BIGNEWS | ಶಿವಮೊಗ್ಗದಲ್ಲಿ ಹೆಬ್ಬಟ್ಟು ಮಂಜನ ಹುಡುಗರ ಓಡಾಟ? ಆ ಪವಿತ್ರ ಕ್ಷೇತ್ರದಲ್ಲಿ ಟಾರ್ಗೆಟ್ ಯಾರು? JP STORY
Rowdy activities resume in Shivamogga, Cold war between, Hebbettu Manja ,Navule Anand, Handianni murder case,
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಶಿವಮೊಗ್ಗದಲ್ಲಿ ಮತ್ತೆ ಆರಂಭವಾಗಿರುವ ರೌಡಿ ಪಟಾಲಂನ ಸಂಚಿನ ವಿಚಾರದ ಬಗ್ಗೆ ಮಲೆನಾಡು ಟುಡೆಗೆ ಎಕ್ಸ್‌ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ. ಹೌದು ಶಿವಮೊಗ್ಗದಲ್ಲಿ ಮತ್ತೆ ಹೆಬ್ಬೆಟ್ಟು ಮಂಜ ಹಾಗೂ ನವುಲೆ ಆನಂದ ನಡುವೆ ಕೋಲ್ಡ್ ವಾರ್ ಪ್ರಾರಂಭವಾಗಿದೆಯಾ? ಹೀಗೊಂದು ಅನುಮಾನಕ್ಕೆ ಪೂರಕವೆಂಬತೆ ಹಲವು ಮಾಹಿತಿಗಳು ಲಭ್ಯವಾಗಿದೆ. ರಿಯಲ್ ಎಸ್ಟೇಟ್ ವಿಚಾರದಲ್ಲಿ ಈ ಹಿಂದೆ ತಲೆಹಾಕಿದ್ದ ಹೆಬ್ಬೆಟ್ಟು ಮಂಜ, ಆ ಬಳಿಕ ಹಂದಿ ಅಣ್ಣಿ ಕೊಲೆ ಘಟನೆ ನಂತರ ನವುಲೆ ಆನಂದನಿಗೆ ಸೆಡ್ಡುಹೊಡೆದಿದ್ದ. ಆನಂತರ ಪ್ರತಿಕಾರದ ಅಟ್ಯಾಕ್ ನಡೆದು ರೌಡಿ ಪಟಾಲಂ ಸೈಲೆಂಟ್ ಆಗಿತ್ತು.
ಈತ ಸೈಲೆಂಟ್ ಆತ ವೈಲೆಂಟ್
ಇದರ ನಡುವೆ ಕ್ರೈಂಲೋಕದಿಂದ ದೂರವಾಗಿರುವ ನವುಲೆ ಆನಂದನನ್ನ ಹೆಬ್ಬೆಟ್ಟು ಮಂಜನ ಟೀಂ ಫಾಲೋ ಮಾಡುತ್ತಿದೆ, ಆತನ ಚಟುವಟಿಕೆಗಳ ಬಗ್ಗೆ ಹುಡುಗರು ನಿಗಾವಹಿಸುತ್ತಿದ್ದಾರೆ ಎಂಬ ಮಾಹಿತಿಯೊಂದು ಮಲೆನಾಡು ಟುಡೆಗೆ ಲಭ್ಯವಾಗಿದೆ. ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಲಿಮಿಟ್ಸ್‌ನಲ್ಲಿ ನವುಲೆ ಆನಂದ ಇದ್ದಾನೆ. ತಮ್ಮ ಕುಟುಂಬದ ಹಿರಿಯರ ಮನೆಯಲ್ಲಿರುವ ಆತ, ರೌಡಿ ಚಟುವಟಿಕೆಗಳಿಂದ ಹಿಂದೆ ಸರಿದು ತಾನಾಯ್ತು ತನ್ನ ಸಂಸಾರವಾಯ್ತು ಎಂದು ಓಡಾಡಿಕೊಂಡಿದ್ದಾನೆ. ಈ ಬಗ್ಗೆ ಅಲ್ಲಿನ ಸ್ಥಳೀಯರು ನೀಡಿದ ಮಾಹಿತಿಯಂತೆ ನವುಲೆ ಆನಂದ ಸೈಲೆಂಟ್ ಆಗಿ ಬಹಳ ದಿನಗಳಾಗಿವೆ.
