Shivamogga | ಹಬ್ಬದ ಟೈಂನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ಗಳನ್ನ ಹಾಕಿದ್ರೆ ಕೇಸ್ ಪಕ್ಕಾ | ಶಾಂತಿ ಸಭೆಯಲ್ಲಿ ಎಸ್‌ಪಿ ಹೇಳಿದ್ದೇನು?
ಸೋಶಿಯಲ್ ಮೀಡಿಯಾಲ್ಲಿ ಪ್ರಚೋದಕಾರಿ ಹಾಗೂ ಸುಳ್ಳು ಪೋಸ್ಟ್‌ಗಳನ್ನ ಹಾಕಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದಾರೆ SP Mithun Kumar said action will be taken against those who post provocative and false posts on social media ...
SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ
ಶಿವಮೊಗ್ಗ ಪೊಲೀಸ್ ಇಲಾಖೆ ಮುಂಬರುವ ಗಣೇಶೋತ್ಸವ (ganeshotsav 2024) ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಸಂಬಂಧ ಪೂರ್ತ ತಯಾರಿ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಹಲವೆಡೆ ಶಾಂತಿ ಸಭೆಗಳನ್ನ ನಡೆಸಲಾಗುತ್ತಿದೆ. ಸಭೆಗಳಲ್ಲಿ ಎಸ್‌ಪಿ ಮಿಥುನ್ ಕುಮಾರ್ ಸಾರ್ವಜನಿಕರಿಗೆ ಹಬ್ಬಗಳನ್ನು ವಿಶೇಷವಾಗಿ ಆಚರಿಸೋಣ ಎಂದು ಸಲಹೆ ನೀಡುತ್ತಿದದ್ದಾರೆ.
ವೈರಲ್ ಪೋಸ್ಟ್ ಹಾಕಿದರೆ ಕ್ರಮ
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೋ ನಡೆದಂತಹ ಘಟನೆಗಳನ್ನು ಇಲ್ಲಿಯೇ ನಡೆದಿದೆ ಎಂಬ ರೀತಿಯಲ್ಲಿ ಬಿಂಬಿಸಿ ಪೋಸ್ಟ್ ಮಾಡುವುದು ಹಾಗೂ ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ಫೋಟೋ ಮತ್ತು ಮಾಹಿತಿಯನ್ನು ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಟ್ಯಾಗ್ ಮಾಡುವುದು ಅಪರಾಧವಾಗುತ್ತದೆ ಅಂತಹ ವಿಚಾರಗಳಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪ್ರಚೋಧನಕಾರಿ ಪೋಸ್ಟ್ ಹಾಕುವುದನ್ನ ಯಾರಾದರೂ ಗಮನಿಸಿದರೇ ಅದನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಬಹುದಾಗಿದೆ. ಇಂತಹ ಕುಕೃತ್ಯವೆಸಗಿದ ವ್ಯಕ್ತಿಗಳು ಕಠಿ ಕ್ರಮಗಳನ್ನ ಎದುರಿಸಬೇಕಾಗುತ್ತದೆ ಎಂದು ಎಸ್‌ಪಿಯವರು ತಿಳಿಸಿದ್ದಾರೆ.
ಎಸ್‌ಪಿ ಮಿಥುನ್ ಕುಮಾರ್
ಇಷ್ಟೆ ಅಲ್ಲದೆ ಹಬ್ಬಗಳ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲಿನ ದಾನಾ ಫ್ಯಾಲೇಸ್ ಸಭಾ ಭವನದಲ್ಲಿ, ಗಣೇಶ ಪ್ರತಿಷ್ಠಾಪನಾ ಸಮಿತಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರ ಸಭೆ ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
1) ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಎರಡೂ ಧರ್ಮಗಳಿಗೆ ಪವಿತ್ರವಾದ ಹಬ್ಬಗಳಾಗಿರುತ್ತವೆ. ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಕಾನೂನಿನ ಚೌಕಟ್ಟಿನ ಒಳಗೆ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ.
