ಮೈಸೂರು ದಸರಾ ಮತ್ತು ಶಿವಮೊಗ್ಗ ದಸರಾ ಜಂಬೂಸವಾರಿ? ಆನೆ ನ್ಯಾಯದ ಪ್ರಶ್ನೆ ? ಜೆಪಿ ಬರೆಯುತ್ತಾರೆ. 

elephants were brought from Sakrebail elephant camp for the Shivamogga Jumboo Savari and JP writes about their maintenance

ಮೈಸೂರು ದಸರಾ ಮತ್ತು ಶಿವಮೊಗ್ಗ ದಸರಾ ಜಂಬೂಸವಾರಿ? ಆನೆ ನ್ಯಾಯದ ಪ್ರಶ್ನೆ ? ಜೆಪಿ ಬರೆಯುತ್ತಾರೆ. 
elephants,  Sakrebail elephant camp , Shivamogga Jumboo Savari, JP writes  

SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 8, 2024 | SHIVAMOGGA POLICE NEWS |  

ಮೈಸೂರು ದಸರಾ ಮತ್ತು ಶಿವಮೊಗ್ಗ ದಸರಾ ಜಂಬೂಸವಾರಿ ? ಆನೆಗಳದ್ದೇ ಪ್ರಶ್ನೆ ? ಜೆಪಿ ಬರೆಯುತ್ತಾರೆ. 

ಮೈಸೂರು ದಸರಾದ ಅಂಬಾರಿ ಹೊರುವ ಆನೆಗಳಿಗೆ ಒಂದು ನ್ಯಾಯ..ಶಿವಮೊಗ್ಗ ದಸರಾ ಅಂಬಾರಿ ಹೊರುವ ಆನೆಗಳಿಗೆ ಮತ್ತೊಂದು ನ್ಯಾಯವಾ? ಹೀಗೊಂದು ಪ್ರಶ್ನೆ ಜನರೇ ಕೇಳುತ್ತಿದ್ದಾರೆ. ಮೈಸೂರಲ್ಲಿ ಅಂಬಾರಿ ಹೊರುವ ಆನೆಗಳಿಗೆ ಹದಿನೈದು ದಿನ ಮೊದಲೇ ಆನೆಗಳಿಗೆ ತಾಲೀಮು ನೀಡ್ತಾರೆ..ದಷ್ಟಪುಷ್ಟವಾಗಿರಲು ಪೌಷ್ಟಿಕ ಆಹಾರ ನೀಡುತ್ತಾರೆ..ಮಾವುತ ಕಾವಾಡಿಗಳನ್ನು ಮನೆಮಗನಂತೆ ಕಾಣ್ತಾರೆ…

ಶಿವಮೊಗ್ಗ ಜಂಬೂಸವಾರಿ

ಆದ್ರೆ ಶಿವಮೊಗ್ಗದಲ್ಲಿ  ಅಂಬಾರಿ ಹೊರುವ ಮೂರು ಆನೆಗಳಿಗೆ ಕೇವಲ ಐದು ದಿನದ ತಾಲೀಮು ಸಾಕಾ...ಮೆರವಣಿಗೆಯಲ್ಲಿ ಅಲ್ಲಲ್ಲಿ ನಿಲ್ಲುವ ಸಂದರ್ಭಗಳು ಹೆಚ್ಚಿರೋದ್ರಿಂದ ಆನೆಗಳು ಸುಸ್ತಾಗಿ ಬೆದರುವ ಸಾಧ್ಯತೆಗಳೇ ಹೆಚ್ಚಿರುತ್ತೆ. ಅದ್ರಲ್ಲೂ ಈ ಬಾರಿ ಅರಣ್ಯ ಇಲಾಖೆ ತಾಲೀಮಿಗೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅಂಬಾರಿ ಹೊರುವ ಸಾಗರ್ ಅಕ್ಕಪಕ್ಕ ಹೆಣ್ಣು ಕುಮ್ಕಿ ಆನೆಗಳು ಹೆಜ್ಜೆ ಹಾಕಬೇಕಾದ ಸ್ಥಳದಲ್ಲಿ ಈ ಬಾರಿ ಗಂಡಾನೆಗಳೇ ಸಾಥ್ ನೀಡಲಿವೆ. ಈ ಸಲ ಒಂದರ ಹಿಂದೊಂದು ಆನೆಗಳು ಸಾಗುತ್ತವೆ ಎಂದು ಹೇಳಲಾಗುತ್ತಿದೆಯಾದರೂ ಸಹ, ಗಂಡಾನೆಗಳನ್ನ ನಿಯಂತ್ರಿಸಲು ಹೆಣ್ಣಾನೆಗಳ ಅಗತ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. 

