ಹೆಂಡತಿಯನ್ನ ಕೊಂದ ಗಂಡ | ಶಿಕಾರಿಪುರದ ಘಟನೆಯ FIR ನಲ್ಲಿ ಏನಿದೆ ಗೊತ್ತಾ
Shikaripura Town murder case
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024
ಶಿಕಾರಿಪುರದ ರಾಘವೇಂದ್ರ ಬಡಾವಣೆಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಘಟನೆ ನಡೆದಿದ್ದಕ್ಕೆ ಪತ್ನಿಯ ಮೇಲಿನ ಅನುಮಾನ ಕಾರಣ ಎಂದು ಆರೋಪಿಸಲಾಗಿದೆ. ಪ್ಯಾಸೆಂಜರ್ ಆಟೋ ಓಡಿಸುತ್ತಿದ್ದ ನಾಗರಾಜ್‌ಗೆ, ಹಾಸ್ಟೆಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ತನ್ನ ಪತ್ನಿಯ ಮೇಲೆ ಅನುಮಾನವಿತ್ತು. ಇದೇ ವಿಚಾರಕ್ಕೆ ಆತ ಪತ್ನಿಯನ್ನ ಆಗಾಗ ಹೆದರಿಸುತ್ತಿದ್ದ ಎನ್ನಲಾಗಿದೆ.
ಈ ನಡುವೆ ಘಟನೆ ನಡೆದ ದಿನ ಮನೆಯಲ್ಲಿದ್ದವರೆಲ್ಲರೂ ಊಟ ಮುಗಿಸಿ ಮಲಗಿದ್ದಾರೆ. ಬೆಳಗ್ಗೆ ಮೂರರ ಜಾವಕ್ಕೆ ಎದ್ದ ನಾಗರಾಜ್ ಮಲಗಿದ್ದ ಪತ್ನಿಯ ಮೇಲೆ ಇದ್ದಕ್ಕಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಗನಿಗೆ ತಂದೆಯ ಕಾಲು ತಾಗಿ ಎಚ್ಚರವಾಗಿ ಆತ ತಾಯಿ ಮೇಲೆ ಹಲ್ಲೆಯಾಗುವುದನ್ನ ತಡೆಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಆತನ ತಲೆಗೆ ಏಟು ಬಿದ್ದಿದೆ. ಇಷ್ಟೊತ್ತಿಗೆ ನಾಗರಾಜ್ ಹಲ್ಲೆ ಮಾಡುವ ಭಯದಿಂದ ಅವರ ಪತ್ನಿ ಮಲಗಿದ್ದಲ್ಲಿಂದ ಎದ್ದು ಓಡಿದ್ದಾರೆ. ಅವರನ್ನ ಹಿಂಬಾಲಿಸಿದ ನಾಗರಾಜ್ ಬೀದಿ ಬದಿಯಲ್ಲಿ ಹೊಡೆದು ಸಾಯಿಸಿದ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಸಿಲಾಗಿದೆ.
SUMMARY | Shikaripura Town murder case
KEY WORDS | Shikaripura Town murder case