Shimoga sp | ಶಿವಮೊಗ್ಗ ಗಣಪತಿ & ಎಸ್‌ಪಿ ಮಿಥುನ್‌ ಕುಮಾರ್‌ | ಈ ಸಲ ಬೇರೆಯದ್ದೇ ಆಟ | ಖಾಕಿ ಕಣ್ಣು!?

ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌, ಏರಿಯಾ ಡಾಮಿನೇಷನ್‌, ಡ್ರೋನ್‌ ಕಣ್ಣಾವಲು, ಬ್ಯಾಡ್‌ ಕಾರೆಕ್ಟರ್ಸ್‌, ಶಾಂತಿ ಸಭೆ, ಗಣೇಶೋತ್ಸವ , Shivamogga SP Mithun Kumar, Area Domination, Drone Surveillance, Bad Characters, Shanti Sabha, Ganeshotsav

Shimoga sp | ಶಿವಮೊಗ್ಗ ಗಣಪತಿ & ಎಸ್‌ಪಿ ಮಿಥುನ್‌ ಕುಮಾರ್‌ | ಈ ಸಲ ಬೇರೆಯದ್ದೇ ಆಟ | ಖಾಕಿ ಕಣ್ಣು!?
ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌, ಏರಿಯಾ ಡಾಮಿನೇಷನ್‌, ಡ್ರೋನ್‌ ಕಣ್ಣಾವಲು, ಬ್ಯಾಡ್‌ ಕಾರೆಕ್ಟರ್ಸ್‌, ಶಾಂತಿ ಸಭೆ, ಗಣೇಶೋತ್ಸವ , Shivamogga SP Mithun Kumar, Area Domination, Drone Surveillance, Bad Characters, Shanti Sabha, Ganeshotsav

SHIVAMOGGA | MALENADUTODAY NEWS 



Sep 7, 2024   shimoga ganapati 

ಪ್ರತಿವರ್ಷ ಗಣೇಶೋತ್ಸವ ಆರಂಭವಾಗುತ್ತಲೇ ರಾಜ್ಯಸರ್ಕಾರದ ಪ್ರಮುಖ ಇಲಾಖೆ ಗೃಹಇಲಾಖೆಯಲ್ಲಿ ಕೇಳಿ ಬರುವ ಮೊದಲ ಪ್ರಶ್ನೆ ಶಿವಮೊಗ್ಗ ಎಲ್ಲಾ ಓಕೆನಾ? ನೋ ವರೀಸ್‌? ಹೌದು, ಅಷ್ಟರ ಮಟ್ಟಿಗೆ ಶಿವಮೊಗ್ಗದ ಗಣೇಶೋತ್ಸವ ಸೂಕ್ಷ್ಮತೆಯನ್ನ ಪಡೆದುಕೊಂಡಿದೆ. 

Shivamogga police ಶಿವಮೊಗ್ಗ ಪೊಲೀಸ್‌ ಇಲಾಖೆ 

ಪೊಲೀಸ್‌ ಇಲಾಖೆಯ ಹೈಪ್ರೊಫೈಲ್‌ ಮೇಲ್ವಿಚಾರಣೆಯಲ್ಲಿ ಸದಾ ಇರುವ ಶಿವಮೊಗ್ಗ ಜಿಲ್ಲೆಯಲ್ಲಿ  ಹಬ್ಬ ಆರಂಭವಾಗುವುದಕ್ಕೂ ಮೂರು ತಿಂಗಳ ಮುಂಚೆಯೆ ಹಬ್ಬದ ಶಾಂತಿಯುತ ಆಚರಣೆಗೆ ಬೇಕಿರುವ ಸಿದ್ದತೆಗಳ ತಯಾರಿ ಆರಂಭವಾಗುತ್ತದೆ. ಹೀಗೆ ಆರಂಭವಾಗುವ ತಯಾರಿ ಅಂತಿಮವಾಗಿ ಚೌತಿಗೆ ಗಣಪತಿ ಬಂದು ಮೂರು ತಿಂಗಳು ಕಳೆಯುವರೆಗೂ ಶಿವಮೊಗ್ಗದಲ್ಲಿ ಶಾಂತಿ ಸಾಧನೆಯ ತೆರೆಮರೆಯ ಕೆಲಸಗಳು ನಡೆಯುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ ಈ ಸಲ ಬೇರೆಯದ್ದೇ ನಡೆಯನ್ನ ಇಟ್ಟಿದ್ದಾರೆ ಅನ್ನೋದೇ ವಿಶೇಷ 