ಕೇವಲ ಐದು ದಿನ ಮೊದಲು ನಗರಕ್ಕೆ

ಮೈಸೂರು ದಸರಾ ನಂತರ ರಾಜ್ಯದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯುವ ಶಿವಮೊಗ್ಗ ದಸರಾ ಉತ್ಸವದಲ್ಲಿ ಇತ್ತಿಚ್ಚಿನ ವರ್ಷಗಳಲ್ಲಿ ಮೂರು ಆನೆಗಳನ್ನು ಅಂಬಾರಿ ಹೊರಲು ಬಳಸಿಕೊಳ್ಳಲಾಗುತ್ತಿದೆ.ಜಿಲ್ಲಾಡಳಿತ ಮಹಾನಗರ ಪಾಲಿಕೆ ಆನೆಗಳ ಲಾಲನೆ ಪಾಲನೆ ಉಸ್ತುವಾರಿ ಹೊತ್ತಿರುತ್ತಾರೆ. ಇಷ್ಟು ವರ್ಷ ಶಿವಮೊಗ್ಗ ದಸರ ಉತ್ಸವದಲ್ಲಿ ಅಂಬಾರಿ ಹೊರುವ ಸಾಗರ್ ಆನೆಗೆ ಭಾನುಮತಿ ಗಂಗೆ  ಆನೆಗಳು ಸಾಥ್ ನೀಡುತ್ತಿದ್ದವು . ಈ ಆನೆಗಳನ್ನು ಕೇವಲ ಐದು ದಿನದ ಮೊದಲು ಶಿವಮೊಗ್ಗ ನಗರಕ್ಕೆ ಕರೆತರಲಾಗುತ್ತದೆ.ಇದು ಪ್ರಾಣಿ ಪ್ರೀಯರನ್ನು ಕೆರಳಿಸಿದೆ.

ಮೈಸೂರು ದಸರಾದಲ್ಲಿ ಆನೆಗಳಿಗೆ ತಿಂಗಳ ಮೊದಲೇ ತೂಗಿ. ಅವುಗಳಿಗೆ ಉತ್ತಮ ಆಹಾರ ನೀಡಲಾಗುತ್ತೆ.ಒಳ್ಳೆ ತಾಲೀಮು ಕೊಡಲಾಗುತ್ತೆ.ಆದರೆ ಶಿವಮೊಗ್ಗದಲ್ಲಿ ಕೇವಲ ಐದು ದಿನದ ತರಬೇತಿ ಆನೆಗಳಿಗೆ ಸಾಕಾ ಎಂಬುದು ಪ್ರಶ್ನೆಯಾಗಿ ಉಳಿದಿದೆ.  ಅಲ್ಲದೆ ಅವುಗಳಿಗೆ ನೀಡುವ ಶಕ್ತಿಯುತ ಆಹಾರ ಸಾಕಾಗುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ. 

