ನಿಲುವುಗಲ್ಲನ್ನೆ ಕಿತ್ತು ನೆಲದಡಿ ಬಗೆದು ಹುಡುಕಿದರು | ಸಿಕ್ಕಿದ್ದೇನು ಗೊತ್ತಾ
Search for Nidhi , Bilginamane, Hosanagar Taluk, Shimoga District

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಿಳಗಿನಮನೆ ಸಮೀಪ ನಿದಿಗಾಗಿ ಇಲ್ಲಿನ ನಿಲುವುಗಲ್ಲನ್ನ ಹಾಳು ಮಾಡಿದ್ದಾರೆ. ಕಳೆದ ಭಾನುವಾರ ರಾತ್ರಿ ನಡೆದಿರಬಹುದಾದ ಕೃತ್ಯ ನಿನ್ನೆ ಬೆಳಕಿಗೆ ಬಂದಿದೆ. 7 ಅಡಿ ಎತ್ತರದ ನಿಲುವುಗಲ್ಲನ್ನು ಕಿತ್ತ ದುಷ್ಕರ್ಮಿಗಳು ಅದರ ಬುಡದಲ್ಲಿ ಗುಂಡಿ ತೋಡಿ ಹುಡುಕಾಡಿದ್ದಾರೆ. ಅಲ್ಲದೆ ಇದಕ್ಕಾಗಿ ಪೂಜೆ ಮಾಡಿರುವ ಕುರುಹುಗಳು ಕಾಣ ಸಿಕ್ಕಿವೆ. ಚಕ್ರಾನಗರಕ್ಕೆ ಸಾಗುವ ರಸ್ತೆ ಪಕ್ಕದಲ್ಲಿ ಈ ಘಟನೆ ನಡೆದಿದೆ. ಬಿದನೂರು ಹಾಗೂ ಸುತ್ತಮುತ್ತ ನಿಧಿ ಶೋಧದ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಪೊಲೀಸ್ ಇಲಾಖೆ ತುಸು ಎಚ್ಚರ ವಹಿಸಬೇಕಿದೆ. ನಿಧಿ ಶೋಧದ ಹೆಸರಿನಲ್ಲಿ ಐತಿಹಾಸಿಕ ಕುರುಹುಗಳನ್ನ ನಾಶಪಡಿಸುತ್ತಿರುವುದರ ಹಿಂದೆ ಬೇರೆಯದ್ದೆ ಹುನ್ನಾರು ಇದ್ದರು ಇರಬಹುದು ಎನ್ನುತ್ತಾರೆ ಸ್ಥಳೀಯರು
SUMMARY | Search for Nidhi near Bilginamane, Hosanagar Taluk, Shimoga District
KEY WORDS |Search for Nidhi , Bilginamane, Hosanagar Taluk, Shimoga District