Sp mithun kumar ಎಸ್‌ಪಿ ಮಿಥುನ್‌ ಕುಮಾರ್‌

ಶಿವಮೊಗ್ಗ ಅಂದರೆ ಒಂದಿಷ್ಟು ವಿಶ್ವಾಸ ಹಾಗೂ ಒಂದಿಷ್ಟು ಭರವಸೆ ಹಾಗೂ ಒಂದಷ್ಟು ಅ‍ಧ್ಯಯನ ಮಾಡಿಕೊಂಡೆ ಐಪಿಎಸ್‌ ಐಎಎಸ್‌ ಅಧಿಕಾರಿಗಳು ಜಿಲ್ಲೆಗೆ ಕಾಲಿಡುತ್ತಾರೆ. ಹಾಗೆ ಶಿವಮೊಗ್ಗಕ್ಕೆ ಬಂದಿದ್ದ ಎಸ್‌ಪಿ ಮಿಥುನ್‌ ಕುಮಾರ್‌ ಹಾಗೂ ಹಿಂದಿನ ಡಿಸಿ ಸೆಲ್ವಮಣಿಯವರಿಗೆ ಶಿವಮೊಗ್ಗದ ಸೂಕ್ಷ್ಮ ರೌದ್ರತೆ ಅರ್ಥವಾಗಿ ಹೋಗಿತ್ತು. ಹೀಗಾಗಿ ಅನುಭವದ ಪಾಠದೊಂದಿಗೆ ಎಸ್‌ಪಿ ಮಿಥುನ್‌ ಕುಮಾರ್‌ ಈ ಸಲದ ಗಣೇಶನ ಆರಾಧನೆಗೆ ಸಿದ್ದರಾಗಿದ್ದಾರೆ. ಇವರಿಗೆ ಸೆಲ್ವಮಣಿಯವರ ನಂತರ ಬಂದಿರುವ ಡಿಸಿ ಗುರುದತ್ತ ಹೆಗೆಡೆ ಸಂಪೂರ್ಣ ಸಹಕಾರ ನೀಡುವ ಮೇಲ್ಪಂಕ್ತಿ ಸ್ಥಾನದಲ್ಲಿ ನಿಂತಿದ್ದಾರೆ. 

1999 ಸಭೆ ನಡೆಸಿದ ಎಸ್‌ಪಿ ಮಿಥುನ್‌ ಕುಮಾರ್‌ 

ಸಾಮಾನ್ಯವಾಗಿ ಗಣೇಶನ ಹಬ್ಬ ಬಂದಾಗ ಶಾಂತಿ ಸಭೆಗಳನ್ನ ನಡೆಸಲಾಗುತ್ತದೆ. ಮೊದಲೆಲ್ಲಾ ಒಂದತ್ತು ಪ್ರಮುಖ ಶಾಂತಿ ಸಭೆಗಳನ್ನ ನಡೆಸಿ ಎಲ್ಲಾ ಸಮುದಾಯದವರನ್ನ ಶಾಂತಿಯಿಂದ ಹಬ್ಬಗಳನ್ನ ಆಚರಿಸಿ ಎಂದು ಮನವಿಮಾಡಲಾಗುತ್ತಿತ್ತು. ಆದರೆ ಈ ಸಲ ಎಸ್‌ಪಿ ಮಿಥುನ್‌ ಕುಮಾರ್‌ 1999 ಶಾಂತಿ ಸಭೆಗಳನ್ನ ನಡೆಸಿದ್ದಾರೆ. ವಿಶೇಷವಾಗಿ ಕೇಂದ್ರಿಕೃತ ಸಭೆಗಳನ್ನ ಹೊರತು ಪಡಿಸಿ ಪೆಂಡಾಲ್‌ ಇರುವ ಕಡೆಗಳಲ್ಲಿ ಬಹುತೇಕ ಶಾಂತಿ ಸಭೆ ನಡೆದಿದೆ. 

