರಣ ಮಾಡಬೇಕು.
ಶಿವಮೊಗ್ಗ ವಿಮಾನ ನಿಲ್ದಾಣ
ಕಳೆದ ವರ್ಷ 2023 ರ ಆಗಸ್ಟ್‌ನಲ್ಲಿ ವಾಣಿಜ್ಯ ಚಟುವಟಿಕೆಯನ್ನ ಆರಂಭಿಸಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಪರವಾನಿಗೆಯ ಗಡುವು ಈ ವರ್ಷ ಆಗಸ್ಟ್ 23 ವರೆಗೆ ಮಾತ್ರವಿದೆ. ಇದರ ನಡುವೆ ಲೈಸೆನ್ಸ್ ನವೀಕರಣಕ್ಕೆ ಕೆಎಸ್‌ಐಐಡಿಸಿ ಪ್ರಯತ್ನ ನಡೆಸಿದೆ. ಆದರೆ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಸುರಕ್ಷತಾ ಪ್ರದೇಶಕ್ಕೆ ಸಂಬಂಧಿಸಿದಂತೆ ನಿಗದಿತ ಮಾನದಂಡವನ್ನು ಅನುಸರಿಸಿಲ್ಲ ಹಾಗೂ ಫೈರ್ ಸೇಫ್ಟಿ ವಿಚಾರದಲ್ಲಿ ಅಗತ್ಯ ಸಿಬ್ಬಂದಿಗಳನ್ನ ಹೊಂದಿಲ್ಲ ಮತ್ತು ಅಗ್ಯತ್ಯ ಸುರಕ್ಷತಾ ಸಾಮಗ್ರಿಗಳನ್ನ ಇದುವರೆಗೂ ಹೊಂದಿಲ್ಲ , ಕ್ವಿಕ್ ರಿಯಾಕ್ಷನ್ ಟೀಂ ಇಲ್ಲ , ಭದ್ರತಾ ಸಿಬ್ಬಂದಿಯ ಕೊರತೆಯಿದೆ ಎಂಬ ಕಾರಣಗಳನ್ನ ನೀಡಿ ಕೇವಲ ಒಂದು ತಿಂಗಳ ಮಟ್ಟಿಗೆ ಮಾತ್ರ ಪರವಾನಿಗೆಯನ್ನ ವಿಸ್ತರಿಸಿದೆ.
ಹೀಗಾಗಿ ಸೆಪ್ಟೆಂಬರ್ 23 ವರೆಗೇ ಮಾತ್ರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ನಡೆಸಲು ಸಾಧ್ಯವಾಗುತ್ತಿದ್ದು, ಆನಂತರ ವಿಮಾನ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?