ಮೂಟೆಗಟ್ಲೆ ಅಡಿಕೆ & ವೆಹಿಕಲ್‌ಗಳನ್ನು ಕದ್ದ ಚನ್ನಗಿರಿ, ಕೂಡ್ಲಿ , ಭದ್ರಾವತಿ ಆರೋಪಿಗಳ ಬಂಧನ

Shimoga Holehonnur Police Station, areca nut theft case,

ಮೂಟೆಗಟ್ಲೆ ಅಡಿಕೆ & ವೆಹಿಕಲ್‌ಗಳನ್ನು ಕದ್ದ ಚನ್ನಗಿರಿ, ಕೂಡ್ಲಿ , ಭದ್ರಾವತಿ ಆರೋಪಿಗಳ ಬಂಧನ
Shimoga Holehonnur Police Station, areca nut theft case,

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌ 

ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸರು ಅಡಿಕೆ ಕಳ್ಳರನ್ನು ಹಿಡಿದು ಆರು ಕ್ವಿಂಟಾಲ್‌ ಅಡಿಕೆಯನ್ನು ಜಪ್ತು ಮಾಡಿದ್ದಾರೆ.  3 ಲಕ್ಷ ರೂಪಾಯಿ ಮೌಲ್ಯದ ಅಡಕೆ, ಮೂರು ಬೈಕ್ ಹಾಗೂ ಒಂದು ಓಮಿನಿಯನ್ನು ಜಪ್ತು ಮಾಡಿರುವ ಪೊಲೀಸರು ಭದ್ರಾವತಿ ಸಾಜಿದ್ (25), ಕೂಡ್ಲಿಯ ಜಮೀರ್‌ಶೇಖ್ (24), ಚನ್ನಗಿರಿಯ ಮಹಮ್ಮದ್ ಮಹೀಬುಲ್ಲಾ (23) ರನ್ನು ಬಂಧಿಸಿದ್ದಾರೆ. 

 

ಶ್ರೀನಿವಾಸಪುರ ರಮೇಶ ಎಂಬುವರ ಮನೆಯಲ್ಲಿದ್ದ ಅಡಕೆಯನ್ನು ಇವರುಗಳು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಗಳಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ 2023ನೇ ಸಾಲಿನ ಒಂದು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, 2024ನೇ ಸಾಲಿನ ಎರಡು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಮತ್ತು ಒಂದು ಅಡಿಕೆ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 04 ಪ್ರಕರಣಗಳನ್ನು ಬೇಧಿಸಿದ್ದಾರೆ.

SUMMARY |   Shimoga Holehonnur Police Station, areca nut theft case,

KEY WORDS |  Shimoga Holehonnur Police Station, areca nut theft case,