ಸಾಗರ ಪೊಲೀಸರಿಂದ ಶಿವಮೊಗ್ಗ ಸಿಟಿಯ ಇಬ್ಬರು ಅರೆಸ್ಟ್ | ಫಾರ್ಚನೂರ್ ಕಾರ್ ಜಪ್ತಿ ! ನಡೆದಿದ್ದೇನು?
Sagar Town police have arrested two persons from Shivamogga in connection with a cattle theft case and seized a Fortuner car.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 9, 2024
ಸಾಗರ | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ದನಗಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.
ಸಾಗರ ಪಟ್ಟಣ ವ್ಯಾಪ್ತಿಯ ಶಿವಪ್ಪನಾಯಕ ನಗರದ ಆಶ್ರಮ ಶಾಲೆ ಹಿಂಭಾಗದಲ್ಲಿ ಕಳೆದ ಮೇ 27ರಂದು ದನ ಕಳ್ಳತನವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 10 ಲಕ್ಷ ಮೌಲ್ಯದ ಫಾರ್ಚೂನರ್‌ಕಾರನ್ನು ಸಾಗರ ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜತೆಗೆ ಇವರ ಸಹಚರ ಮಂಗಳೂರು ಮೂಲದ ವ್ಯಕ್ತಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಾಗರ ಪಟ್ಟಣದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ದನ ಕಳವು ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ 6 ತಿಂಗಳ ಬಳಿಕ ಶಿವಮೊಗ್ಗ ನಗರದ ಬೈಪಾಸ್ ಬಳಿಯ ಮೆಹಬೂಬ್ ನಗರದ ಗುಜರಿ ವ್ಯಾಪಾರಿ ಮೊಹಮ್ಮದ್ ಸಲ್ಮಾನ್ (19) ಹಾಗೂ ವಾದಿಹುದಾ 2ನೇ ತಿರುವಿನ ನಿವಾಸಿ ಸ್ಟಿಕ್ಚರ್ ಕಟಿಂಗ್ ಮಾಡುತ್ತಿದ್ದ ಮೊಹಮ್ಮದ್ ಮುಶೀರ್ (25)ನನ್ನು ಬಂಧಿಸಿದ್ದಾರೆ.
ಇವರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ, ಸೊರಬ, ಕುಂಸಿ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
SUMMARY | Sagar Town police have arrested two persons from Shivamogga in connection with a cattle theft case and seized a Fortuner car.
KEYWORDS | Sagar Town police, arrested two persons from Shivamogga, cattle theft case , seized a Fortuner car,