ಆದಾಗ್ಯು, ಆನಂದನ ಚಲನವಲನಗಳ ಮೇಲೆ, ಕೆಲವುದಿನಗಳಿಂದ ಒಂದಿಷ್ಟು ಹುಡುಗರು ನಿಗಾವಹಿಸ್ತಿದ್ದಾರೆ ಎಂಬ ಮಾಹಿತಿಯಿದೆ. ಮಹಾರಾಷ್ಟ್ರ ಹಾಗೂ ಗೋವಾ ರಿಜಿಸ್ಟೇಷನ್ ವಾಹನಗಳು ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಲಿಮಿಟ್ಸ್‌ನಲ್ಲಿ ಬರುವ ಹುಂಚದ ಸುತ್ತಮುತ್ತ ಓಡಾಡುತ್ತಿದೆ. ಆದರೆ ಈ ವಾಹನಗಳು ಇಲ್ಲಿನ ದೇವಾಲಯಕ್ಕಾಗಲಿ , ಪ್ರವಾಸಿ ತಾಣಕ್ಕಾಗಲಿ ಹೋಗುತ್ತಿಲ್ಲ. ರೋಡ್ ಸೈಡ್‌ನಲ್ಲಿ ನಿಂತು ಆನಂತರ ವಾಪಸ್ ಆಗುತ್ತಿವೆಯಂತೆ. ಈ ಬೆಳವಣಿಗೆಗಳನ್ನ ಗಮನಿಸಿರುವ ಸ್ಥಳೀಯರು. ಹೊರಗಿನಿಂದ ಬರುತ್ತಿರುವವರು ಯಾರು? ಯಾರಿಗಾಗಿ ಬರುತ್ತಿದ್ದಾರೆ? ಎಂಬ ಸಂಶಯದ ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸ್ ಮೂಲಗಳಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಮಲೆನಾಡು ಟುಡೆ ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಿದಾಗ ಹೊಸ ಹೊಸ ವಿಷಯಗಳು ಬೆಳಕಿಗೆ ಬಂದಿದೆ. ಹಂದಿ ಅಣ್ಣಿ ಮರ್ಡರ್ ಕೇಸ್‌ನ ನಂತರ ಶಿವಮೊಗ್ಗದಲ್ಲಿ ಹೆಬ್ಬೆಟ್ಟು ಮಂಜ ಮತ್ತವನ ಗ್ಯಾಂಗ್ ದೊಡ್ಡ ಪ್ರಭಾವ ಬೀರಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಇದಕ್ಕೆಲ್ಲಾ ಅವಕಾಶ ನೀಡಲಿಲ್ಲ. ಈ ನಡುವೆ ಬೇರೆ ಕುಖ್ಯಾತ ರೌಡಿಗಳು ರಿಲೀಸ್ ಆದರೂ ಸಹ, ಅವರನ್ನ ಮುಗುಮ್ಮಾಗಿಸುವಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಯಶಸ್ವಿಯಾಗಿತ್ತು. ಈ ನಡುವೆ ಇದೀಗ ಹೊರಗೆಲ್ಲೋ ಇರುವ ಹೆಬ್ಬೆಟ್ಟು ಮಂಜ ಶಿವಮೊಗ್ಗಕ್ಕೆ ಬರುವುದಕ್ಕೆ ಪ್ರಯತ್ನ ಮಾಡುತ್ತಿದ್ದಾನೆ ಎನ್ನಲಾಗಿದೆ. ಆತ ಶಿವಮೊಗ್ಗಕ್ಕೆ ಎಂಟ್ರಿಯಾಗಲು ಆತನದ್ದೆ ಆದ ಕಾರಣಗಳಿವೆ ಎನ್ನುತ್ತದೆ ಭೂಗತಲೋಕ. ವಿಷಯ ಅಂದರೆ, ಈ ಕಾರಣಕ್ಕಾಗಿಯೇ ದೊಡ್ಡ ಅಟೆಂಪ್ಟ್‌ವೊಂದಕ್ಕೆ ಆತ ಸಿದ್ದವಾಗುತ್ತಿದ್ದಾನಂತೆ. ಅದರ ಭಾಗವೇ ಹುಡುಗರ ಓಡಾಟ ಎನ್ನುತ್ತದೆ ಗುಪ್ತ ಮೂಲಗಳ ಫಸ್ಟ್ ಹ್ಯಾಂಡ್ ಇನ್ಫಾರ್ಮೇಶನ್.
