Tunga dam | ತುಂಗಭದ್ರಾ ಜಲಾಶಯದಂತೆ ತುಂಗಾ ಡ್ಯಾಮ್‌ನಲ್ಲಿಯು ರೋಪ್ ಪ್ರಾಬ್ಲಮ್ | ಮೇಲಕ್ಕೇಳದ ಗೇಟ್ | ಅಧಿಕಾರಿಗಳ ಪರಿಶೀಲನೆ
Tunga dam | Rope problem in Tunga dam like Tungabhadra reservoir | Unheard Gate | Inspection of officials
SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ತುಂಗಭದ್ರಾ ಡ್ಯಾಮ್ ನಲ್ಲಿ ಆದ ಗೇಟ್ ಸಮಸ್ಯೆಯಂತೆ ಶಿವಮೊಗ್ಗದ ಗಾಜನೂರು ಜಲಾಶಯದಲ್ಲಿಯು ಸಹ ಕ್ರಸ್ಟ್ ಗೇಟ್‌ವೊಂದರ ರೋಪ್ ಜಾಮ್ ಆಗಿತ್ತು. ಇದೇ ಕಾರಣಕ್ಕೆ 22 ಗೇಟ್‌ಗಳ ಪೈಕಿ 21 ಗೇಟ್‌ಗಳಿಂದ ನದಿಗೆ ನೀರು ನಿರಂತರವಾಗಿ ನೀರು ಬಿಡಲಾಗಿತ್ತು. ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ.
ತುಂಗಾ ಜಲಾಶಯ
ಕ್ರಸ್ಟ್ ಗೇಟ್‌ನ ರೋಪ್ ಜಾಮ್ ಆಗಿರುವುದನ್ನ ಮೊದಲೇ ಅರಿತುಕೊಂಡಿದ್ದ ಸಿಬ್ಬಂದಿ ವರ್ಗ, ಈ ಗೇಟ್‌ನ್ನ ಜುಲೈ ತಿಂಗಳಿನಲ್ಲಿ ಓಪನ್ ಮಾಡಿರಲಿಲ್ಲ. ಈ ನಡುವೆ ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್ ಆಗಿರುವ ಬೆನ್ನಲ್ಲೆ ಎದ್ದು ಕುಳಿತಿರುವ ಅಧಿಕಾರಿಗಳು ವಿವಿಧ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಅದರಂತೆ ತುಂಗಾ ಜಲಾಶಯಕ್ಕೂ ಸಹ ಕರ್ನಾಟಕ ನೀರಾವರಿ ನಿಗಮದ (Karnataka Irrigation Corporation ) ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