ಮಾವುತ ಕಾವಾಡಿ ವೈದ್ಯರನ್ನು ಮನುಷ್ಯರಂತೆ ಕಾಣಿ

ಪ್ರತಿ ದಸರಾದಲ್ಲಿ ಸಕ್ರೆಬೈಲ್‌ ಆನೆ ಬಿಡಾರ ಭೇಟಿ ಕೊಟ್ಟು ಬಾಗಿನ ಅರ್ಪಿಸಿ, ಸ್ವಾಗತ ಕೋರುವ ಮಹಾನಗರ ಪಾಲಿಕೆ ಆಡಳಿತ ವರ್ಗ, ಶಿವಮೊಗ್ಗಕ್ಕೆ ದಸರಾ ಆನೆಗಳು ಬಂದಾಗ ಗೌರವಯುತವಾಗಿ ನಡೆಸಿಕೊಂಡಿಲ್ಲ. ಮಾವುತ ಕಾವಾಡಿಗಳನ್ನು ಕೇಳುವವರು ದಿಕ್ಕಿರಲಿಲ್ಲ. ಅವರ ಊಟ ಉಪಚಾರದ ಬಗ್ಗೆ ಗಮನ ಹರಿಸುವವರಿರಲಿಲ್ಲ. ವೈದ್ಯರನ್ನು ಸೌಜನ್ಯಕ್ಕೂ ಕೇಳುವವರಿಲ್ಲ. ಮೈಸೂರು ದಸರಾದಲ್ಲಿ ಮಾವುತ ಕಾವಾಡಿಗಳಿಗೆ ಸಿಗುವ ಗೌರವ ಮರ್ಯಾದೆಯ ಕಿಂಚಿತ್ತು ಭಾಗವಾದರೂ ಸಕ್ರೆಬೈಲು ಮಾವುತ ಕಾವಾಡಿಗಳಿಗೆ ಸಿಗಬೇಕಲ್ಲವೇ..ಈ ಬಾರಿ ಅಂತಹ ತಪ್ಪುಗಳು ಆಗದಿರಲಿ.

ಮೆರವಣಿಗೆ ನಿರಂತರ ಸಾಗಬೇಕು..ಅಲ್ಲಲ್ಲಿ ನಿಂತರೂ ಆನೆ ಸುಸ್ತಾಗುತ್ತದೆ 

ಇನ್ನು 450 KG ತೂಕ ಇರುವ ಬೆಳ್ಳಿ ಅಂಬಾರಿ ಹಾಗು ನಮ್ದ ಗಾದಿ ಒಟ್ಟು ಸೇರಿ ಸರಾಸರಿ 900 ಕೇಜಿ ಭಾರವನ್ನು ಸಾಗರ್ ಆನೆ ಹೊರಬೇಕಾಗಿದೆ..ಮೈಸೂರಲ್ಲಾದರೆ..ಮೆರವಣಿಗೆಯಲ್ಲಿ ಆನೆಗಳು ನಿಲ್ಲೋದಿಲ್ಲ..ಗುರಿ ಮುಟ್ಟುವರರೆಗೂ ನಿಲ್ಲದೆ ಸಾಗುತ್ತವೆ.

ಆದರೆ ಶಿವಮೊಗ್ಗದಲ್ಲಿ ನಡೆಯುವ ದಸರಾ ಮೆರವಣಿಗೆಯಲ್ಲಿ ಸಾಗರ್ ಆನೆ ಅಂಬಾರಿ ಹೊತ್ತು ಅಲ್ಲಲ್ಲಿ ಬಹಳ ಹೊತ್ತು ಅಲ್ಲಲ್ಲಿ ನಿಲ್ಲಬೇಕಾದ ಸಂದರ್ಭವಿದೆ .ನಿಂತು ನಿಂತು ಸಾಗುವ ಮೆರವಣಿಗೆಯಲ್ಲಿ ಆನೆ ಸುಸ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಆನೆ ಕೆರಳದಂತೆ ಎಚ್ಚರ ವಹಿಸಬೇಕಿದೆ

