ಶಿವಮೊಗ್ಗ RTO ಕಚೇರಿಯಲ್ಲಿ ಸಹೋದ್ಯೋಗಿ ಮೇಲೆ ಸೀನಿಯರ್ ಆಫೀಸರ್ ಹಲ್ಲೆ, ನಿಂದನೆ, ಬೆದರಿಕೆ!? ಏನಿದು FIR
senior officer assaulted junior officer at Shimoga RTO office

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 7, 2025
ಶಿವಮೊಗ್ಗ ಆರ್‌ಟಿಒ ಕಚೇರಿಯಲ್ಲಿ ಅಧಿಕಾರಿಯೇ ಇನ್ನೊಬ್ಬ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರಾ? ಹೌದು ಎನ್ನುತ್ತಿದೆ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್. ಪೊಲೀಸ್ ಎಫ್‌ಐಆರ್ ಪ್ರಕಾರ ನಡೆದ ಘಟನೆ ಮತ್ತು ಸಂತ್ರಸ್ತ ಅಧಿಕಾರಿಯ ಆರೋಪದ ವಿವರ ಹೀಗಿದೆ.
ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ (ಆರ್‌ಟಿಒ)
ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ಮಂಜುನಾಥ ಎಸ್. ಪಿ. ಎಂಬವರು ತಮ್ಮ ಮೇಲೆ ಆರ್‌ಟಿಒ ಹಿರಿಯ ನಿರೀಕ್ಷಕ ಮಲ್ಲೇಶಪ್ಪ ಪಿ.ಎನ್. ಹಲ್ಲೆ ಮಾಡಿ ನಿಂಧಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಕಳೆದ ಮಂಗಳವಾರ ಸಂಜೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಲಸದ ಕುರಿತಾಗಿ ಕರೆ ಮಾಡಿದ ಸಂದರ್ಭದಲ್ಲಿ, ಹಿರಿಯ ನಿರೀಕ್ಷಕ ಮಲ್ಲೆಶಪ್ಪರವರು ನಿಂಧಿಸಿದ್ದಷ್ಟೆ ಅಲ್ಲದೆ ಆ ಬಳಿಕ ಕಚೇರಿಗೆ ಬಂದು ಅಧಿಕಾರಿ ಮಂಜುನಾಥ್‌ರ ಕುಳಿತಿದ್ದ ಕುರ್ಚಿಯನ್ನು ಎಳೇದಾಡಿ ಎದೆ, ಕುತ್ತಿಗೆ ಹಾಗೂ ಬೆನ್ನಿಗೆ ಹೊಡೆದಿದ್ದಾರೆ. ಅಷ್ಟೆ ಅಲ್ಲದೆ ತಮ್ಮ ಬೂಟನ್ನು ಅಧಿಕಾರಿಯತ್ತ ಬಿಸಾಡಿ ನಿಂಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಇತರೇ ಸಿಬ್ಬಂದಿ ಮಲ್ಲೇಶಪ್ಪರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂಬುದು ಮಂಜುನಾಥ್‌ರವರ ದೂರಿನ ಸಾರಾಂಶ
ಈ ಘಟನೆಗೆ ಸಿಸಿ ಕ್ಯಾಮರಾದ ದೃಶ್ಯಗಳು ಸಾಕ್ಷ್ಯವಾಗಿದ್ದು, ಅದನ್ನು ಪ್ರಭಾವ ಬಳಸಿ ಡಿಲೀಟ್ ಮಾಡುವ ಸಾಧ್ಯತೆ ಇದೆ ಎಂದು ಸಹ ಅಧಿಕಾರಿ ಮಂಜುನಾಥ್ ದೂರಿದ್ದು, ಎಫ್‌ಐಆರ್ ನಲ್ಲಿ ಉಲ್ಲೇಖ ಸಹ ಮಾಡಲಾಗಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ THE BHARATIYA NYAYA SANHITA (BNS), 2023 (U/s-126(1),115(2),352,324(3),351(2)) ಅಡಿಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ಇನ್ನಷ್ಟೆ ತನಿಖೆ ನಡೆಸಬೇಕಿದೆ.
SUMMARY | senior officer assaulted junior officer at Shimoga RTO office
KEY WORDS | senior officer assaulted junior officer at Shimoga RTO office