ಆಯಾ ಏರಿಯಾದಲ್ಲಿ ದೊಡ್ಡಮನುಷ್ಯರು ಎನಿಸಿರುವ ಗುಣವಂತರನ್ನ ಕರೆಸಿ ಹೀಗೀಗೆ ಹಬ್ಬವನ್ನ ಚೆಂದ ಮಾಡಿ ಆಚರಿಸಿ , ಗಲಾಟೆ ಗಿಲಾಟೆ ಅಂತಾ ಹೋಗಬೇಡಿ, ಯಾರಾದರೂ ತೊಂದರೆ ಕೊಟ್ರೆ ನಾವಿದ್ದೀವಿ ಹೆದರಬೇಡಿ ಎಂದು ಪೊಲೀಸ್‌ ಅಧಿಕಾರಿಗಳು ಖುದ್ಧಾಗಿ ಮಾತನಾಡಿ ಬಂದಿದ್ದಾರೆ. ಖುದ್ದು ಎಸ್‌ಪಿ ಮಿಥುನ್‌ ಕುಮಾರ್‌ ಕೂಡ ಇಂತಹ ಸ್ಥಳೀಯ ಶಾಂತಿ ಸಭೆಗಳಿಗೆ ವಿಸಿಟ್‌ ಕೊಟ್ಟು ವಿ‍ಶ್ವಾಸ ಮೂಡಿಸಿದ್ದಾರೆ.  

ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ರವರು ಕೈಗೊಂಡ ಕ್ರಮಗಳ ವಿವರ ಈ ಸ್ಟೋರಿಗಳಲ್ಲಿದೆ ಓದಿ

 

Shimoga Ganapathi | ಹಬ್ಬಕ್ಕೆ ಪೊಲೀಸ್‌ ರೆಡಿ | ಹಳೆ ವಿಡಿಯೋ ನೋಡಿ ಕೇಸ್‌ | ‍‍ಪ್ಲೆಕ್ಸ್‌ಗೆ ಪರ್ಮಿಟ್‌ ಪಕ್ಕಾ | ಎಸ್‌ಪಿ ಹೇಳಿದ ಐದು ಪಾಯಿಂಟ್ಸ್‌

45 ದಿನದಲ್ಲಿ 200 ಮಂದಿಗೆ ಟೆಸ್ಟ್‌, 10 ಕೇಸ್‌ನಲ್ಲಿ 19 ಮಂದಿ ಅರೆಸ್ಟ್‌ | ಶಿವಮೊಗ್ಗ SP ಮಿಥುನ್‌ ಕುಮಾರ್‌ ಹೇಳಿದ್ದೇನು?

Shimoga police drone | ಪ್ರತಿ ಏರಿಯಾಗಳ ಆ ಪ್ಲೇಸ್‌ಗಳ ಮೇಲೆ ಪೊಲೀಸ್‌ ಡ್ರೋನ್‌ ಕಣ್ಣು | 9 ಸಾವಿರ ಮಂದಿಗೆ ಸ್ಟೇಷನ್‌ ದರ್ಶನ

BREAKING | ಶಿವಮೊಗ್ಗದ ಬ್ಯಾಡ್‌ ಕಾರೆಕ್ಟರ್ಸ್‌ಗೆ ರಾಂಗ್‌ ಟೈಂ ಸ್ಟಾರ್ಟ್‌ | 600 ಕೇಸ್‌ | ಎಸ್‌ಪಿ ಹೊಸ ಆಕ್ಷನ್‌ ಏನಿದು?ʼ