ಹೊರರಾಜ್ಯದ ಡಸ್ಟರ್ಸ್ ಓಡಾಟ ಶಿವಮೊಗ್ಗದಲ್ಲಿ ಹೊಸದೇನಲ್ಲ. ಕಳೆದ ವರ್ಷವೂ ಇದೇ ರೀತಿಯಲ್ಲಿ ಹುಡುಗರ ಓಡಾಟ ನಡೆದಿತ್ತು. ಆ ಬಗ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿ ಚೆಕ್‌ಪೋಸ್ಟ್‌ಗಳನ್ನ ಬಿಗಿ ಮಾಡಲಾಗಿತ್ತು. ಈ ಘಟನೆಯ ಹಿಂದೆಯು ಸಹ ಹೆಬ್ಬೆಟ್ಟು ಮಂಜನ ಹೆಸರು ಕೇಳಿಬಂದಿತ್ತು. ಆನಂತರ ರೌಡಿ ಚಟುವಟಿಕೆಗಳು ಸೈಲೆಂಟ್ ಆಗಿದ್ದವು. ಮೀನು ಮಾರುಕಟ್ಟೆ ಬಳಿ ನಡೆದ ಗ್ಯಾಂಗ್ ವಾರ್ ಹೊರತುಪಡಿಸಿ, ಶಿವಮೊಗ್ಗದ ತಲೆಮಾರುಗಳ ಭೂಗತಲೋಕ ಮಾತು ನಿಲ್ಲಿಸಿತ್ತು.
ಇನ್ನೂ ರೌಡಿ ಜಗತ್ತಿನ ಬ್ಯಾಟ್ಸ್‌ಮನ್‌ಗಳ ಓಡಾಟ ಗಂಭೀರವಾಗಿ ತೆಗೆದುಕೊಳ್ಳುವ ವಿಚಾರ. ಇದಕ್ಕೆ ಕಾರಣವೂ ಇದೆ. ಹಂದಿ ಅಣ್ಣಿ ಕೊಲೆಯ ಆರೋಪಿಗಳನ್ನ ಎರಡಕ್ಕಿಂತ ಹೆಚ್ಚು ಟೀಂ ವಾಚ್ ಆಂಡ್ ಗಾರ್ಡ್ ಮಾಡಿತ್ತು. ಕೋರ್ಟ್ ಆವರಣದಲ್ಲಿಯೇ ಸ್ಕೆಚ್ ರೂಪಿಸಿದ್ದ ಆರೋಪಿಗಳು ಆನಂತರ ನೆರೆಯ ಜಿಲ್ಲೆಯಲ್ಲಿ ಅಟ್ಯಾಕ್ ಮಾಡಿದ್ದರು. ಅದಾದ ಬಳಿಕ ಕೋರ್ಟ್ ಕೇಸ್ ಇರುವ ದಿನ ಮುಹೂರ್ತ ಫಿಕ್ಸ್ ಮಾಡುತ್ತಾರೆ ಎನ್ನುವುದು ಹಲವು ರೌಡಿಶೀಟರ್‌ಗಳಿಗೆ ಚಳಿಜ್ವರ ಬರಿಸಿತ್ತು. ಇದೆಲ್ಲದರ ಬೆನ್ನಲ್ಲೆ ಇದೀಗ ಶಿವಮೊಗ್ಗದ ರೌಡಿಸಂ ಪವಿತ್ರ ಕ್ಷೇತ್ರದ ಸುತ್ತಮುತ್ತ ಚಟುವಟಿಕೆಯ ರೂಪದಲ್ಲಿ ಮಾತನಾಡುತ್ತಿದೆ. ಭೂಗತಲೋಕದ ಪ್ರಮುಖ ಸಂಭಾಷಣೆಯನ್ನ ಪೊಲೀಸ್ ಇಲಾಖೆಯು ಸಹ ಆಲಿಸಿದೆ. ಹಾಗಾದರೆ ಮುಂದೇನು? ಉತ್ತರಕ್ಕೆ ಮುಂದೊಂದು ಕಾಲ ಬರುತ್ತದೆ.
SUMMARY | Rowdy activities resume in Shivamogga. Cold war between Hebbettu Manja and Navule Anand, Handianni murder case,
KEYWORDS | Rowdy activities resume in Shivamogga, Cold war between, Hebbettu Manja ,Navule Anand, Handianni murder case,