ಪರೀಕ್ಷೆ ಫೇಲಾಗುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡನೇ ವಿದ್ಯಾರ್ಥಿ?

SSLC student commits suicide

ಪರೀಕ್ಷೆ ಫೇಲಾಗುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡನೇ ವಿದ್ಯಾರ್ಥಿ?
SSLC student commits suicide

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಚಿಕ್ಕಮಣತಿ ಗ್ರಾಮದಲ್ಲಿ SSLC ವಿದ್ಯಾರ್ಥಿಯೊಬ್ಬ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ FIR ದಾಳಲಾಗಿದೆ. 

ಹೊಸನಗರ ತಾಲ್ಲೂಕು ಚಿಕ್ಕಮಣತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಅನುದೀಪ್‌ ಮೃತ ವಿದ್ಯಾರ್ಥಿ. ಈತನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇತ್ತು ಎನ್ನಲಾಗಿದ್ದು ಇದೆ ಕಾರಣಕ್ಕೆ ಈತನಿಗೆ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದರು. 

ಈ ನಡುವೆ ಕಳೆದ 15 ನೇ ತಾರೀಖು ವಿದ್ಯಾರ್ಥಿಯು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದನ್ನ ನೋಡಿದ ಒಬ್ಬರು ವಿಚಾರಿಸಿದ್ದಾರೆ. ಅವರಿಗೆ ತಾನು ಕಳೆನಾಶಕ ಸೇವಿಸಿರುವುದಾಗಿ ವಿದ್ಯಾರ್ಥಿ ಹೇಳಿದ್ದ. ತಕ್ಷಣವೇ ಆತನನ್ನ ಆಸ್ಪತ್ರೆಗೆ ರವಾನಿಸಿ, ಅಲ್ಲಿಂದ ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಪರೀಕ್ಷೆಯ ಭಯಕ್ಕೆ ಹೀಗೆ ಮಾಡಿಕೊಂಡಿದ್ದಾಗಿ ವಿದ್ಯಾರ್ಥಿಯು ಹೇಳಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

SUMMARY | SSLC student commits suicide at Chikkamanati village in Hosanagara taluk 

KEY WORDS | SSLC student commits suicide , Chikkamanati village , Hosanagara taluk