Shimoga ganja ಗಾಂಜಾ ಡ್ರೈವ್‌ 

ಗಣೇಶನ ಹಬ್ಬದ ಸಿದ್ಧತೆ ಎನ್ನುವತ್ತಿರುವಾಗಲೇ ಶಿವಮೊಗ್ಗ ಎಸ್‌ಪಿ ಗಾಂಜಾ ಡ್ರೈವ್‌ ಆರಂಭಿಸಿದರು, ಗಾಂಜಾ ಸೇವಿಸಿದವರನ್ನೆ ಹೆಚ್ಚಾಗಿ ಅಂದರ್‌ ಮಾಡಿಸಿದರು. ಗಾಂಜಾ ಸೇವಿಸಿದವರನ್ನ ಅಂದರ್‌ ಮಾಡಿದರೆ ಸಾಕಾ ಮಾರುವವರನ್ನ ಹಿಡಿಬೇಕು ಎನ್ನುವ ಸಲಹೆ ಕೇಳಿಬಂತು. ಆದರೆ ಎಸ್‌ಪಿ ಕೈಗೊಂಡ ಸಣ್ಣ ಕ್ರಮ,  ಗಾಂಜಾ ನಶೆಯಲ್ಲಿ ಎಲ್ಲಂದರಲ್ಲಿ ಗಲಾಟೆ ಮಾಡುವವರ ಸಂಖ್ಯೆ ಕಡಿಮೆಯಾಯ್ತು.

ಏರಿಯಾ ಡಾಮಿನೇಷನ್‌ 

ಇನ್ನೂ ಏರಿಯಾ ಡಾಮಿನೇಷನ್‌ ಗಸ್ತು ಮಾಡುವಾಗಲೂ ಎಸ್‌ಪಿಯುವರು ನಂಬರ್‌ ಕೇಳುತ್ತಾರೆ ಎನ್ನಲಾಗಿತ್ತು. ಆದರೆ ಎಸ್‌ಪಿ ಕಣ್‌ದೃಷ್ಟಿಯಲ್ಲಿ ಪ್ರತಿ ಏರಿಯಾದ ಬ್ಯಾಡ್‌ ಕಾರೆಕ್ಟರ್ಸ್‌ಗಳ ವಿವರ ಪೊಲೀಸ್‌ ಇಲಾಖೆಗೆ ಸುಲಭವಾಗಿ ಸಿಕ್ಕಿತ್ತು. ಏರಿಯಾ ಡಾಮಿನೇಷನ್‌ನಾಗಿ ಪ್ರತಿ ಏರಿಯಾದಲ್ಲಿ ಕಾಲ್ನಡಿಗೆ ಗಸ್ತು ತಿರುವ ಅಧಿಕಾರಿಗಳು ಸಿಬ್ಬಂದಿಗಳು ಅಲ್ಲಿನ ಜನರ ಪರಿಚಯ ಮಾಡಿಕೊಂಡರಷ್ಟೆ ಅಲ್ಲದೆ ಆ ಏರಿಯಾದ ಸಮಸ್ಯೆಗಳನ್ನ ಹತ್ತಿರದಿಂದ ಅರಿತು, ತಂಟೆ ಮಾಡುವವರ ಪೂರ್ತಿ ಜಾತಕ ಸಂಗ್ರಹಿಸಿದರು. ಈಗೇನಾದ್ರು ಕಿರಿಕ್‌ ಮಾಡಿದರೆ, ಸೀದಾ ಹೋಗೋದು ಎತ್ತಾಕ್ಕೋಂಡು ಬರೋದು ಅನ್ನುತ್ತಿದೆ ಕ್ರೈಂ ಟೀಂ. ಇದು ಏರಿಯಾ ಹವಾ ಮೇಂಟೇನ್‌ ಮಾಡುವ ಹುಡುಗರಿಗೆ ಸೈಕ್‌ ಮಾಡಿದೆ. 

Drone camera - ಡ್ರೋನ್‌ ಕ್ಯಾಮರಾ

ಏರಿಯಾ ಡಾಮಿನೇಷನ್‌ನಲ್ಲಿ 9 ಸಾವಿರ ಮಂದಿ ಇದುವರೆಗೂ ಸ್ಟೇಷನ್‌ ಗೇಟ್‌ನಲ್ಲಿ  ಕೈಕಟ್ಟಿ ನಿಂತಿದ್ದರು ಎನ್ನುವ ಅಂಕಿಅಂಶ ಸಾಮಾನ್ಯ ಏರಿಯಾಗಳಲ್ಲಿ ಎಂತೆಹ ಪರಿಣಾಮ ಬೀಳಿಸಬಹುದು ಯೋಚಿಸಿ ನೋಡಿ. ಇದಷ್ಟೆ ಅಲ್ಲದೆ ಡ್ರೋನ್‌ ಕ್ಯಾಮರಾ ಕಣ್ಣಾವಲು ಮತ್ತು ಏರಿಯಾ ಹುಡುಗರ ಮೇಲಿನ ಬ್ಯಾಡ್‌ ಕಾರೆಕ್ಟರ್ಸ್‌ ಕ್ರಮದ ಪ್ರಯೋಗ ಶಿವಮೊಗ್ಗವನ್ನು ಶಾಂತಿಗೆ ಪೂರಕವಾಗಿದೆ ಅನ್ನೋದರಲ್ಲಿ ಅನುಮಾನ ಇಲ್ಲ.  

