ಹೊಳೆಚಿನ್ನದ ದೊಡ್ಡ ಮೂಲಕ್ಕೆ ಕೊನೆಗೂ ದಾಳಿ ಇಟ್ಟ ಅಧಿಕಾರಿಗಳು | ಮಲೆನಾಡು ಟುಡೆ ವರದಿ ಪರಿಣಾಮ

Shivamogga Tahsildar Rajeev has launched a raid,  sand mining

ಹೊಳೆಚಿನ್ನದ ದೊಡ್ಡ ಮೂಲಕ್ಕೆ ಕೊನೆಗೂ ದಾಳಿ ಇಟ್ಟ ಅಧಿಕಾರಿಗಳು | ಮಲೆನಾಡು ಟುಡೆ ವರದಿ ಪರಿಣಾಮ
Shivamogga Tahsildar Rajeev has launched a raid,  sand mining

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   ‌

ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಗಣಿಗಾರಿಕೆಯ ದುಡ್ಡಿನ ಲೂಟಿ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ವರದಿಯಲ್ಲಿ ಕೆಲವೊಂದು ಪ್ರ‍ಶ್ನೆಗಳನ್ನು ಸಹ ಅಧಿಕಾರ ವ್ಯವಸ್ಥೆಯ ಮುಂದಿಟ್ಟಿತ್ತು. ಮೇಲಾಗಿ ವರದಿಯ ಮೇಲ್ಮಟ್ಟದವರೆಗೂ ತಲುಪಿ, ಈ ಬಗ್ಗೆ ವಿಚಾರಣೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದವು. ಇದರ ನಡುವೆ ಇದೀಗ ಹಾಡೋನಾಹಳ್ಳಿಯ ಅಕ್ರಮ ಮರಳು ಗಣಿಗಾರಿಕೆಯ ಅಡ್ಡೆ ಮೇಲೆ  ತಹಶೀಲ್ದಾರ್ ರಾಜೀವ್ ನೇತೃತ್ವದಲ್ಲಿ ದಾಳಿ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು , ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರಿಯಾ ಹಾಗೂ ಇತರೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಶಿವಮೊಗ್ಗದಲ್ಲಿ ಹೊಳೆ ಚಿನ್ನದ ಲೂಟಿಯಲ್ಲಿ ಕ, ಅ, ಮೇ, ಪೊ ಇಲಾಖೆಗಳಿಗೆ ತಿಂಗಳ ಲಕ್ಷಗಟ್ಟಲೇ ಇನ್‌ಕಮ್‌ | ನಿಜವಾ?

ಯಥಾಪ್ರಕಾರ, ದಾಳಿವೇಳೆ ಅಕ್ರಮ ದಂಧೆಕೋರರು ನಾಪತ್ತೆಯಾಗಿದ್ದರು. ಸ್ಥಳದಲ್ಲಿ ಅಪಾರ ಪ್ರಮಾಣದ ಮರಳು ಮಾತ್ರ ಕಂಡು ಬಂದಿತ್ತು. ಅಲ್ಲದೆ ಮರಳು ತೆಗೆಯಲು ಬಳಸುವ ಮೋಟಾರ್‌ ಸೇರಿದಂತೆ ವಿವಿಧ ಸಾಮಗ್ರಿಗಳು ಪತ್ತೆಯಾಗಿವೆ. ಇನ್ನೂ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮದ ಕುರಿತು ಪರಿಶೀಲನೆ ನಡೆಸ್ತಿದ್ದಾರೆ. ಬರುವ ದಿನಗಳಲ್ಲಿ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.

SUMMARY |  Shivamogga Tahsildar Rajeev has launched a raid on sand mining.


KEY WORDS |‌ Shivamogga Tahsildar Rajeev has launched a raid,  sand mining