ಅಪಾಯಕಾರಿಯಾದ ತುಂಗಾ | ಎಲ್ಲೆಲ್ಲಿ ನುಗ್ಗಲಿದೆ ನೀರು | ಕಾಳಜಿ ಕೇಂದ್ರ ಓಪನ್‌ ಮಾಡಿದ ಪಾಲಿಕೆ

Shivamogga CityCorporation has opened a care centre in the wake of tunga river crossing the danger mark ತುಂಗಾ ನದಿ ಅಪಾಯದ ಮಟ್ಟ ಮೀರಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಕಾಳಜಿ ಕೇಂದ್ರ ಓಪನ್‌ ಮಾಡಿದೆ

ಅಪಾಯಕಾರಿಯಾದ ತುಂಗಾ | ಎಲ್ಲೆಲ್ಲಿ ನುಗ್ಗಲಿದೆ ನೀರು | ಕಾಳಜಿ ಕೇಂದ್ರ ಓಪನ್‌ ಮಾಡಿದ ಪಾಲಿಕೆ
Shivamogga CityCorporation

SHIVAMOGGA | MALENADUTODAY NEWS |  Jul 31, 2024 

ಮಳೆಯ ಅಬ್ಬರಕ್ಕೆ ತುಂಗಾನದಿಯಲ್ಲಿ ನೀರಿನ ಅಬ್ಬರ ಎಲ್ಲೆ ಮೀರಿದೆ. ಅದೃಷ್ಟಕ್ಕೆ ಇವತ್ತು ಸ್ವಲ್ಪ ಹೊಳಲು ಬಿದ್ದು ನೀರಿನ ಹರಿವು ಸಹ ಕಡಿಮೆಯಾಗಿದೆ. ಮಳೆ ಮುಂದುವರಿದಿದ್ದರೇ ಇವತ್ತು ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಿತ್ತು.

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ತುಂಗಾನದಿ ಅಬ್ಬರ

 

ಆದಾಗ್ಯು ನಿನ್ನೆ ದಿನದ ತುಂಗಾನದಿಯ ಅಬ್ಬರದಿಂದಾಗಿ ಹಲೆವೆಡೆ ನೀರು ಮನೆ ಬಾಗಿಲವರೆಗೂ ನುಗ್ಗಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಿಬ್ಬಂದಿ ಜನರನ್ನ ಎಚ್ಚರಿಸುವ ಹಾಗೂ ಪ್ರವಾಹ ಸನ್ನಿವೇಶ ಎದುರಿಸುವ ಕೆಲಸ ಮಾಡಿದೆ. 

 

ತುಂಗಾ ನದಿ ಭರ್ತಿ | ಆದರೂ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಅನುಮಾನ | ಕಾರಣವೇನು

 

ತುಂಗಾ ನದಿ ಗಾಜನೂರು ಡ್ಯಾಮ್ ನ ಎಲ್ಲಾ ಗೇಟ್ಗಳನ್ನು ತೆರೆದಿದ್ದು ಅಧಿಕ ಪ್ರಮಾಣದ ನೀರು ಹೊರಗೆ ಹರಿಸಿರುವುದರಿಂದ ನದಿ ಪಾತ್ರದ ಜನರಿಗೆ ಪಾಲಿಕೆ ವತಿಯಿಂದ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. 

ಎಲ್ಲೆಲ್ಲಿ ಮುಳುಗಡೆ ಆತಂಕ

 

ನದಿಯ ಹರಿವಿನಲ್ಲಿ ಹೆಚ್ಚಳವಾದರೆ ನಗರದ ಶಾಂತಮ್ಮ ಲೇಔಟ್. ಸೀಗೆಹಟ್ಟಿ ಕುಂಬಾರ ಗುಂಡಿ. ರಾಜೀವ್ ಗಾಂಧಿ ಬಡಾವಣೆ. ಆರ್ ಟಿ ನಗರ. ನಿಸರ್ಗ ಬಡಾವಣೆ ಹಾಗೂ ವಿದ್ಯಾನಗರ 13 ಮತ್ತು 14ನೇ ಕ್ರಾಸಿನ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. 

 

ಹಾಗೂ ನಗರದ ರಿವರ್ ಫ್ರೆಂಡ್ ಭವನ ಬಾಪೂಜಿನಗರ ಸರ್ಕಾರಿ ಶಾಲೆ, ರಾಮಣ್ಣ ಶೆಷ್ಟಿ ಪಾರ್ಕ್. ಸೀಗೆಹಟ್ಟಿ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಹಾಗೂ ನಿನ್ನೆ ರಾತ್ರಿ 15 ಕುಟುಂಬಗಳಿಗೆ ಆಹಾರ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಮೂಲಗಳು ತಿಳಿಸಿದೆ

 

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