ಗೆದ್ದವರಿಗೆ ರಾಜ್ಯಭಾರ, ಸಂತ್ರಸ್ತರಿಗೆ ಸಿಗದ ಋಣಭಾರ | ಸುಮ್ಮನೆ ಕೂತರೇ ಆಗಲ್ಲ | ಏನಿದು ಶರಾವತಿ ಮಕ್ಕಳ ಕಥೆ JP ಬರೆಯುತ್ತಾರೆ

Sharavathi victims protest in malnad, Shimoga, Sharavathi river water refugees, forest land rights, state government, Linganamakki, Talaguppa, Linganamakki dam,

ಗೆದ್ದವರಿಗೆ ರಾಜ್ಯಭಾರ, ಸಂತ್ರಸ್ತರಿಗೆ ಸಿಗದ ಋಣಭಾರ | ಸುಮ್ಮನೆ ಕೂತರೇ ಆಗಲ್ಲ |  ಏನಿದು ಶರಾವತಿ ಮಕ್ಕಳ ಕಥೆ JP ಬರೆಯುತ್ತಾರೆ
Sharavathi victims protest in malnad, Shimoga, Sharavathi river water refugees, forest land rights, state government, Linganamakki, Talaguppa, Linganamakki dam,

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024  

ಭೂಮಿಹಕ್ಕಿಗೆ ಶಾಶ್ವತ ಪರಿಹಾರಕ್ಕೆ ಬೇಡಿಕೆ ಇಟ್ಟು ಸಾಗರದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಇವತ್ತಿಗೆ ನಾಲ್ಕನೇ ದಿನ. ಅಧಿಕಾರಿಗಳ ಸಂಧಾನಕ್ಕೆ ಬಗ್ಗೆ ರೈತವರ್ಗ ಇವತ್ತು ಲಿಂಗನಮಕ್ಕಿ ಕಡೆಗೆ ತಮ್ಮ ನಡೆಯನ್ನ ಆರಂಭಿಸಿದೆ.  

ಲಿಂಗನಮಕ್ಕಿ ಡ್ಯಾಮ್‌ಗೆ ಪಾದಯಾತ್ರೆ ಆರಂಭಿಸಿರುವ ರೈತರು, ಇವತ್ತು ತಾಳಗುಪ್ಪದವರೆಗೂ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಅಲ್ಲಿ  ರಾತ್ರಿ ಕಳೆದು ಬಳಿಕ ಲಿಂಗನಮಕ್ಕಿ ಜಲಾಶಯಕ್ಕೆ ತೆರಳಲಿದ್ದಾರೆ. 

ಸುಮ್ಮನೆ ಕೂತರೇ ಆಗಲ್ಲ ಎಂದ ಕಾಗೋಡು

ಈ ನಡುವೆ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಕೂಡ ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದು. ಕೇವಲ ಭಾಷಣಗಳು ಮಾಡಿಕೊಂಡು ಇದ್ದರೆ ನಮ್ಮ ಸಮಸ್ಯೆಗಳನ್ನು ಸರಿಪಡಿಸಲು ಆಗಲ್ಲ, ಹಳ್ಳಿ ಹಳ್ಳಿಗೆ ಹೋಗಿ ಸಮಸ್ಯೆಗಳ ಮಾಹಿತಿ ಪಡೆದುಕೊಂಡು ಸರ್ಕಾರಕ್ಕೆ ಒಪ್ಪಿಸುವ ಕೆಲಸ ಮಾಡಬೇಕು ತಾವೆಲ್ಲರೂ ರೆಡಿಯಾಗಿ, ನಾನು ಬರುತ್ತೇನೆ ಎಂದು ಮತ್ತೊಂದು ಹೋರಾಟಕ್ಕೆ ಮುನ್ನುಡಿ ಹಾಕಿದ್ದಾರೆ. 

ಸಾಗರದ ಹೆಚ್ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತ ಹೋರಾಟ ಸಮಿತಿ. ಮುಳುಗಡೆ ಸಂತ್ರಸ್ಥರು ಹಾಗು ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಈ  ಪ್ರತಿಭಟನೆ ನಡೆಯುತ್ತಿದೆ. 

ಶರಾವತಿ ಮುಳುಗಿಸಿದ ಕಥೆ 

ಹಿರೆಭಾಸ್ಕರ.ಡ್ಯಾಂ ನಿರ್ಮಾಣದಿಂದ ಆರಂಭವಾದ ಮುಳುಗಡೆ ಎಂಬ ಭೀತಿ ನಂತರ ಲಿಂಗನಮಕ್ಕಿ ಚಕ್ರ ಸಾವೆಹಕ್ಲು ವರಾಹಿ ಡ್ಯಾ ಯೋಜನೆ ಹೆಸರಿನಲ್ಲಿ ಸಾವಿರಾರು ಹಳ್ಳಿಗಳನ್ನು ಸ್ಥಳಾಂತರಿಸಲಾಯಿತು. ಆದರೆ ಸಂತ್ರಸ್ಥ ಕುಟುಂಬಳಿಗೆ ಆಳಿದ ಯಾವ ಸರ್ಕಾರಗಳು ಸೂಕ್ತ ಪರಿಹಾರ ನೀಡಲಿಲ್ಲ. ಈ ವಿಷಯವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಚುನಾವಣೆಗಳು ನಡೆದವೆ ಹೊರತಾಗಿ ಭೂಮಿ ಹಕ್ಕು ಸಿಗಲಿಲ್ಲ. ಇದೀಗ ಅರಣ್ಯಭೂಮಿ ಹೆಸರಲ್ಲಿ ಒಕ್ಕಲು ತೆರವು ಮಾಡುತ್ತಿರುವುದು ಶರಾವತಿ ಸಂತ್ರಸ್ತರಿಗೆ ಮತ್ತೊಂದು ರೀತಿಯ ಹಿಂಸೆಯೆ ಆಗಿದೆ.  