ದಸರಾಕ್ಕೆ ಆನೆ ತರಿಸುವುದು ಸುಲಭದ ಮಾತಲ್ಲ. ಏಕೆಂದರೆ ಆನೆಯೊಂದು ಕೆರಳಿದರೆ ಅದರಿಂದ ಅಪಾಯವು ಅಷ್ಟೆ ದೊಡ್ಡದಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರಿನಲ್ಲಿ ಆನೆಯೊಂದು ಇನ್ನೊಂದು ಆನೆಯನ್ನ ಅಟ್ಟಾಡಿಸಿದ ಘಟನೆ ಹಾಗೂ ಮಂಡ್ಯದಲ್ಲಿ ತಾಲೀಮು ವೇಳೆ ಆನೆಯೊಂದು ಬೆದರಿದ ಘಟನೆ ನಡೆದಿದೆ. ಈ ಬಗ್ಗೆ ಶಿವಮೊಗ್ಗದಲ್ಲಿಯು ಎಚ್ಚರವಹಿಸುವ ಅಗತ್ಯ ನಿಶ್ಚಲವಾಗಿದೆ. 

ಜನಸಾಗರದ ಮೆರವಣಿಗೆಯ ಪರಿಚಯವಿಲ್ಲದ ಆನೆಗಳನ್ನು ಏಕಕಾಲದಲ್ಲಿ ಜನರ ಮದ್ಯೆ ತಂದಾಗ ಅವು ಗಾಬರಿಗೊಳ್ಳದೆ ಇರಲಾರದು.  ಈ ವಿಚಾರದಲ್ಲಿ ಆನೆಯನ್ನು ನಿಯಂತ್ರಿಸುವ  ಪ್ರಾವಿಣ್ಯತೆ ಹೊಂದಿರುವವರ ಕೊರತೆ ಬಿಡಾರದಲ್ಲಿಯೇ  ಎದ್ದುಕಾಣುತ್ತಿದೆ. ಅನುಭವವಿರುವ ಮಾವುತ ಕಾವಾಡಿ ಜಮೇದಾರ್ ಗಳು ನಿವೃತ್ತರಾದ ನಂತರ ಅವರ ಅನುಭವಗಳು ಅವರೊಂದಿಗೆ ನಿವೃತ್ತಗೊಂಡಿವೆ 

ಒಟ್ಟಾರೆ, ಮೈಸೂರು ದಸರಾ ಉತ್ಸವದಲ್ಲಿ ಆನೆಗಳನ್ನು ಬಳಸಿಕೊಳ್ಳುವ ರೀತಿಗೂ..ಶಿವಮೊಗ್ಗದ ಆನೆಗಳನ್ನು ನೋಡಿಕೊಳ್ಳುವ ರೀತಿಗೂ ಬಹಳ ವ್ಯತ್ಯಾಸವಿದೆ.ಮೈಸೂರಲ್ಲಾದರೆ ಅಂಬಾರಿ ಹೊತ್ತು ಹಬ್ಬ ಮುಗಿಸಿಕೊಂಡು ಬಿಡಾರಕ್ಕೆ ವಾಪಸ್ಸಾಗುವ ಆನೆಗಳ ತೂಕ ಇನ್ನು ಹೆಚ್ಚಾಗಿರುತ್ತದೆ.ಆದರೆ ಶಿವಮೊಗ್ಗದಲ್ಲಿ ಅಂಬಾರಿ ಹೊತ್ತ ಆನೆಗಳು..ತೂಕ ಇಳಿಸಿಕೊಂಡು ಬಿಡಾರ ಸೇರುತ್ತವೆ ಎಂಬುದೇ ವಿಪರ್ಯಾಸ.

SUMMARY | The elephants were brought from Sakrebail elephant camp for the Shivamogga Jumboo Savari and JP writes about their maintenance. . 

KEYWORDS |elephants,  Sakrebail elephant camp , Shivamogga Jumboo Savari, JP writes