ಬೈಕ್ ಚಾಲಕನ ಸುಳಿವು ಸಿಕ್ಕರೆ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಿ
Police release statement, identify man who met with accident ,Shivamogga APMC
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025
ಶಿವಮೊಗ್ಗ ಸಿಟಿಯಲ್ಲಿ ಅಪಘಾತವೆಸಗಿ ಎಸ್ಕೇಪ್ ಆದ ವ್ಯಕ್ತಿಯ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದ್ದು ಸುಳಿವು ನೀಡುವಂತೆ ಮನವಿ ಮಾಡಿದೆ. ಪೊಲೀಸ್ ಪ್ರಕಟಣೆಯ ವಿವರ ಹೀಗಿದೆ. ಶಿವಮೊಗ್ಗ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಕಳೆದ ಡಿಸೆಂಬರ್ 12 ರಂದು ಅಪರಿಚಿತ ಬೈಕ್ ಚಾಲಕ ಅತೀ ವೇಗದಿಂದ ಬಂದು ಕೆಎ-14 ಇಎ 2425 ಹೀರೋ ಹೊಂಡ ಕಂಪೆನಿಯ ಪ್ಯಾಷನ್ ಪ್ರೋ ಸವಾರರಾದ ಎನ್ ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಪರಾರಿಯಾಗಿರುತ್ತಾನೆ.
ಅಪಘಾತ ಮಾಡಿದ ಮೋಟಾರ್ ಬೈಕಿನ ನಂಬರ್ ಕಾಣಿಸಿರುವುದಿಲ್ಲ, ಬೈಕಿನ ಭಾವಚಿತ್ರ ದೊರಕಿರುತ್ತದೆ. ಈ ಭಾವಚಿತ್ರದಲ್ಲಿರುವ ವ್ಯಕ್ತಿಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ದೂ. ಸಂ. 08182 261417 ಅಥವಾ ಮೊ.ನಂ 9480803346 ಗೆ ಮಾಹಿತಿ ನೀಡುವಂತೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | Police release statement to identify man who met with accident near Shivamogga APMC
KEY WORDS | Police release statement, identify man who met with accident ,Shivamogga APMC