Sagara | ಆವಿನಹಳ್ಳಿ ಬಳಿ ಬೈಕ್‌ ಹಾಗೂ ಟಿಪ್ಪರ್‌ ನಡುವೆ ಡಿಕ್ಕಿ | ಓರ್ವ ವಿದ್ಯಾರ್ಥಿ ಸಾವು, ಇನ್ನೊಬ್ಬ ಗಂಭೀರ

Sagara | Bike collides with tipper near Avinahalli | Riders are serious

Sagara  | ಆವಿನಹಳ್ಳಿ ಬಳಿ ಬೈಕ್‌ ಹಾಗೂ ಟಿಪ್ಪರ್‌ ನಡುವೆ ಡಿಕ್ಕಿ |  ಓರ್ವ ವಿದ್ಯಾರ್ಥಿ ಸಾವು, ಇನ್ನೊಬ್ಬ ಗಂಭೀರ
Sagara, Bike collides , Avinahalli, ಸಾಗರ ತಾಲ್ಲೂಕು, ಬೈಕ್‌ ಅಪಘಾತ

SHIVAMOGGA | MALENADUTODAY NEWS | Aug 8, 2024

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆವಿನಹಳ್ಳಿ ಬಳಿ ಬೈಕ್‌ ಹಾಗೂ ಟಿಪ್ಪರ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮವಾಗಿ ಓರ್ವ ಪದವಿ ವಿದ್ಯಾರ್ಥಿ ಸಾವನ್ನಪ್ಪಿದ್ದು ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ  

ಸಾಗರ ತಾಲೂಕಿನ ಆವಿನಹಳ್ಳಿ ಸರ್ಕಲ್ ಬಳಿ ಈ ಘಟನೆ ಸಂಭವಿಸಿದೆ.  ಸಾಗರದಿಂದ ಆವಿನಹಳ್ಳಿ ಕಡೆಗೆ ಬರುತ್ತಿದ್ದ ಟಿಪ್ಪರ್ ಹಾಗೂ ಆವಿನಹಳ್ಳಿ ಯಿಂದ ಸಾಗರದ ಕಡೆ ತೆರಳುತ್ತಿದ್ದ ಬೈಕ್ ಮಧ್ಯೆ ಡಿಕ್ಕಿಯಾಗಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಇನ್ನೂ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಬೈಕ್‌ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು, ಇಬ್ಬರ ಪೈಕಿ ಓರ್ವನನ್ನ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಗಿತ್ತು. ಆದರೆ ಆತ ದಾರಿ ಮಧ್ಯೆ ಸಾವನ್ನಪ್ಪಿದ್ದ  ಕಟ್ಟಿನಕಾರು ಗ್ರಾಮದ ಸಚಿನ್ ಕೆ.ಪಿ. (18) ಮೃತ ಯುವಕ

ಇನ್ನೂ ಮತ್ತೊಬ್ಬ ಗಾಯಾಳು ಸುಮಂತ್ ಸ್ಥಿತಿ ಗಂಭೀರವಾಗಿದ್ದು, ಆತನನ್ನ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