ಜೋಗದಲ್ಲಿ 185 ಕೋಟಿ  ಮೌಲ್ಯದ ಕಾಮಗಾರಿ | ಅಪ್‌ಡೇಟ್‌ ನೋಡಿದ ಶಾಸಕ ಬೇಳೂರು ಗೋಪಾಲಕೃಷ್ಣ

Work is being carried out at a cost of 185 crore  to develop the world famous Jog Falls, one of the famous tourist spots in Shivamogga.

ಜೋಗದಲ್ಲಿ 185 ಕೋಟಿ  ಮೌಲ್ಯದ ಕಾಮಗಾರಿ | ಅಪ್‌ಡೇಟ್‌ ನೋಡಿದ ಶಾಸಕ ಬೇಳೂರು ಗೋಪಾಲಕೃಷ್ಣ
Rs 185 crore for joga development

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 29, 2024

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಅಭಿವೃದ್ಧಿ ಪಡಿಸಲು 185 ಕೋಟಿ  ವೆಚ್ಚದ ಕಾಮಗಾರಿ ನಡೆಸಲಾಗುತ್ತಿದೆ. ಈ ಕುರಿತು ಜೋಗ ಜಲಪಾತ ಆವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಪರಿಶೀಲನೆ ನಡೆಸಿ ಮಾಹಿತಿ ನೀಡಿದರು.

ಜೋಗದ ಅಭಿವೃದ್ಧಿ ಬಗ್ಗೆ ಶಾಸಕರು ನೀಡಿದ ಮಾಹಿತಿ ಏನು

ಈಗಾಗಲೆ 95 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ನಡೆಯುತ್ತಿದೆ. ಉಳಿದ 99.54 ಕೋಟಿ ಹಣ ಸದ್ಯ ಬಿಡುಗಡೆಯಾಗಲಿದ್ದು, ಅದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಜೋಗ ಜಲಪಾತಕ್ಕೆ  ಪ್ರವಾಸಿಗರು  ನಿರಂತರವಾಗಿ  ಭೇಟಿ ನೀಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ರೈನ್ ಡ್ಯಾನ್ಸ್, ಉದ್ಯಾನವನ, ಈಜುಕೊಳ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ದಿ ಕೆಲಸ ಕೈಗೊಳ್ಳಲಾಗುತ್ತಿದೆ .ಜೋಗ ಪ್ರವೇಶ ಮಾಡುವ ರಸ್ತೆಯನ್ನು 2 ವೇ ರಸ್ತೆಯಾಗಿಸುವುದು, ತ್ರಿಸ್ಟಾರ್ ಹೋಟೆಲ್, ಜಿಪ್ ಲೈನ್,  ತಲಕಳಲೆ ಡ್ಯಾಂನಲ್ಲಿ ಬೋಟಿಂಗ್ ಹೀಗೆ ಹಲವು ಯೋಜನೆ ಇದೆ ಎಂದರು.

ಇದನ್ನೂ ನೋಡಿ...

SUMMARY| Work is being carried out at a cost of 185 crore  to develop the world famous Jog Falls, one of the famous tourist spots in Shivamogga.

 

KEYWORDS| Jog Falls, shivamogga, sagara,