Shimoaga galate ಶಿವಮೊಗ್ಗ ಗಲಾಟೆ 

ಎಸ್ಪಿ ಮಿಥುನ್ ಕುಮಾರ್ ಆರಂಭದಲ್ಲಿ ಶಿವಮೊಗ್ಗಕ್ಕೆ ವರ್ಗವಾಗಿ ಬಂದಾಗ ಕಹಿ ಅನುಭವಗಳನ್ನೇ ಎದುರಿಸಿದ್ದರು. ಆದರೆ ಅವರ ಬಳಿಯಲ್ಲಿ ಈಗ ಎರಡು ವರುಷದ ಅನುಭವವಿದೆ. ಅಲ್ಲದೆ ಶಿವಮೊಗ್ಗದಲ್ಲಿ ಗಲಾಟೆಗೆ ಕಾರಣವೇನು? ಅದರ ಹಿನ್ನೆಲೆ ಏನು? ಯಾರ ಕೈವಾಡ ಇರುತ್ತದೆ ಎಂಬಿತ್ಯಾದಿ ಪೂರ್ತಿ ಮಾಹಿತಿ ಕೈಯಲ್ಲಿದೆ. ರಾಜಕಾರಣದ ಪವರ್‌ ಪುಲ್‌ ಕ್ಷೇತ್ರ ಶಿವಮೊಗ್ಗದಲ್ಲಿ ರಾಗಿಗುಡ್ಡದಲ್ಲಿ ನಡೆದಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಈ ಸಲ ತಮ್ಮೆಲ್ಲಾ ಅನುಭವವನ್ನ ಧಾರೆ ಎರೆದಿರುವ ಎಸ್‌ಪಿ ಮಿಥುನ್‌ ಕುಮಾರ್‌ಗೆ ಇಡೀ ಪೊಲೀಸ್‌ ಇಲಾಖೆಯು ಸಾಥ್‌ ನೀಡುತ್ತಿದೆ. ಇದರ ಪ್ರತಿಫಲ ಸದ್ಯದಲ್ಲಿಯೇ ಗೊತ್ತಾಗಲಿದೆ. ಪರಿಶ್ರಮದ ಹೊರತಾಗಿಯು ನಡೆಯಬಾರದ್ದು ನಡೆಯದಿರಲಿ ಎನ್ನುವುದಷ್ಟೆ ಆಶಯ.  ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಿವಮೊಗ್ಗ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಎಲ್ಲಾ  ಪೊಲೀಸರಿಗೆ ಹಾಗೂ ಇಲಾಖೆಗೆ ಪೂರಕವಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಮಲೆನಾಡು ಟುಡೆಯ ಹ್ಯಾಟ್ಸಾಪ್‌

Shimoga airport latest news | ಸೆಪ್ಟೆಂಬರ್‌ 10 ಕ್ಕೆ ಏರ್‌ಪೋರ್ಟ್‌ ಲೈಸೆನ್ಸ್‌ ನಿರ್ಧಾರ ? ಸಂಸದ ಬಿವೈಆರ್‌ ಹೇಳಿದ್ದೇನು?

Vande Bharat Express Shimoga | ಮೂರು ಟ್ರೈನ್‌ ಪೈಕಿ ಶಿವಮೊಗ್ಗಕ್ಕೆ ಒಂದು ವಂದೆ ಬಾರತ್‌ ಎಕ್ಸ್‌ಪ್ರೆಸ್‌ ? ಸಂಸದರು ಏನು ಹೇಳಿದ್ರು

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