2012 ರಲ್ಲಿ ಜಾರಿಯಾದ ಇಂಡೀಕರಣ ವ್ಯವಸ್ಥೆ ಕಂದಾಯ ಭೂಮಿಯಲ್ಲಿದ್ದವರಿಗೆ ಮರಣ ಶಾಸನ ಬರೆಯಿತು. ಕಂದಾಯ ಭೂಮಿಯೆಲ್ಲಾ ಅರಣ್ಯ ಭೂಮಿಯಾಗಿ ಧಾಖಲೆಯಾಯ್ತು. ರೈತರು ಕಂಗಾಲಾದರು. ಬಳಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಹಕ್ಕು ಕೋರಿ ಇದೇ ಜನಗಳು ಸಲ್ಲಿಸಿದ್ದ ಸುಮಾರು 2 ಲಕ್ಷ ಅರ್ಜಿಗಳನ್ನು ಅದೇ 2012-13ರಲ್ಲಿ ಒಂದೇ ದಿನದಲ್ಲಿ ವಜಾ ಮಾಡಲಾಯಿತು.  

ಸಾಂಪ್ರದಾಯಿಕವಾಗಿ ಅರಣ್ಯ ಪ್ರದೇಶದ ಸಾಗುವಳಿಗೆ ಸಂಬಂಧಿತ ಅರ್ಜಿಗಳ ಕಥೆ ಇದಾದರೆ, ಇನ್ನು ಲಾಗಾಯ್ತಿನಿಂದಲೂ ಕಂದಾಯ ಜಮೀನಾಗಿ, ಅಲ್ಲಿ ರೈತರು ತೋಟ, ಮನೆ ಕಟ್ಡಿದ್ದ ಭೂಮಿಯನ್ನು ಇಂಡೀಕರಣ ಮಾಡಿ ಅರಣ್ಯ ಎಂದು ಘೋಷಿಸಿದ್ದರಿಂದ ಒಂದೂವರೆ ಲಕ್ಷ ಎಕರೆ ಜಮೀನು ರೈತರಿಗೆ ಯಾವ ಕಾಯ್ದೆ, ಕಾನೂನಿನಡಿಯಲ್ಲೂ ನ್ಯಾಯ ದಕ್ಕದಂತಾಯಿತು. ಇದರ ನಡುವೆ ಸುಮಾರು ಎರಡೂವರೆ ಲಕ್ಷ ಬಗರ್ ಹುಕುಂ ಸಕ್ರಮ ಕೋರಿದ ಅರ್ಜಿಗಳನ್ನು ಸರಿಸುಮಾರು ಮೂರು ದಶಕಗಳಿಂದ ಇತ್ಯರ್ಥ ಮಾಡದೇ ಪೆಂಡಿಂಗ್ ಇಡಲಾಗಿದೆ. 

ಹೀಗೆ, ಎಲ್ಲೋ ಊರು ಮನೆ ನೆಂಟರು ಅಂತಾ ಇದ್ದವರನ್ನ ಶಿವಮೊಗ್ಗ ಜಿಲ್ಲೆಯ ಒಂದೊಂದು ಮೂಲೆಯ ಸಿಕ್ಕ ಸಿಕ್ಕ ಜಾಗದಲ್ಲಿ ಮನೆ ಕಟ್ಟಿಕೊಳ್ಳಿ ಎಂದು ಆನಂತರ ದಶಕಗಳಿಂದಲೂ ಅನಾಥರಂತೆ ನಿರ್ಲರ್ಕಿಸುತ್ತಿದೆ ರಾಜಕಾರಣ ಮತ್ತದರ ವ್ಯವಸ್ಥೆ. ಶರಾವತಿ ಸಂತ್ರಸ್ತರ ಹೆಸರು ಹೇಳಿಕೊಂಡು ಹಲವರು  ರಾಜ್ಯಭಾರ ಮಾಡಿದರೆ, ಇತ್ತ ಶರಾವತಿ ನಂಬಿದ ಸಂತ್ರಸ್ಥರು ಇನ್ನೂ ಭೂಮಿಯ ಋಣಭಾರ ಪಡೆಯಲಾಗುತ್ತಿಲ್ಲ.  

 

SUMMARY | Sharavathi victims protest in malnad, Shimoga, Sharavathi river water refugees, forest land rights, state government, Linganamakki, Talaguppa, Linganamakki dam, 

KEYWORDS | Sharavathi victims protest in malnad, Shimoga, Sharavathi river water refugees, forest land rights, state government, Linganamakki, Talaguppa, Linganamakki dam