2) ಹಬ್ಬವನ್ನು ಪೈಪೋಟಿಯ ರೀತಿ ಆಚರಿಸದೇ ಹಬ್ಬಗಳ ಮಹತ್ವ ಮತ್ತು ಹಿನ್ನೆಲೆಯನ್ನು ಅರಿತು ಹಬ್ಬಗಳನ್ನು ಆಚರಿಸಿದಾಗ ಮಾತ್ರ ಯಾವುದೇ ಸಮಸ್ಯೆಗಳಿಲ್ಲದೇ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ. ಬೇರೆಡೆಗಳಲ್ಲಿ ಆದಂತಹ ಘಟನೆಗಳು ಈ ಪ್ರದೇಶದಲ್ಲಿ ಸಂಭವಿಸುವುದು ಬೇಡ ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಯ ಸಭೆಗಳನ್ನು ಆಯೋಜಿಸಲಾಗುತ್ತಿದೆ.
3) ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಮತ್ತು ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಎಲ್ಲರೂ ಶಾಂತ ರೀತಿಯಲ್ಲಿ ಮತ್ತು ಸಹಬಾಳ್ವೆಯಿಂದ ಹಬ್ಬ ಆಚರಣೆ ಮಾಡೋಣ.
4) ಹಬ್ಬದ ಆಚರಣೆಯ ಸಂದರ್ಭದಲ್ಲಿ ಡಿಜಿ ನಿಷೇಧಿಸಲಾಗಿದ್ದು, ಧ್ವನಿ ವರ್ಧಕಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು, ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ ನಿಗದೀಪಡಿಸಿದ ಸಮಯ ಮತ್ತು ನಿಗದಿತ ಶಬ್ದ ಮಿತಿಯಲ್ಲಿಯೇ ಧ್ವನಿ ವರ್ಧಕಗಳನ್ನು ಬಳಸುವುದು.
5) ಹಬ್ಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗುವ ಫ್ಲೆಕ್ಸ್ ಮತ್ತು ಬ್ಯಾನರ್ ಗಳಲ್ಲಿ ಯಾವುದೇ ಕಾರಣಕ್ಕೂ ಇತರ ಭಾವನೆಗಳಿಗೆ ದಕ್ಕೆಯಾಗುವಂತಹ ಮತ್ತು ಆಕ್ಷೇಪಾರ್ಹ ಹೇಳಿಕೆ / ಚಿತ್ರಗಳು ಇರಬಾರದು. ಈ ಬಗ್ಗೆ ಈಗಾಗಲೇ ಫ್ಲೆಕ್ಸ್ ಬ್ಯಾನರ್ಸ್ ಪ್ರಿಂಟರ್ಸ್ ರವರಿಗೂ ಸಹಾ ಸೂಚನೆ ನೀಡಲಾಗಿರುತ್ತದೆ. ಒಂದು ವೇಳೆ ಯಾವುದೇ ಆಕ್ಷೇಪಾರ್ಹ / ಇತರರ ಭಾವನೆಗಳಿಗೆ ನೋವುಂಟಾಗುವಂತಹ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿದರೆ ಅಥವಾ ಪ್ರಿಂಟ್ ಮಾಡಿ ನೀಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
6) ಯಾರೋ ಕೆಲವು ಜನ ಮಾಡುವ ಕಿಡಿಗೇಡಿತನದಿಂದ ಇತರರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪೋಷಕರು ಮತ್ತು ಹಿರಿಯರು ತಮ್ಮ ಮಟ್ಟದಲ್ಲಿ ಮೊದಲು ಬುದ್ದಿ ಮಾತುಗಳನ್ನು ಹೇಳಿ, ಒಂದು ವೇಳೆ ತಿದ್ದುಕೊಳ್ಳುವುದು ಕಾಣದೇ ಇದ್ದಲ್ಲಿ ಅಂತಹವರ ಬಗ್ಗೆ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ತಿಳಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ
ಇನ್ನಷ್ಟು ಸುದ್ದಿಗಳು
-
Shivamogga court | @ಜೈಲರ್ ಕೊಲೆ ಕೇಸ್ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು
-
ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್ ಔಟ್ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?
-
Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು