ಕರೆಂಟ್‌ ಕಂಬಕ್ಕೆಬೈಕ್‌ ಡಿಕ್ಕಿ, ಹೋಮ್‌ ಗಾರ್ಡ್‌ ಸಾವು | ಜನ್ನಾಪುರದಲ್ಲಿ ಎಮ್ಮೆಯ ರಕ್ಷಣೆ | ಪೇಪರ್‌ ಟೌನ್‌ನಲ್ಲಿ ಕುಡಿದು ಯುವಕರ ಕಿರಿಕ್

Shivamogga Fast News, Kommanalu, Bhadravathi, Jannapura, Shivamogga Rural Police Station, Home Guard, Paper Town Police Station

ಕರೆಂಟ್‌ ಕಂಬಕ್ಕೆಬೈಕ್‌ ಡಿಕ್ಕಿ, ಹೋಮ್‌ ಗಾರ್ಡ್‌ ಸಾವು | ಜನ್ನಾಪುರದಲ್ಲಿ ಎಮ್ಮೆಯ ರಕ್ಷಣೆ | ಪೇಪರ್‌ ಟೌನ್‌ನಲ್ಲಿ ಕುಡಿದು ಯುವಕರ ಕಿರಿಕ್
Shivamogga Fast News, Kommanalu, Bhadravathi, Jannapura, Shivamogga Rural Police Station, Home Guard, Paper Town Police Station

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌ 

 

ಶಿವಮೊಗ್ಗದ ಕೊಮ್ಮನಾಳ್‌ ಬಳಿಯಲ್ಲಿ ವಿದ್ಯುತ್‌ ಕಂಬಕ್ಕೆ ಬೈಕ್‌ವೊಂದು ಡಿಕ್ಕಿಯಾದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಶಿವು ಎಂಬವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಹರಮಘಟ್ಟದವರಾದ ಶಿವು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.  ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋರಿಗೆ ಬಿದ್ದ ಎಮ್ಮೆಯ ರಕ್ಷಣೆ

ಭದ್ರಾವತಿ ನಗರದ ಜನ್ನಾಪುರದಲ್ಲಿ ಎರಡು ಮನೆಯ ಗೋಡೆ ಮಧ್ಯದಲ್ಲಿರುವ ಚರಂಡಿಗೆ ಎಮ್ಮೆಯೊಂದು ಬಿದ್ದಿತ್ತು. ಇದನ್ನ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನ ಚರಂಡಿಯಿಂದ ಮೇಲಕ್ಕೆ ಎತ್ತಿದದ್ದಾರೆ.  

ಕುಡಿದು ಯುವಕರ ಗಲಾಟೆ

ಇತ್ತ ಭದ್ರಾವತಿ ಪೇಪರ್‌ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ  ಅಪರಿಚಿತ ಯುವಕರು ಮಧ್ಯಪಾನ ಮಾಡಿ ಗಲಾಟೆ ಮಾಡಿದ್ದಾರೆ. ಇದರಿಂದ ಕಿರಿಕಿರಿಗೊಳಗಾದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು  ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ ಆಗಮಿಸಿದ್ದಾರೆ. ಪೊಲೀಸ್‌ ವ್ಯಾನ್‌ ನೋಡುತ್ತಲೇ ಸ್ಥಳದಲ್ಲಿದ್ದ ಯುವಕರು ಓಡಿ ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. 

SUMMARY | Shivamogga Fast News, Kommanalu, Bhadravathi, Jannapura, Shivamogga Rural Police Station, Home Guard, Paper Town Police Station

KEY WORDS  |Shivamogga Fast News, Kommanalu, Bhadravathi, Jannapura, Shivamogga Rural Police Station, Home Guard, Paper Town Police Station