ಇಂದಿರಾ ಕ್ಯಾಂಟೀನ್‌ನಲ್ಲಿ ಸಚಿವರಿಗೆ ಬೇರೆ ಊಟ | ಶಿವಮೊಗ್ಗ ಮಹಾನಗರ ಪಾಲಿಕೆ ಸ್ಪಷ್ಟನೆ ಏನು ಗೊತ್ತಾ?
Minister Rahim Khan was served food from another hotel ,Indira Canteens, Shivamogga Municipal Corporation Commissioner Kavitha Yogappanavar
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024
ಶಿವಮೊಗ್ಗಕ್ಕೆ ಬಂದಿದ್ದ ಸಚಿವರ ರಹೀಂಖಾನ್‌ರವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಬೇರೆ ಹೋಟೆಲ್‌ನಿಂದ ಊಟ ಪೂರೈಸಲಾಗಿತ್ತು ಎಂಬ ಅನುಮಾನ ದಟ್ಟವಾಗಿತ್ತು. ಇದಕ್ಕೆ ಪೂರಕವಾಗಿ ಸಚಿವರು ಸಹ ಸಂಶಯ ವ್ಯಕ್ತಪಡಿಸಿ ಮಾತನಾಡಿದ್ದಷ್ಟೆ ಅಲ್ಲದೆ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಪೌರಾಡಳಿತ ಸಚಿವ ರಹೀಂ ಖಾನ್ ಶಿವಮೊಗ್ಗಕ್ಕೆ ಭೇಟಿಕೊಟ್ಟ ದಿನ BH ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಪರಿಶೀಲನೆ ನಡೆಸಿದರು. ಆ ಬಳಿಕ ಅಲ್ಲಿಯೇ ಕಾಂಗ್ರೆಸ್ ಮುಖಂಡರು ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಊಟ ಮಾಡಿದ್ದರು. ಊಟದ ಮೆನು ಹಾಗೂ ಕ್ವಾಲಿಟಿ ಬಗ್ಗೆ ಸಚಿವರೇ ಸಂಶಯ ವ್ಯಕ್ತಪಡಿಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಊಟದ ವಿಚಾರದಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಬೇರೆಯದ್ದೆ ಅಭಿಪ್ರಾಯ ರವಾನೆ ಆಗುತ್ತದೆ. ಹಾಗೆ ಆಗಲು ಅವಕಾಶ ನೀಡುವುದಿಲ್ಲ ಎಂದಿದ್ದರು.
ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆ, ವಿವಾದ ದೊಡ್ಡದಾದ ಬಳಿಕ ಸ್ಪಷ್ಟನೆ ನೀಡಿದೆ. ನವೆಂಬರ್ 25ರಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಶಿವಮೊಗ್ಗದ ಇಂದಿರಾ ಕ್ಯಾಂಟೀನ್ ಮತ್ತು ಗಾಡಿಕೊಪ್ಪದಲ್ಲಿರುವ ಮಾಸ್ಟರ್ ಕಿಚನ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಮಾಸ್ಟರ್ ಕಿಚನ್‌ನಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಸರಬರಾಜು ಮಾಡುವ ಆಹಾರ ಹೊಟೇಲ್ ಆಹಾರವೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದದ್ದು ಎಂದು ಪ್ರಕಟಣೆ ನೀಡಲಾಗಿದೆ.
ಪ್ರಕಟಣೆಯ ಪೂರ್ಣ ರೂಪ
ದಿನಾಂಕ 25.11.2024 ರಂದು ಮಾನ್ಯ ಪೌರಾಡಳಿತ ಇಲಾಖಾ ಸಚಿವರಾದ ಮಾನ್ಯ ರಹೀಮ್ ಖಾನ್ (ಮಾನ್ಯ ಪೌರಾಡಳಿತ ಮತ್ತು ಹಜ್ ಸಸಚಿವರು ' ರವರು ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯಲ್ಲಿರುವ ಡಿ.ಡಿ.ಪಿ.ಐ ಕಛೇರಿ ಆವರಣದ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಮುಂದುವರೆದು ಸಾಗರ ರಸ್ತೆಯಲ್ಲಿರುವ ಮಾಸ್ಟರ್ ಕಿಚನ್, ಗಾಡಿಕೊಪ್ಪದಲ್ಲಿ ಆಹಾರವನ್ನು ತಯಾರಿಸಿ ನಗರದಲ್ಲಿರುವ 4 ಇಂದಿರಾ ಕ್ಯಾಂಟೀನ್ ಗಳಾದ 1. ಡಿ.ಡಿ.ಪಿ.ಐ ಕಛೇರಿ ಆವರಣದ 2. ಶಿವಾಲಯ 3. ಖಾಸಗಿ ಬಸ್ ನಿಲ್ದಾಣದ ಹತ್ತಿರ, ಮತ್ತು 4. ಎ.ಪಿ.ಎಮ್.ಸಿ ಮಾರುಕಟ್ಟೆ ಹತ್ತಿರ. ಇರುವ ಇಂದಿರಾ ಕ್ಯಾಂಟೀನ್ ಗಳಿಗೆ ಸರಬರಾಜು ಮಾಡಿರುವ ಆಹಾರದ ಗುಣಮಟ್ಟವನ್ನು ಸಚಿವರು ಪರೀಕ್ಷಿಸಿರುತ್ತಾರೆ. ಆದರೆ ಕೆಲವು ಮಾದ್ಯಮಗಳಲ್ಲಿ ಇಂದಿರಾ ಕ್ಯಾಂಟೀನ್ ಮಾಸ್ಟರ್ ಕಿಚನ್ ನಿಂದ ವಾಹನದ ಮೂಲಕ ಸರಬರಾಜು ಮಾಡಿದ ಆಹಾರವನ್ನು ಹೋಟೆಲ್ ನಿಂದ ತರಿಸಿದ ಆಹಾರವೆಂದೂ ಹಾಗೂ ಮಾನ್ಯ ಸಚಿವರಿಗೆ ಯಾಮಾರಿಸಿದರೆಂದು ತಪ್ಪಾಗಿ ಪುಸಾರ ಮಾಡಲಾಗಿದ್ದು, ಸದರಿ ಮಾಹಿತಿಯು ಸತ್ಯಕ್ಕೆ ದೂರವಾಗಿರುತ್ತದೆಯೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ವಿವರಿಸಿ ತಿಳಿಯಪಡಿಸಬಯಸುತ್ತೇನೆ.
ಕವಿತಾ ಯೋಗಪ್ಪನವರ್, ಪಾಲಿಕೆ ಆಯುಕ್ತೆ
SUMMARY | Minister Rahim Khan was served food from another hotel at Indira Canteens. Shivamogga Municipal Corporation Commissioner Kavitha Yogappanavar
KEY WORDS | Minister Rahim Khan was served food from another hotel ,Indira Canteens, Shivamogga Municipal Corporation Commissioner Kavitha Yogappanavar